ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಯನ್ ಡ್ರಗ್ಸ್ ಸೇವಿಸಿರಲಿಲ್ಲ, ಗೆಸ್ಟ್ ಆಗಿದ್ರು: ವಕೀಲ ಸತೀಶ್

|
Google Oneindia Kannada News

ಮುಂಬೈ, ಅಕ್ಟೋಬರ್ 4: ''ಅರಬ್ಬಿ ಸಮುದ್ರದಲ್ಲಿ ತೇಲುತ್ತಿದ್ದ ಕ್ರೂಸರ್ ಶಿಪ್ ನಲ್ಲಿ ನಿಗದಿತ ಕಾರ್ಯಕ್ರಮಕ್ಕೆ ಅತಿಥಿಯಾಗಿ ನನ್ನ ಕಕ್ಷಿದಾರ(ಆರ್ಯನ್) ತೆರಳಿದ್ದರು, ಅವರ ಬಳಿ ನಿಷೇಧಿತ ಡ್ರಗ್ ಇರಲಿಲ್ಲ, ಅವರು ಡ್ರಗ್ಸ್ ಸೇವಿಸಿಲ್ಲ,'' ಎಂದು ಶಾರುಖ್ ಖಾನ್ ಪುತ್ರ ಆರ್ಯನ್(23) ಪರ ವಕೀಲ ಸತೀಶ್ ಮನೆಶಿಂಧೆ ವಾದಿಸಿದ್ದಾರೆ. ಆದರೆ, ಸದ್ಯಕ್ಕೆ ಸತೀಶ್ ವಾದ ಪುರಸ್ಕರಿಸಿದ ಮುಂಬೈ ನ್ಯಾಯಾಲಯವು ಮಾದಕವಸ್ತು ನಿಯಂತ್ರಣ ದಳದ ವಶಕ್ಕೆ ಆರೋಪಿಗಳನ್ನು ನೀಡಿದೆ.

ಮುಂಬೈನಿಂದ ಗೋವಾದೆಡೆಗೆ ತೆರಳುತ್ತಿದ್ದ ಕ್ರೂಸ್ ಶಿಪ್ Cordelia Cruises' Empressನಲ್ಲಿ ರೇವ್ ಪಾರ್ಟಿ ನಡೆದಿಲ್ಲ ಅದು ಮ್ಯೂಸಿಕಲ್ ನೈಟ್, ಕದ್ದು ಮುಚ್ಚಿ ಆಯೋಜನೆ ಮಾಡಿದ್ದಲ್ಲ, ಎಂದು ವಕೀಲ ವಾದಿಸಿದ್ದಾರೆ.

ಶನಿವಾರ ರಾತ್ರಿ ಮ್ಯೂಸಿಯಲ್ ವಾಯೇಜ್ ಎಂಬ ಹೆಸರಿನಲ್ಲಿ ಕ್ರೂಸ್ ಶಿಪ್‌ನಲ್ಲಿ ಬಾಲಿವುಡ್, ಫ್ಯಾಷನ್, ಉದ್ಯಮಿ ಮಂದಿಯನ್ನು ಒಳಗೊಂಡ ಈ ಪಾರ್ಟಿಯಲ್ಲಿ ನಿಷೇಧಿತ ಡ್ರಗ್ಸ್ ಸೇವನೆ, ಬಳಕೆಯಾಗುತ್ತಿದೆ ಎಂಬುದರ ಬಗ್ಗೆ ಎನ್ ಸಿ ಬಿ ಅಧಿಕಾರಿಗಳಿಗೆ ಸುಳಿವು ಸಿಕ್ಕಿ, ದಾಳಿ ನಡೆಸಿದ್ದಲ್ಲದೆ, ಆರ್ಯನ್ ಸೇರಿದಂತೆ ಸುಮಾರು 10 ಮಂದಿಯನ್ನು ಎನ್‌ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ಪಾರ್ಟಿಗೆ ಭಾರಿ ಮೊತ್ತದ ಪ್ರವೇಶ ಶುಲ್ಕ ಇದ್ದು, ಶಿಪ್ ಹತ್ತಲಾಗದ ಪೈಕಿ ಒಬ್ಬರು ಪೊಲೀಸರಿಗೆ ಈ ಬಗ್ಗೆ ಸುಳಿವು ನೀಡಿದ್ದಾರೆ ಎನ್ನಲಾಗಿದೆ.

ಭಾರತದ ಕ್ರೂಸ್ ಲೈನರ್ ಕಾರ್ಡೇಲಿಯಾ ಕ್ರೂಸ್‌ ಎಂಪ್ರೆಸ್‌ ಶಿಪ್‌ನಲ್ಲಿನ ಈ ಪಾರ್ಟಿಗೆ ಫ್ಯಾಷನ್ ಟಿವಿ, ನಮಸ್ಕಾರಾಯ್ ಸಹ ಆಯೋಜನೆ ಇದೆ.

ಎನ್‌ಸಿಬಿ ವಕೀಲ ಅದ್ವೈತ್‌ ಸೇಥ್ನಾ

ಎನ್‌ಸಿಬಿ ವಕೀಲ ಅದ್ವೈತ್‌ ಸೇಥ್ನಾ

"ಎನ್‌ಸಿಬಿಯು ಮಾದಕವಸ್ತು ಪೂರೈಕೆದಾರನೊಬ್ಬನನ್ನು ವಶಕ್ಕೆ ಪಡೆದಿದ್ದು ವಿವಿಧ ಸಂಪರ್ಕಿತರ ಬಗ್ಗೆ ಪತ್ತೆ ಹಚ್ಚಬೇಕಿದೆ. ವಾಟ್ಸಪ್‌ ಸಂದೇಶಗಳ ಮೂಲಕ ಈ ಸಂಪರ್ಕ ಕೊಂಡಿಗಳು ಕಂಡು ಬಂದಿವೆ," ಎಂದು ಎನ್‌ಸಿಬಿ ವಕೀಲ ಅದ್ವೈತ್‌ ಸೇಥ್ನಾ ವಾದಿಸಿ, ಹೆಚ್ಚಿನ ವಿಚಾರಣೆಗೆ ಆರೋಪಿಗಳನ್ನು ಎನ್‌ಸಿಬಿ ವಶಕ್ಕೆ ನೀಡುವಂತೆ ಕೋರಿದರು.

ಆರ್ಯನ್ ಪರ ವಕೀಲ ಸತೀಶ್

ಆರ್ಯನ್ ಪರ ವಕೀಲ ಸತೀಶ್

ಸಂಬಂಧಪಟ್ಟ ಅಧಿಕಾರಿಗಳು ಅವರನ್ನು ಸೂಕ್ತ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದು ಯಾವುದೇ ರೀತಿಯ ಒತ್ತಾಯವನ್ನು ಮಾಡುತ್ತಿಲ್ಲ. ಹಾಗಾಗಿ ತಾವು ಒಂದು ದಿನದ ಅವಧಿಯ ಮಟ್ಟಿಗೆ ವಶಕ್ಕೆ ಸಮ್ಮತಿಸುತ್ತೇವೆ, ರಿಮ್ಯಾಂಡ್ ಅವಧಿ ಪೂರೈಸುತ್ತಿದ್ದಂತೆ, ಜಾಮೀನು ಅರ್ಜಿ ಹಾಕಲಾಗುವುದು ಎಂದು ಆರ್ಯನ್ ಪರ ವಕೀಲ ಸತೀಶ್ ಹೇಳಿದರು.

ಆಯೋಜಿಕರಿಗೆ ಸಮನ್ಸ್

ಆಯೋಜಿಕರಿಗೆ ಸಮನ್ಸ್

ಆಯೋಜಿಕರಿಗೆ ಸಮನ್ಸ್: ಕೊರ್ಡೆಲಿಯಾ ಕ್ರೂಸಸ್ ಅಧ್ಯಕ್ಷ ಹಾಗೂ ಸಿಇಒ ಜರ್ಗನ್ ಬೈಲೊಮ್, ಎಫ್‌ಟಿವಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕಾಶಿಫ್ ಖಾನ್ ಅಲ್ಲದೆ 6 ಮಂದಿ ಆಯೋಜಕರಿಗೆ ಸಮನ್ಸ್ ನೀಡಲಾಗಿದೆ. ಆರ್ಯಾನ್ ಖಾನ್ ಸೇರಿದಂತೆ ವಶಕ್ಕೆ ಪಡೆದ 10 ಮಂದಿಯ ಸ್ಮಾರ್ಟ್ ಫೋನ್ ಜಪ್ತಿ ಮಾಡಲಾಗಿದೆ. ಸ್ಮಾರ್ಟ್ ಫೋನ್ ನಲ್ಲಿರುವ ವಾಟ್ಸಾಪ್, ಟೆಲಿಗ್ರಾಮ್, ಎಸ್ಎಂಎಸ್ ಸಂದೇಶಗಳನ್ನು ಪರಿಶೀಲಿಸಲಾಗುತ್ತಿದೆ.

ಯಾವ ಡ್ರಗ್ಸ್ ಪತ್ತೆ

ಯಾವ ಡ್ರಗ್ಸ್ ಪತ್ತೆ

ಯಾವ ಡ್ರಗ್ಸ್ ಪತ್ತೆ: ಎಕ್ಸ್ ಟಸಿ ಪಿಲ್ಸ್, ಕೊಕೈನ್, ಮೆಫೆಡ್ರೋನ್, ಚರಸ್ ಮುಂತಾದ ಮಾದಕ ದ್ರವ್ಯಗಳು ಸಿಕ್ಕಿವೆ. ನೋಂದಣಿ ಪ್ರಕಾರ ಎಂಟು ಮಂದಿ ಯುವಕರು ಇಬ್ಬರು ಯುವತಿಯರನ್ನು ವಶಕ್ಕೆ ಪಡೆಯಲಾಗಿದೆ. ಎಂಡಿಎಂಎ/ectasy, ಕೊಕೈನ್, ಎಂಡಿ(mephedrone) ಹೆಚ್ಚಿನ ಪ್ರಮಾಣದಲ್ಲಿ ಸಿಕ್ಕಿದೆ. ಕ್ರೈಂ ಸಂಖ್ಯೆ ಸಿಆರ್ 94/21 ದಾಖಲಿಸಲಾಗಿದೆ, ವಿಚಾರಣೆ ಜಾರಿಯಲ್ಲಿದೆ.

ಯಾರ ಯಾರ ವಿಚಾರಣೆ?

ಗಣ್ಯಾತಿಗಣ್ಯರ ಮಕ್ಕಳೇ ಹೆಚ್ಚಾಗಿದ್ದ ಕ್ರೂಸ್ ಶಿಪ್ ನಲ್ಲಿದ್ದವರು ಲಕ್ಷಾಂತರ ರುಪಾಯಿ ಪ್ರವೇಶ ಶುಲ್ಕ ಪಾವತಿಸಿ, ಆಹ್ವಾನದ ಮೇರೆಗೆ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ. ಶಾರುಖ್ ಖಾನ್ ಪುತ್ರ ಆರ್ಯಾನ್ ಖಾನ್ ಅಲ್ಲದೆ ಆತನ ಗೆಳೆಯರಾದ ಅರ್ಬಾಜ್ ಮರ್ಚಂಟ್(29), ಮುನ್ಮುನ್ ಧಮೇಚಾ(39), ನೂಪೂರ್ ಸಾರಿಕಾ, ಇಸ್ಮಿತ್ ಸಿಂಗ್, ಮೋಹಕ್ ಜಸ್ವಾಲ್, ವಿಕ್ರಾಂತ್ ಛೊಕರ್ ಹಾಗೂ ಗೋಮಿತ್ ಛೋಪ್ರಾ ರನ್ನು ವಿಚಾರಣೆಗೊಳಪಡಿಸಲಾಗಿದೆ.

English summary
Mumbai cruise drugs case: Aryan’s lawyer Satish Maneshinde said Aryan was invited by the organisers of the party as a special invitee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X