ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್ ಬಂದ್ ಬೆಂಬಲಿಸಿದ ಮುಂಬೈ ಡಬ್ಬಾವಾಲಾಗಳು

|
Google Oneindia Kannada News

ಮುಂಬೈ, ಡಿಸೆಂಬರ್ 08 : "ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ನೀತಿಗಳು ರೈತರ ವಿರೋಧಿಯಾಗಿವೆ. ಉತ್ತರ ಭಾರತದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ಬಂದ್‌ಗೆ ಬೆಂಬಲ ನೀಡಿದ್ದೇವೆ" ಎಂದು ಸುಭಾಷ್ ತಾಳೇಕರ್ ಹೇಳಿದರು.

ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ 11ನೇ ದಿನಕ್ಕೆ ಕಾಲಿಟ್ಟಿದೆ. ಮಂಗಳವಾರ ರೈತರು ಭಾರತ್ ಬಂದ್‌ಗೆ ಕರೆ ಕೊಟ್ಟಿದ್ದಾರೆ. ಬಂದ್‌ ಕರೆಗೆ ಹಲವಾರು ಸಂಘಟನೆಗಳು, ರಾಜಕೀಯ ಪಕ್ಷಗಳು ಬೆಂಬಲ ನೀಡಿವೆ.

ರೈತರಿಂದ ಭಾರತ್ ಬಂದ್ ಕರೆ; 5 ಅಂಶಗಳನ್ನು ತಿಳಿಯಿರಿ ರೈತರಿಂದ ಭಾರತ್ ಬಂದ್ ಕರೆ; 5 ಅಂಶಗಳನ್ನು ತಿಳಿಯಿರಿ

ಮಂಗಳವಾರದ ಭಾರತ್ ಬಂದ್‌ಗೆ ಮುಂಬೈನ ಡಬ್ಬಾವಾಲಗಳ ಸಂಘ ಬೆಂಬಲ ನೀಡಿದೆ. ಇಂದು ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ಅವರು ಬಂದ್‌ಗೆ ಬೆಂಬಲ ನೀಡುತ್ತಿದ್ದಾರೆ. ಎಲ್ಲರೂ ಬಂದ್ ಬೆಂಬಲಿಸುತ್ತಿದ್ದೇವೆ ಎಂದು ಮುಂಬೈ ಡಬ್ಬಾವಾಲ ಅಸೋಸಿಯೇಷನ್ ಅಧ್ಯಕ್ಷ ಸುಭಾಷ್ ತಾಳೇಕರ್ ತಿಳಿಸಿದ್ದಾರೆ.

ಭಾರತ್ ಬಂದ್; ಕೃಷಿ ಮಸೂದೆಯ ಪ್ರಮುಖ ಅಂಶ ತಿಳಿಯಿರಿ ಭಾರತ್ ಬಂದ್; ಕೃಷಿ ಮಸೂದೆಯ ಪ್ರಮುಖ ಅಂಶ ತಿಳಿಯಿರಿ

Mumbai Dabbawala Association Supports Bharat Bandh Call

ರೈತರ ಜೊತೆ ಮಾತುಕತೆ ನಡೆಸಿ; ಶಿವಸೇನೆ ನಾಯಕ ಸಂಜಯ್ ರಾವತ್ ಮುಂಬೈನಲ್ಲಿ ಮಾತನಾಡಿದರು. "ಸರ್ಕಾರಕ್ಕೆ ಹೃದಯ ಎಂಬುದು ಇದ್ದರೆ ನೀವು ಗೃಹ ಸಚಿವರೋ, ಪ್ರಧಾನಿಯೋ ರೈತರ ಬಳಿ ಹೋಗಿ ಮಾತುಕತೆ ನಡೆಸಿ" ಎಂದು ಒತ್ತಾಯಿಸಿದರು.

ಭಾರತ್ ಬಂದ್; ಎರಡು ದೊಡ್ಡ ರೈಲ್ವೆ ಒಕ್ಕೂಟದ ಬೆಂಬಲ ಭಾರತ್ ಬಂದ್; ಎರಡು ದೊಡ್ಡ ರೈಲ್ವೆ ಒಕ್ಕೂಟದ ಬೆಂಬಲ

"ಇಂದು ನಡೆಯುತ್ತಿರುವುದು ರಾಜಕೀಯ ಪ್ರೇರಿತ ಬಂದ್ ಅಲ್ಲ. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ರಾಜಕೀಯ ಪಕ್ಷಗಳ ಬಾವುಟ ಹಿಡಿದುಕೊಂಡಿದ್ದಾರೆಯೇ?, ರೈತರ ಜೊತೆ ನಿಲ್ಲುವುದು ನಮ್ಮ ಕರ್ತವ್ಯ. ಇದು ರಾಜಕೀಯವಲ್ಲ, ಆಗಲೂ ಬಾರದು" ಎಂದು ಸಂಜಯ್ ರಾವತ್ ಹೇಳಿದರು.

English summary
The farm laws brought will finish the farmers of the country. We will support the bandh said Mumbai Dabbawala association president Subhash Talekar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X