ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವಲ್ಲದಿದ್ರೂ ತಾಯಿಯ ಶವ ತರಲು ವೈದ್ಯನ ಹರಸಾಹಸ

|
Google Oneindia Kannada News

ಮುಂಬೈ, ಫೆಬ್ರವರಿ 18: ಕೊರೊನಾದಿಂದ ಮೃತಪಡದಿದ್ದರೂ ಆಸ್ಟ್ರೇಲಿಯಾದಿಂದ ಭಾರತಕ್ಕೆ ತಾಯಿಯ ಶವವನ್ನು ತರಲು ದಂತ ವೈದ್ಯರೊಬ್ಬರು ಹರಸಾಹಸ ಪಡುತ್ತಿದ್ದಾರೆ.

ಮೂರು ವಾರಗಳ ಹಿಂದೆ ಆಸ್ಟ್ರೇಲಿಯಾದಿಂದ ಮುಂಬೈಗೆ ಮಗಳೊಂದಿಗೆ ಬರುತ್ತಿದ್ದ ರೀತಾ ಮೆಹ್ರಾ ಹೃದಯಾಘಾತದಿಂದ ವಿಮಾನದಲ್ಲೇ ಕೊನೆಯುಸಿರೆಳೆದಿದ್ದರು. ತಕ್ಷಣವೇ ಏರ್ ಚೀನಾ ವಿಮಾನವು ಝೆಂಗ್‌ಝೋ ಏರ್‌ಪೋರ್ಟ್‌ನಲ್ಲಿ ತುರ್ತು ನಿಲುಗಡೆ ಮಾಡಿದರು.

1800ರ ಗಡಿ ದಾಟಿದ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ1800ರ ಗಡಿ ದಾಟಿದ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ

ತಕ್ಷಣ ಶವವನ್ನು ಅಲ್ಲಿನ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ತಾಯಿ ಮೃತಪಟ್ಟು 24 ದಿನಗಳು ಕಳೆದರೂ ಶವವನ್ನು ನೀಡುವ ಯಾವುದೇ ಮುನ್ಸೂಚನೆ ಕಾಣುತ್ತಿಲ್ಲ ಎಂದು ದಂತ ವೈದ್ಯ ಪುನೀತ್ ಮೆಹ್ರಾ ತಮ್ಮ ಅಳಲು ತೋಡಿಕೊಂಡಿದ್ದಾರೆ.

Mumbai Dentist Fights To Get Mothers Body Back From Zhengzhou

ಆಕೆ ರಾಷ್ಟ್ರಪತಿ, ಪ್ರಧಾನಿ ಹಾಗೂ ಎಂಇಎಗೂ ಕೂಡ ಪತ್ರ ಬರೆದಿದ್ದಾರೆ.ಹೆನನ್ ಪ್ರದೇಶದಲ್ಲಿರುವ ಪ್ರಾವಿನ್ಶಿಯಲ್ ಆಸ್ಪತ್ರೆಯಲ್ಲಿ ತಾಯಿಯ ಶವವಿದೆ. ವಿಶೇಷ ವಿಮಾನವನ್ನು ಕಳುಹಿಸಿ ತಾಯಿಯ ಮೃತದೇಹವನ್ನು ತೆಗೆದುಕೊಂಡು ಬನ್ನಿ ಎಂದು ವೈದ್ಯ ಅಂಗಲಾಚಿ ಕೇಳಿಕೊಳ್ಳುತ್ತಿದ್ದಾರೆ.

ವೆಬ್‌ಸೈಟ್ ಮೂಲಕ ಮೋದಿಯವರಿಗೆ ಮನವಿ ಮಾಡಿಕೊಂಡಿದ್ದೇನೆ. ಬೀಜಿಂಗ್ ರಾಯಭಾರಿಗೂ ಕೂಡ ಇ-ಮೇಲ್ ಕಳುಹಿಸಿದ್ದೇನೆ. ನಾನು ತಕ್ಷಣವೇ ಮುಂಬೈಗೆ ವಾಪಾಸಾಗಿದ್ದೇನೆ ಆದರೆ ತಾಯಿಯ ದೇಹ ಅಲ್ಲಿಯೇ ಇದೆ.

ಕೊರೊನಾ ವೈರಸ್ ಭೀತಿ ಇರುವ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವುದು ನನಗೂ ಗೊತ್ತಿದೆ. ಆದರೆ ನನ್ನ ತಾಯಿಗೆ ಯಾವುದೇ ರೋಗವಿರಲಿಲ್ಲ. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಚೀನಾದಲ್ಲಿ 1700ಕ್ಕೂ ಹೆಚ್ಚು ಮಂದಿ ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದಾರೆ. 80 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಸುಮಾರು 20 ಕ್ಕೂ ಹೆಚ್ಚು ದೇಶಗಳನ್ನು ಕೊರೊನಾ ಆವರಿಸಿದೆ.

English summary
Mumbai-based 35-year-old dentist Puneet Mehra is hoping to perform his mother's last rites soon if the Indian authorities can find a solution to the problem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X