ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೂಸ್ ಡ್ರಗ್ಸ್ ಕೇಸ್: ಎನ್‌ಸಿಬಿಯಿಂದ ಶಾರುಖ್ ಪುತ್ರ ಆರ್ಯಾನ್ ವಿಚಾರಣೆ

|
Google Oneindia Kannada News

ಮುಂಬೈ, ಅಕ್ಟೋಬರ್ 3: ಮುಂಬೈನಿಂದ ಗೋವಾದೆಡೆಗೆ ತೆರಳುತ್ತಿದ್ದ ಕ್ರೂಸ್ ಶಿಪ್ Cordelia Cruises' Empressನಲ್ಲಿ ನಡೆದಿದೆ ಎನ್ನಲಾದ ರೇವ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದಿದ್ದು ಕಿಂಗ್ ಖಾನ್ ಶಾರುಖ್ ಪುತ್ರ ಆರ್ಯನ್ ಖಾನ್ ಎಂಬುದು ಇದೀಗ ದೃಢಪಟ್ಟಿದೆ.

ಮೋಜು ಮಸ್ತಿ ಡ್ರಗ್ಸ್ ಪಾರ್ಟಿ ಮೇಲೆ ಮಾದಕದ್ರವ್ಯ ನಿಯಂತ್ರಣ ನಿಯಂತ್ರಣ ಮಂಡಳಿ(ಎನ್ ಸಿಬಿ) ಅಧಿಕಾರಿಗಳು ನಿನ್ನೆ ರಾತ್ರಿ ದಾಳಿ ನಡೆಸಿ 10 ಮಂದಿಯನ್ನು ವಶಕ್ಕೆ ಪಡೆದುಕೊಂಡು ಮುಂಬೈಗೆ ಕರೆತಂದಿದ್ದಾರೆ. ಆದರೆ, ಇನ್ನೂ ಪ್ರಾಥಮಿಕ ಹಂತದ ವಿಚಾರಣೆ ಮಾತ್ರ ಜಾರಿಯಲ್ಲಿದ್ದು, ಯಾರೊಬ್ಬರನ್ನು ಬಂಧಿಸಿಲ್ಲ, ಚಾರ್ಜ್ ಶೀಟ್ ಹಾಕಿಲ್ಲ ಎಂದು ಎನ್ ಸಿ ಬಿ ಪ್ರಾಂತೀಯ ನಿರ್ದೇಶಕ ಸಮೀರ್ ವಾಂಖೆಡೆ ಹೇಳಿದ್ದಾರೆ.

ಯಾರ ಯಾರ ವಿಚಾರಣೆ?: ಗಣ್ಯಾತಿಗಣ್ಯರ ಮಕ್ಕಳೇ ಹೆಚ್ಚಾಗಿದ್ದ ಕ್ರೂಸ್ ಶಿಪ್ ನಲ್ಲಿದ್ದವರು ಲಕ್ಷಾಂತರ ರುಪಾಯಿ ಪ್ರವೇಶ ಶುಲ್ಕ ಪಾವತಿಸಿ, ಆಹ್ವಾನದ ಮೇರೆಗೆ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ. ಶಾರುಖ್ ಖಾನ್ ಪುತ್ರ ಆರ್ಯಾನ್ ಖಾನ್ ಅಲ್ಲದೆ ಆತನ ಗೆಳೆಯರಾದ ಅರ್ಬಾಜ್ ಮರ್ಚಂಟ್, ಮುನ್ಮುನ್ ಧಮೇಚಾ, ನೂಪೂರ್ ಸಾರಿಕಾ, ಇಸ್ಮಿತ್ ಸಿಂಗ್, ಮೋಹಕ್ ಜಸ್ವಾಲ್, ವಿಕ್ರಾಂತ್ ಛೊಕರ್ ಹಾಗೂ ಗೋಮಿತ್ ಛೋಪ್ರಾ ರನ್ನು ವಿಚಾರಣೆಗೊಳಪಡಿಸಲಾಗಿದೆ.

ಆಯೋಜಿಕರಿಗೆ ಸಮನ್ಸ್

ಆಯೋಜಿಕರಿಗೆ ಸಮನ್ಸ್: ಕೊರ್ಡೆಲಿಯಾ ಕ್ರೂಸಸ್ ಅಧ್ಯಕ್ಷ ಹಾಗೂ ಸಿಇಒ ಜರ್ಗನ್ ಬೈಲೊಮ್, ಎಫ್‌ಟಿವಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕಾಶಿಫ್ ಖಾನ್ ಅಲ್ಲದೆ 6 ಮಂದಿ ಆಯೋಜಕರಿಗೆ ಸಮನ್ಸ್ ನೀಡಲಾಗಿದೆ. ಆರ್ಯಾನ್ ಖಾನ್ ಸೇರಿದಂತೆ ವಶಕ್ಕೆ ಪಡೆದ 10 ಮಂದಿಯ ಸ್ಮಾರ್ಟ್ ಫೋನ್ ಜಪ್ತಿ ಮಾಡಲಾಗಿದೆ. ಸ್ಮಾರ್ಟ್ ಫೋನ್ ನಲ್ಲಿರುವ ವಾಟ್ಸಾಪ್, ಟೆಲಿಗ್ರಾಮ್, ಎಸ್ಎಂಎಸ್ ಸಂದೇಶಗಳನ್ನು ಪರಿಶೀಲಿಸಲಾಗುತ್ತಿದೆ.

ಯಾವ ಡ್ರಗ್ಸ್ ಪತ್ತೆ

ಎಕ್ಸ್ ಟಸಿ ಪಿಲ್ಸ್, ಕೊಕೈನ್, ಮೆಫೆಡ್ರೋನ್, ಚರಸ್ ಮುಂತಾದ ಮಾದಕ ದ್ರವ್ಯಗಳು ಸಿಕ್ಕಿವೆ. ನೋಂದಣಿ ಪ್ರಕಾರ ಎಂಟು ಮಂದಿ ಯುವಕರು ಇಬ್ಬರು ಯುವತಿಯರನ್ನು ವಶಕ್ಕೆ ಪಡೆಯಲಾಗಿದೆ. ಎಂಡಿಎಂಎ/ectasy, ಕೊಕೈನ್, ಎಂಡಿ(mephedrone) ಹೆಚ್ಚಿನ ಪ್ರಮಾಣದಲ್ಲಿ ಸಿಕ್ಕಿದೆ. ಕ್ರೈಂ ಸಂಖ್ಯೆ ಸಿಆರ್ 94/21 ದಾಖಲಿಸಲಾಗಿದೆ, ವಿಚಾರಣೆ ಜಾರಿಯಲ್ಲಿದೆ.

ಡ್ರಗ್ಸ್ ಪಾರ್ಟಿ ಬಗ್ಗೆ ತಿಳಿದಿದ್ದು ಹೇಗೆ?

ಶನಿವಾರ ರಾತ್ರಿ ಮ್ಯೂಸಿಯಲ್ ವಾಯೇಜ್ ಎಂಬ ಹೆಸರಿನಲ್ಲಿ ಕ್ರೂಸ್ ಶಿಪ್ ನಲ್ಲಿ ಬಾಲಿವುಡ್, ಫ್ಯಾಷನ್, ಉದ್ಯಮಿ ಮಂದಿಯನ್ನು ಒಳಗೊಂಡ ಈ ಪಾರ್ಟಿಯಲ್ಲಿ ನಿಷೇಧಿತ ಡ್ರಗ್ಸ್ ಸೇವನೆ, ಬಳಕೆಯಾಗುತ್ತಿದೆ ಎಂಬುದರ ಬಗ್ಗೆ ಎನ್ ಸಿ ಬಿ ಅಧಿಕಾರಿಗಳಿಗೆ ಸುಳಿವು ಸಿಕ್ಕಿತ್ತು. ಈ ಪಾರ್ಟಿಗೆ ಭಾರಿ ಮೊತ್ತದ ಪ್ರವೇಶ ಶುಲ್ಕ ಇದ್ದು, ಶಿಪ್ ಹತ್ತಲಾಗದ ಪೈಕಿ ಒಬ್ಬರು ಪೊಲೀಸರಿಗೆ ಈ ಬಗ್ಗೆ ಸುಳಿವು ನೀಡಿದ್ದಾರೆ ಎನ್ನಲಾಗಿದೆ.

ಮೂರು ದಿನಗಳ ಕ್ರೂಸ್ ಜರ್ನಿ ಜೊತೆಗೆ ಪ್ರತಿ ರಾತ್ರಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಮುಂಬೈ ನಗರದ ಸಮುದ್ರ ತೀರದಿಂದ 2 ಗಂಟೆಗೆ ಹೊರಟು ಅಕ್ಟೋಬರ್ 4 ರಂದು ವಾಪಸ್ ಎಂದು ನಿಗದಿಯಾಗಿತ್ತು.

ಫ್ಯಾಷನ್ ಟಿವಿ ಸಹ ಆಯೋಜನೆ

ಭಾರತದ ಕ್ರೂಸ್ ಲೈನರ್ ಕೊಡೆಲಿಯಾದ ಈ ಪಾರ್ಟಿಗೆ ಫ್ಯಾಷನ್ ಟಿವಿ, ನಮಸ್ಕಾರಾಯ್ ಸಹ ಆಯೋಜನೆ ಇದೆ. ಈ ಪಾರ್ಟಿಯಲ್ಲಿ ನೋ ಡ್ರಗ್ಸ್ , ಅಕ್ರಮ ಚಟುವಟಿಕೆ ಎಂದು ಮ್ಯಾನೇಜರ್ಸ್ ಪ್ರಕಟಣೆಯಲ್ಲೇ ತಿಳಿಸಿದ್ದಾರೆ. ಮಿಯಾಮಿ ಮೂಲದ ಡಿಜೆ ಸ್ಟಾನ್ ಕೊಲೆವ್, ಡೆಜೆ ಬುಲ್ ಜೆಯೆ, ಬ್ರೌನ್ ಕೋಟ್, ದೀಪೇಶ್ ಶರ್ಮ ರಿಂದ ಮ್ಯೂಸಿಕಲ್ ನೈಟ್.

ಎರಡನೇ ದಿನ ಎಫ್ ಟಿ ವಿ ಪೂಲ್ ಪಾರ್ಟಿ, ಐವರಿ ಕೋಸ್ಟ್ ಡಿಜೆ ರೌಲ್ ಕೆ, ಡೆಜೆ ಕೊಹ್ರಾ, ಮೊರೊಕ್ಕಾದ ಕಲಾವಿದರಾದ ಕಾಯ್ಜಾರಿಂದ ಮ್ಯೂಸಿಕ್ ಆಯೋಜನೆ ಇತ್ತು.

English summary
Mumbai cruise drugs case: Narcotics Control Bureau (NCB) questions Shahrukh Khan’s son Aryan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X