ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ: ಸಮಯಪ್ರಜ್ಞೆ ಮೆರೆದ ಸೈನಿಕರಿಂದ ಉಳಿಯಿತು ಒಂದು ಜೀವ

|
Google Oneindia Kannada News

ಮುಂಬೈ, ಅಕ್ಟೋಬರ್ 29: ಮುಂಬೈ ವಿಮಾನ ನಿಲ್ದಾಣದಲ್ಲಿ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯನ್ನು ಸಮಯಪ್ರಜ್ಞೆ ಮೆರೆದ ಕೇಂದ್ರ ಕೈಗಾರಿಕಾ ಭದ್ರತಾ ದಳದ (ಸಿಐಎಸ್ಎಫ್) ಸಿಬ್ಬಂದಿ ರಕ್ಷಿಸಿದ ಮಾನವೀಯ ಘಟನೆ ಶುಕ್ರವಾರ ನಡೆದಿದೆ.

ಭದ್ರತಾ ಪರಿಶೀಲನಾ ಸ್ಥಳದಲ್ಲಿ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯೊಬ್ಬರು ಹಠಾತ್ತಾಗಿ ಕುಸಿದು ಬಿದ್ದರು. ಅಲ್ಲಿಂದ ಜನರು ಅವರ ಸುತ್ತವರಿದರು. ಸ್ಥಳಕ್ಕೆ ತಕ್ಷಣ ಧಾವಿಸಿದ ಸಿಐಎಸ್ಎಫ್‌ನ ಎಎಸ್‌ಐ ಮೋಹಿತ್ ಕುಮಾರ್ ಶರ್ಮಾ ಮತ್ತು ಇಬ್ಬರು ಅವರಿಗೆ ಪ್ರಾಥಮಿಕ ಚಿಕಿತ್ಸೆ (ಸಿಪಿಆರ್) ನೀಡಿದರು.

mumbai airport cisf personnel saved man life cardiac arrest

ಹೃದಯ ಆರೋಗ್ಯವಂತ ಆಗಿರಬೇಕಿದ್ದರೆ ಈ 5 ಲೇಖನ ತಪ್ಪದೆ ಓದಬೇಕುಹೃದಯ ಆರೋಗ್ಯವಂತ ಆಗಿರಬೇಕಿದ್ದರೆ ಈ 5 ಲೇಖನ ತಪ್ಪದೆ ಓದಬೇಕು

ಹೃದಯಾಘಾತಕ್ಕೆ ಒಳಗಾದ ವ್ಯಕ್ತಿ ಅದರಿಂದ ಅಪಾಯಕ್ಕೆ ಒಳಗಾಗದಂತೆ ತಡೆದ ಸಿಬ್ಬಂದಿ, ಅವರ ಉಸಿರಾಟವನ್ನು ತಹಬದಿಗೆ ತಂದರು. ಬಳಿಕ ಅವರನ್ನು ನಾನಾವತಿ ಆಸ್ಪತ್ರೆಗೆ ದಾಖಲಿಸಿದರು. ಅವರು ದೇಹಸ್ಥಿತಿ ಸುಧಾರಿಸಿದೆ ಎಂದು ವರದಿ ತಿಳಿಸಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸಿಐಎಸ್ಎಫ್ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಎತಿಹಾದ್ ವಿಮಾನದಲ್ಲೇ ಮಗು ಹೆತ್ತ ಮಹಿಳೆಗೆ ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆಎತಿಹಾದ್ ವಿಮಾನದಲ್ಲೇ ಮಗು ಹೆತ್ತ ಮಹಿಳೆಗೆ ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ

ಕಳೆದ ಜುಲೈನಲ್ಲಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದ ಅಮೆರಿಕದ ನಾಗರಿಕರೊಬ್ಬರನ್ನು ಸಿಐಎಸ್ಎಫ್ ಸಿಬ್ಬಂದಿ ಸಿಪಿಆರ್ ಮೂಲಕ ಬದುಕಿಸಿದ್ದರು.

English summary
CISF personnel saved a man who had suffered cardiac arrest inside he Mumbai Airport on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X