ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ; 2ನೇ ದಿನವೂ ಕೊವ್ಯಾಕ್ಸಿನ್ ಲಸಿಕೆ ಇಲ್ಲ

|
Google Oneindia Kannada News

ಮುಂಬೈ, ಮೇ 10; ಕಳೆದ ಎರಡು ದಿನಗಳಿಂದ ಮುಂಬೈ ನಗರದಲ್ಲಿ ಕೊವ್ಯಾಕ್ಸಿನ್ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ. 2ನೇ ಡೋಸ್ ಲಸಿಕೆ ಪಡೆಯಲು ಜನರು ಕಾಯುತ್ತಿದ್ದು, ಲಸಿಕೆಯ ಸಂಗ್ರಹ ಇಲ್ಲವಾಗಿದೆ.

ಮುಂಬೈ ಮಹಾನಗರ ಪಾಲಿಕೆ ಭಾನುವಾರ ಲಸಿಕೆ ನೀಡುವ 105 ಕೇಂದ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆದರೆ ಇಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಮಾತ್ರ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿತ್ತು.

ಕೊವಿಶೀಲ್ಡ್ ಇಲ್ಲ, ಕೊವ್ಯಾಕ್ಸಿನ್ ಇಲ್ಲ: 4 ದಿನದಲ್ಲಿ ಲಸಿಕೆ ಎಲ್ಲ ಖಾಲಿ ಖಾಲಿ!ಕೊವಿಶೀಲ್ಡ್ ಇಲ್ಲ, ಕೊವ್ಯಾಕ್ಸಿನ್ ಇಲ್ಲ: 4 ದಿನದಲ್ಲಿ ಲಸಿಕೆ ಎಲ್ಲ ಖಾಲಿ ಖಾಲಿ!

ಭಾನುವಾರ ಸಹ ನಗರದಲ್ಲಿ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಿಲ್ಲ. ಮೊದಲ ಡೋಸ್ ಕೊವ್ಯಾಕ್ಸಿನ್ ಲಸಿಕೆ ಪಡೆದ ಜನರು ಎರಡನೇ ಡೋಸ್‌ಗಾಗಿ ಕಾಯುತ್ತಿದ್ದಾರೆ. ಆದರೆ ಲಸಿಕೆ ಸಂಗ್ರಹವಿಲ್ಲ.

ಭಾರತದಲ್ಲಿ ಕೊರೊನಾ ಸೋಂಕಿತರು ಮತ್ತು ಲಸಿಕೆ ಪಡೆದವರ ಲೆಕ್ಕ ಭಾರತದಲ್ಲಿ ಕೊರೊನಾ ಸೋಂಕಿತರು ಮತ್ತು ಲಸಿಕೆ ಪಡೆದವರ ಲೆಕ್ಕ

 Mumbai Did Not Administer Covaxin For Second Day

42 ದಿನಗಳ ಹಿಂದೆ ಮೊದಲ ಡೋಸ್ ಪಡೆದಿದ್ದೇವೆ. ಆದರೆ ಈಗ ಕೊವ್ಯಾಕ್ಸಿನ್ ಸಿಗುತ್ತಿಲ್ಲ ಎಂದು ಜನರು ಸ್ಥಳೀಯ ಆಡಳಿತದ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಹಲವಾರು ಜನರು ಈ ಕುರಿತು ಟ್ವೀಟ್ ಸಹ ಮಾಡಿದ್ದಾರೆ.

ಸುಪ್ರೀಂಕೋರ್ಟ್‌ನಲ್ಲಿ ಲಸಿಕೆ ನೀತಿ ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಲಸಿಕೆ ನೀತಿ ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ

"ನನ್ನ ತಂದೆಗೆ 63 ವರ್ಷ. 43 ದಿನಗಳ ಹಿಂದೆ ಮೊದಲ ಡೋಸ್ ಕೊವ್ಯಾಕ್ಸಿನ್ ಪಡೆದಿದ್ದಾರೆ. ಈಗ ಲಸಿಕೆ ಲಭ್ಯವಿಲ್ಲ. ದಯವಿಟ್ಟು ಸಹಾಯ ಮಾಡಿ" ಎಂದು ರೂಪೇಶ್ ಲಿಂಗಾಯತ್ ಎನ್ನುವವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಮುಂಬೈ ಮಹಾನಗರ ಪಾಲಿಕೆಯ ಅಂಕಿ-ಅಂಶದ ಪ್ರಕಾರ 1,76,505 ಜನರು ಕೊವ್ಯಾಕ್ಸಿನ್ ಲಸಿಕೆ ಪಡೆದಿದ್ದಾರೆ. ಇದರಲ್ಲಿ 1,20,167 ಜನರು ಮೊದಲ ಡೋಸ್, 56,338 ಜನರು 2ನೇ ಡೋಸ್ ಪಡೆದಿದ್ದಾರೆ.

ಭಾನುವಾರ ಸಂಜೆಯ ತನಕ 27,00,431 ಜನರಿಗೆ ಮುಂಬೈನಲ್ಲಿ ಲಸಿಕೆ ನೀಡಲಾಗಿದೆ. ನಗರದಲ್ಲಿ ಪ್ರಸ್ತುತ 175 ಲಸಿಕೆ ನೀಡುವ ಕೇಂದ್ರಗಳಿವೆ. ಇವುಗಳಲ್ಲಿ ಮುಂಬೈ ಮಹಾನಗರ ಪಾಲಿಕೆ 81 ಕೇಂದ್ರ ನಿರ್ವಹಣೆ ಮಾಡುತ್ತಿದೆ.

English summary
Mumbai city did not administer Covaxin for the second consecutive day on Monday because of lack of stock. Till Sunday evening 27,00,431 people were vaccinated in city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X