ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಗೆಲ್ಲಲು ಆರೆಸ್ಸೆಸ್ ರೀತಿ ಕೆಲಸ ಮಾಡಿ: ಶರದ್ ಪವಾರ್

|
Google Oneindia Kannada News

ಮುಂಬೈ, ಜೂನ್ 07: "ನಿಮಗೆ ಚುನಾವಣೆಯಲ್ಲಿ ಗೆಲ್ಲಬೇಕೆಂದಿದ್ದರೆ ಆರೆಸ್ಸೆಸ್ ರೀತಿಯಲ್ಲಿ ಕೆಲಸ ಮಾಡಿ" ಎಂದು ತನ್ನ ಸೈದ್ಧಾಂತಿಕ ವಿರೋಧಿಯನ್ನು ಎನ್ ಸಿ ಪಿ ನಾಯಕ ಶರದ್ ಪವಾರ್ ನೇರವಾಗಿಯೇ ಹೊಗಳಿದ್ದಾರೆ.

"ಪ್ರಚಾರಕ್ಕೆ ಹೋಗುವ ಮುನ್ನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪುಸ್ತಕದ ಎರಡು ಹಾಳೆಗಳನ್ನು ಒಮ್ಮೆ ತಿರುವಿ ಹಾಕಿ. ಇಂದಿನಿಂದಲೇ ಪಕ್ಷದ ಕಾರ್ಯಕರ್ತರು ಮನೆ ಮೆನೆಗೆ ತೆರಳಿ ಸಮಸ್ಯೆ ಆಲಿಸಿ, ಪ್ರಚಾರ ಮಾಡಿ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಅದು ನೆರವಾಗುತ್ತದೆ. ಈಗಿನಿಂದಲೇ ಮತದಾರರ ಮನೆಗೆ ತೆರಳಿ ಪ್ರಚಾರ ಮಾಡಿದರೆ ಚುನಾವಣೆಯ ಹೊತ್ತಲ್ಲಿ ಮಾತ್ರ ಯಾಕೆ ಮನೆಗೆ ಬರುತ್ತೀರಿ ಎಂದು ಮತದಾರ ಪ್ರಶ್ನಿಸುವ ಪ್ರಮೇಯ ಬರುವುದಿಲ್ಲ" ಎಂದು ಪವಾರ್ ಹೇಳಿದರು.

ಉತ್ತರಾಖಂಡದಲ್ಲಿ ಮದರಸಾ ಆರಂಭಿಸಲಿರುವ ಆರೆಸ್ಸೆಸ್ಉತ್ತರಾಖಂಡದಲ್ಲಿ ಮದರಸಾ ಆರಂಭಿಸಲಿರುವ ಆರೆಸ್ಸೆಸ್

Mumbai: Campaign like RSS says Sharad Pawar

"ನೀವು(ಪಕ್ಷದ ಕಾರ್ಯಕರ್ತರು) ಆರೆಸ್ಸೆಸ್ ಸ್ವಯಂಸೇವಕರು ಹೇಗೆ ಪ್ರಚಾರ ಮಾಡುತ್ತಾರೆ ಎಂಬುದನ್ನು ನೋಡಬೇಕು. ಅವರು ಐದು ಮನೆಗೆ ತೆರಳಿದರೆ, ಅದರಲ್ಲಿ ಒಂದು ಮನೆ ಮುಚ್ಚಿದ್ದರೂ, ತಮ್ಮ ಸಂದೇಶ ಆ ಮನೆಯ ಎಲ್ಲರಿಗೂ ತಲುಪುವವರೆಗೂ ಅವರು ತಮ್ಮ ಪ್ರಯತ್ನ ಬಿಡುವುದಿಲ್ಲ. ಜನರೊಂದೆಗ ಹೇಗೆ ಬೆರೆಯಬೇಕು, ಹೇಗೆ ಜನರ ವಿಶ್ವಾಸ ಗಳಿಸಬೇಕು, ಸಂಪರ್ಕ ಬೆಳೆಸಿಕೊಳ್ಳಬೇಕು ಎಂಬುದರಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಎತ್ತಿದ ಕೈ" ಎಂದು ಅವರು ಹೇಳಿದರು.

English summary
NCP leader Sharad Pawar in his latest speech praises Rashtriya Swayamsevaka Sangh,. He told, If any parties want to win elections, work like RSS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X