ಮುಂಬೈ ಮೂಲದ ಕಂಪನಿಯಿಂದ ಕೊವಿಡ್ ಲಸಿಕೆ ಪ್ರವಾಸದ ಪ್ಯಾಕೇಜ್
ಮುಂಬೈ, ನವೆಂಬರ್ 25: ಮುಂಬೈ ಮೂಲದ ಜೆಮ್ ಟೂರ್ಸ್ ಆಂಡ್ ಟ್ರಾವೆಲ್ಸ್ ಕೊವಿಡ್ ಲಸಿಕೆ ಪ್ರವಾಸಿ ಪ್ಯಾಕೇಜ್ನ್ನು ಆರಂಭಿಸುತ್ತಿದೆ.
ಯಾರು ಕೊರೊನಾ ಲಸಿಕೆಗಾಗಿ ಅಮೆರಿಕಕ್ಕೆ ತೆರಳಬಯಸುತ್ತಾರೋ ಅವರನ್ನು ಅಮೆರಿಕಕ್ಕೆ ಕೊಂಡೊಯ್ಯುತ್ತಿದೆ.
ಪಿ ಫೈಜರ್ ಕೊರೊನಾ ಲಸಿಕೆಯು ಡಿಸೆಂಬರ್ 11 ರಿಂದ ಲಭ್ಯವಾಗಲಿದ್ದು, ಕೆಲವು ವಿವಿಐಪಿ ಜನರಿಗೆ ಮಾತ್ರ ಸಿಗಲಿದೆ. ವಾಟ್ಸಾಪ್ ಮೂಲಕ ಪ್ಯಾಕೇಜ್ ವಿವರಗಳನ್ನು ನೀಡಲಿದ್ದಾರೆ.
ಭಾರತಕ್ಕೆ ಪಿಫೈಜರ್ ಕೊರೊನಾ ಲಸಿಕೆಯ ಅಗತ್ಯವಿಲ್ಲ: ಹರ್ಷವರ್ಧನ್
ಭಾರತಕ್ಕೆ ಪಿಫೈಜರ್ ಕೊರೊನಾ ಲಸಿಕೆಯ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.ದೇಶದಲ್ಲಿರುವ ಇತರೆ ಕೊರೊನಾ ಲಸಿಕೆಗಳು ಭರವಸೆಯ ಫಲಿತಾಂಶವನ್ನು ನೀಡುತ್ತಿದೆ ಹೀಗಾಗಿ ಪಿಫೈಜರ್ ಕೊರೊನಾ ಲಸಿಕೆಯ ಅಗತ್ಯ ದೇಶಕ್ಕಿಲ್ಲ ಎಂದಿದ್ದಾರೆ.
ವರದಿ ಪ್ರಕಾರ ಬಯೋ ಎನ್ ಟೆಕ್ನ ಈ ಪಿಫೈಜರ್ ಕೊರೊನಾ ಲಸಿಕೆಗೆ ಯುಎಸ್ ರೆಗ್ಯುಲೇಟರಿ ಅಥಾರಿಟಿ ಇನ್ನು ಕೂಡ ಒಪ್ಪಿಗೆ ನೀಡಿಲ್ಲ. ಹಾಗಿದ್ದಾಗ ಆ ಲಸಿಕೆಯನ್ನು ಒಪ್ಪಿಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಪ್ಯಾಕೇಜ್ ಕುರಿತು ಮಾಹಿತಿ
ಮುಂಬೈ-ನ್ಯೂಯಾರ್ಕ್-ಮುಂಬೈಗೆ 1,74,999 ರೂ ಪ್ಯಾಕೇಜ್ ಇದೆ. ಮೂರು ರಾತ್ರಿ , ನಾಲ್ಕು ದಿನ ಉಳಿಯುವುದು, ಲಸಿಕೆಯ ದರವೂ ಇದರಲ್ಲಿ ಸೇರಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಪಿಫೈಜರ್ ಲಸಿಕೆ ಶೇ.95ರಷ್ಟು ಪರಿಣಾಮಕಾರಿ
ಪಿಫೈಜರ್ ಇಂಕ್, ಜರ್ಮನ್ ಪಾರ್ಟ್ನರ್ ಬಯೋಎನ್ಟೆಕ್ ಲಸಿಕೆಯು ಶೇ.95ರಷ್ಟು ಪರಿಣಾಮಕಾರಿ ಹಾಗೂ ಸುರಕ್ಷಿತವಾಗಿದೆ. ಪಿಫೈಜರ್ನ್ನು ಈಗಾಗಲೇ ಅಮೆರಿಕವು ತುರ್ತು ಸಮಯದಲ್ಲಿ ಬಳಕೆ ಮಾಡಲು ಅನುಮತಿ ನೀಡುವಂತೆ ಕೇಳಿದೆ.

ಮೊದಲು ಬಂದವರಿಗೆ ಆದ್ಯತೆ
ಮೊದಲು ಬಂದವರಿಗೆ ಮೊದಲ ಆದ್ಯತೆ ವ್ಯವಸ್ಥೆ ಇರಲಿದ್ದು, ಯಾರೂ ಬೇಗ ಪ್ಯಾಕೇಜ್ನ್ನು ಬುಕ್ ಮಾಡುತ್ತಾರೋ ಅವರಿಗೆ ಅವಕಾಶ ದೊರೆಯಲಿದೆ. ನೀವು ನಿಮ್ಮ ಹೆಸರು, ಇ-ಮೇಲ್, ಮೊಬೈಲ್ ನಂಬರ್, ವಯಸ್ಸನ್ನು ನಮೂದಿಸಿ ನೋಂದಾಯಿಸಬೇಕು.

ಅಮೆರಿಕ ಆರೋಗ್ಯ ಸಚಿವಾಲಯದಿಂದ ಅನುಮತಿ
ಈ ಲಸಿಕೆ ಪ್ರವಾಸಿ ಪ್ಯಾಕೇಜ್ಗೆ ಅಮೆರಿಕದ ಆರೋಗ್ಯ ಸಚಿವಾಲಯದಿಂದಲೂ ಅನುಮತಿ ಪಡೆಯಲಾಗಿದೆ. ಪ್ರತಿಯೊಂದು ಅಮೆರಿಕದ ಕಾನೂನು ಪ್ರಕಾರವೇ ನಡೆಯಲಿದೆ. ಲಿಸ್ಟ್ನ್ನು ತಯಾರಿಸಲಾಗುತ್ತಿದ್ದುಲ, ಅಮೆರಿಕವು ವಿದೇಶಿಯರಿಗೆ ಕೊರೊನಾ ಲಸಿಕೆಯನ್ನು ಪಡೆಯುವುದಕ್ಕೆ ಅವಕಾಶ ಕಲ್ಪಿಸಿದ ತಕ್ಷಣವೇ ತೆರಳಲಾಗುವುದು. ಎಲ್ಲರಿಗೂ ಅವರ ಕುಟುಂಬದ ಸದಸ್ಯರ ಬಗ್ಗೆ ಪ್ರೀತಿ ಇರುತ್ತದೆ.
ಜೆಮ್ ಟೂರ್ಸ್ ಆಂಡ್ ಟ್ರಾವೆಲ್ಸ್ ಕಚೇರಿಯು ದೆಹಲಿ, ಗುಜರಾತ್, ಚೆನ್ನೈ, ಪುಣೆ ಹಾಗೂ ಬೆಂಗಳೂರಿನಲ್ಲಿದೆ.