ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಔಟ್ ಆಫ್ ದಿ ಬಾಕ್ಸ್ ಯಶಸ್ವೀ ಪ್ರಯೋಗ: ನೂರಕ್ಕೆ 100 ಗುಣಮುಖರಾದ ಕೊರೊನಾ ಸೋಂಕಿತರು

|
Google Oneindia Kannada News

ಮುಂಬೈ, ಜುಲೈ 9: ಇತ್ತೀಚೆಗೆ ಏಷ್ಯಾದ ಅತಿದೊಡ್ಡ ಕೊಳೆಗೇರಿ ಧಾರಾವಿಯಲ್ಲಿ ಹೇಗೆ ಕೂರೊನಾ ಸೋಂಕು ಕಮ್ಮಿಯಾಗುತ್ತಿದೆ ಎನ್ನುವುದು ದೊಡ್ಡ ಸುದ್ದಿಯಾಗಿತ್ತು. ಧಾರಾವಿ ಫಾರ್ಮುಲಾವನ್ನೇ, ಮುಂಬೈನ ಇತರ ಭಾಗದಲ್ಲಿ ಪ್ರಯೋಗಿಸಲು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ನಿರ್ಧರಿಸಿತ್ತು.

Recommended Video

Rohit Sharma ಟಿ20ಗೆ ನಾಯಕನಾಗಲಿ | T20 Captain? | Oneindia Kannada

ಈಗ ದೇಶದ ವಾಣಿಜ್ಯ ನಗರಿ ಮುಂಬೈನಿಂದ ಮತ್ತೊಂದು ಪಾಸಿಟೀವ್ ಸುದ್ದಿ ಬಂದಿದೆ. ಇದು ಪಾಸಿಟೀವ್ ಆಗಿದ್ದ ಕೊರೊನಾ ಸೋಂಕಿತರು ಈಗ ನೆಗೆಟೀವ್ ಆಗಿರುವ ಸುದ್ದಿ. ಅದೂ, ಜೈಲಿನಲ್ಲಿರುವ ಕೈದಿಗಳು.

ಮುಂಬೈನಿಂದ ಶುಭಸುದ್ದಿ: ಹಾಟ್ ಸ್ಪಾಟ್ ಆಗಿದ್ದ ಧಾರಾವಿ ಕೊಳೆಗೇರಿ, ಈಗ ಇತರ ಪ್ರದೇಶಗಳಿಗೆ 'ಮಾಡೆಲ್'ಮುಂಬೈನಿಂದ ಶುಭಸುದ್ದಿ: ಹಾಟ್ ಸ್ಪಾಟ್ ಆಗಿದ್ದ ಧಾರಾವಿ ಕೊಳೆಗೇರಿ, ಈಗ ಇತರ ಪ್ರದೇಶಗಳಿಗೆ 'ಮಾಡೆಲ್'

ಅರ್ಥೂರು ರಸ್ತೆಯಲ್ಲಿರುವ ಜೈಲು ಸೇರಿದಂತೆ ನಗರದ ಇತರ ಕಾರಾಗೃಹವೆಲ್ಲವೂ ಲಾಕ್ ಡೌನ್ ನಲ್ಲಿದ್ದವು. ಆದರೂ, ಒಬ್ಬ ಕೈದಿಗೆ ಸೋಂಕು ದೃಢಪಟ್ಟಿತ್ತು. ಇದನ್ನು ಜೈಲು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದರು.

ಕೊರೊನಾ 'ದುರ್ಬಲ' ವೈರಸ್: ಯಶಸ್ವಿ ಕ್ಲಿನಿಕಲ್ ಟ್ರಯಲ್ ನಡೆಸಿದ ಡಾ.ಗಿರಿಧರ ಕಜೆ ಸಂದರ್ಶನಕೊರೊನಾ 'ದುರ್ಬಲ' ವೈರಸ್: ಯಶಸ್ವಿ ಕ್ಲಿನಿಕಲ್ ಟ್ರಯಲ್ ನಡೆಸಿದ ಡಾ.ಗಿರಿಧರ ಕಜೆ ಸಂದರ್ಶನ

"ಒಬ್ಬ ಕೈದಿಗೆ ಮಾತ್ರ ಸೋಂಕು ತಗಲಿದೆ ಎಂದು ನಾವು ನಿರ್ಲಕ್ಷ್ಯ ಮಾಡಲಿಲ್ಲ. ಬದಲಿಗೆ, ಜೈಲಿನಲ್ಲಿದ್ದ ಎಲ್ಲಾ ಕೈದಿಗಳಿಗೂ ಪರೀಕ್ಷೆ ನಡೆಸಿದೆವು. ಆಗ, 158 ಕೈದಿಗಳ ರಿಪೋರ್ಟ್ ಪಾಸಿಟೀವ್ ಬಂತು" ಐಜಿಪಿ(ಕಾರಾಗೃಹ) ದೀಪಕ್ ಪಾಂಡೆ ಹೇಳಿದ್ದಾರೆ. ಔಟ್ ಆಫ್ ದಿ ಬಾಕ್ಸ್, ಔಷದಿ ಪ್ರಯೋಗ..

ಅರ್ಥೂರು ರಸ್ತೆಯಲ್ಲಿರುವ ಜೈಲು

ಅರ್ಥೂರು ರಸ್ತೆಯಲ್ಲಿರುವ ಜೈಲು

"ನಮಗೆ ಸೋಂಕಿಗೆ ಪೀಡಿತರಾದವರನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಲು ಸ್ಥಳವಕಾಶ ಇರಲಿಲ್ಲ. ಈ ನಡುವೆ, ಸೋಂಕಿತರ ಸಂಖ್ಯೆ 181ಕ್ಕೆ ಏರಿತು. ನಾವು, ಲಭ್ಯವಿರುವ ಜಾಗದಲ್ಲೇ ಎಲ್ಲರನ್ನೂ ಕ್ವಾರಂಟೈನ್ ಗೆ ಒಳಪಡಿಸಿದೆವು. ಹೈಡ್ರಾಕ್ಸಿಕ್ಲೋರೋಕ್ವಿನ್, ವಿಟಮಿನ್ ಸಹಿತ ಚಿಕಿತ್ಸೆಯನ್ನು ಆರಂಭಿಸಿದೆವು" - ದೀಪಕ್ ಪಾಂಡೆ.

ಆಯುರ್ವೇದ ಚಿಕಿತ್ಸೆ

ಆಯುರ್ವೇದ ಚಿಕಿತ್ಸೆ

"ಇದರ ಜೊತೆಗೆ, ಆಯುರ್ವೇದ, ಹೋಮಿಯೋಪತಿ ಮತ್ತು ಪ್ರಕೃತಿ ಚಿಕಿತ್ಸೆಯನ್ನೂ ನೀಡಲು ಆರಂಭಿಸಿದೆವು. ಅತ್ಯಂತ ಆಶ್ಚರ್ಯಕರ ರೀತಿಯಲ್ಲಿ ಹದಿನೈದು ದಿನಗಳಲ್ಲಿ 120 ಕೈದಿಗಳು ಗುಣಮುಖರಾದರು. ಆದರೂ, ಅವರಿಗೆ ಆ ಚಿಕಿತ್ಸೆಯನ್ನು ಇನ್ನೂ ಮುಂದುವರಿಸಿದ್ದೇವೆ"ಎಂದು ಐಜಿಪಿ ಪಾಂಡೆ ಹೇಳಿದ್ದಾರೆ.

ಕಸ್ತೂರ್ಬಾ ಆಸ್ಪತ್ರೆ, ನಗರದ ಅತಿದೊಡ್ಡ ಕೋವಿಡ್ ಆಸ್ಪತ್ರೆ

ಕಸ್ತೂರ್ಬಾ ಆಸ್ಪತ್ರೆ, ನಗರದ ಅತಿದೊಡ್ಡ ಕೋವಿಡ್ ಆಸ್ಪತ್ರೆ

"ಇದಲ್ಲದೇ 28 ಜೈಲು ಸಿಬ್ಬಂದಿಗಳಿಗೂ ಸೋಂಕು ಆವರಿಸಿತ್ತು. ಇವರೆಲ್ಲರಿಗೂ, ಜೈಲಿನ ಹೊರಗೆ ಚಿಕಿತ್ಸೆ ನೀಡಲಾಯಿತು. ಇದರಲ್ಲಿ ಇಬ್ಬರನ್ನು ಹೊರತು ಪಡಿಸಿ, ಎಲ್ಲರೂ ಗುಣಮುಖರಾಗಿ, ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ. ಈ ಜೈಲು ಕಸ್ತೂರ್ಬಾ ಆಸ್ಪತ್ರೆಯ ಪಕ್ಕದಲ್ಲೇ ಇದ್ದು, ಈ ಆಸ್ಪತ್ರೆ ನಗರದ ಅತಿದೊಡ್ಡ ಕೋವಿಡ್ ಆಸ್ಪತ್ರೆಯಾಗಿದೆ" ದೀಪಕ್ ಪಾಂಡೆ.

ಐಜಿಪಿ ದೀಪಕ್ ಪಾಂಡೆ

ಐಜಿಪಿ ದೀಪಕ್ ಪಾಂಡೆ

ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಮೆಡಿಸಿನ್ ಪ್ರಯೋಗದಿಂದ ಇಲ್ಲಿ ಗುಣಮುಖರಾದವರ ಸಂಖ್ಯೆ ಬಹುತೇಕ ನೂರಕ್ಕೆ ನೂರು. ಅಲೋಪತಿ ಹೊರತಾಗಿ, ಇತರ ಎಲ್ಲಾ ಪ್ರಯೋಗವೂ ಯಶಸ್ವಿಯಾಯಿತು. ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ನಾವು ಪ್ರಯೋಗಿಸಿದ ಔಟ್ ಆಫ್ ದಿ ಬಾಕ್ಸ್ ಪ್ರಯೋಗ ಮತ್ತು ನಮ್ಮ ಅನುಭವವನ್ನು ನಾವು ಹಂಚಿಕೊಳ್ಳಲು ಸಿದ್ದರಿದ್ದೇವೆ"ಎಂದು ಐಜಿಪಿ ದೀಪಕ್ ಪಾಂಡೆ ಹೇಳಿದ್ದಾರೆ.

English summary
Mumbai's Arthur Road Prison Scripts Success Story As 177 COVID-19 Positive Inmates Fully Recovered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X