ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

26/11ರ ಮುಂಬೈ ದಾಳಿ: ಸಾಜಿದ್ ಮಜೀದ್ ಮಿರ್‌ಗೆ 15 ವರ್ಷ ಜೈಲು

|
Google Oneindia Kannada News

ಇಸ್ಲಾಮಾಬಾದ್, ಜೂನ್ 25: 2008ರ ಮುಂಬೈ ದಾಳಿಯ ಪ್ರಮುಖ ನಿರ್ವಾಹಕನಿಗೆ ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಪ್ರಕರಣದಲ್ಲಿ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು 15 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಲಾಹೋರ್‌ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ನಿಷೇಧಿತ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ)ದ ಸಾಜಿದ್ ಮಜೀದ್ ಮಿರ್‌ಗೆ ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಪ್ರಕರಣದಲ್ಲಿ 15 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ," ಎಂದು ಭಯೋತ್ಪಾದನೆಗೆ ಸಂಬಂಧಿಸಿದ ಹಿರಿಯ ವಕೀಲರು ತಿಳಿಸಿದ್ದಾರೆ.

ಭಯೋತ್ಪಾದನೆ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ: ಪಾಕ್‌ಗೆ ಯುಎಸ್‌, ಭಾರತ ಮನವಿ ಭಯೋತ್ಪಾದನೆ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ: ಪಾಕ್‌ಗೆ ಯುಎಸ್‌, ಭಾರತ ಮನವಿ

ಪಂಜಾಬ್ ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ಇಲಾಖೆ (CTD), ಇಂತಹ ಪ್ರಕರಣಗಳಲ್ಲಿ ಶಂಕಿತರ ಶಿಕ್ಷೆಯನ್ನು ಪ್ರಕಟಿಸುತ್ತದೆ, ಭಯೋತ್ಪಾದಕ ಹಣಕಾಸು ಪ್ರಕರಣದಲ್ಲಿ ಮಿರ್‌ನ ಶಿಕ್ಷೆಯನ್ನು ತಿಳಿಸಲಿಲ್ಲ. ಅದಲ್ಲದೆ, ಜೈಲಿನಲ್ಲಿ ನಡೆಯುತ್ತಿದ್ದ ಇನ್-ಕ್ಯಾಮೆರಾ ಆಗಿದ್ದರಿಂದ ಮಾಧ್ಯಮದವರಿಗೆ ಅವಕಾಶವಿರಲಿಲ್ಲ.

Mumbai 26/11 Terror Attack: Sajid Majeed Mir Jailed for 15 Years in Pakistan

ಕಳೆದ 40ರ ದಶಕದ ಮಧ್ಯಭಾಗದಲ್ಲಿರುವ ಅಪರಾಧಿ ಮೀರ್ ಈ ಏಪ್ರಿಲ್‌ನಲ್ಲಿ ಬಂಧನವಾದಾಗಿನಿಂದ ಕೋಟ್ ಲಖ್ಪತ್ ಜೈಲಿನಲ್ಲಿದ್ದಾನೆ ಎಂದು ವಕೀಲರು ಹೇಳಿದರು. ನ್ಯಾಯಾಲಯವು ಅಪರಾಧಿಗೆ 4,00,000 ರೂ.ಗಿಂತ ಹೆಚ್ಚಿನ ದಂಡವನ್ನು ವಿಧಿಸಿದೆ.

ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್)ನ ಕೊನೆಯ ಸಭೆಯ ಮೊದಲು, ಪಾಕಿಸ್ತಾನವು ಎಫ್‌ಎಟಿಎಫ್ 'ಗ್ರೇ ಲಿಸ್ಟ್' ನಿಂದ ತೆಗೆದುಹಾಕಲು ಸಾಜಿದ್ ಮಿರ್‌ನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದೆ ಎಂದು ಏಜೆನ್ಸಿಗೆ ತಿಳಿಸಿದೆ.

ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಸಾಜಿದ್ ಮಿರ್: 2008ರ 26/11ರ ಮುಂಬೈ ದಾಳಿಯಲ್ಲಿ 166 ಮಂದಿ ಪ್ರಾಣ ಕಳೆದುಕೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಮೋಸ್ಟ್ ವಾಟೆಂಡ್ ಕ್ರಿಮಿನಲ್ ಪಟ್ಟಿಯಲ್ಲಿ ಸಾಜಿದ್ ಮಿರ್‌ಗೆ 50 ಲಕ್ಷ ಯುಎಸ್ ಡಾಲರ್ ಬಹುಮಾನವನ್ನು ಘೋಷಿಸಲಾಗಿತ್ತು.

ಮೀರ್ ಅನ್ನು ಮುಂಬೈ ದಾಳಿಯ "ಪ್ರಾಜೆಕ್ಟ್ ಮ್ಯಾನೇಜರ್" ಎಂದು ಕರೆಯಲಾಗಿತ್ತು. ಮಿರ್ 2005 ರಲ್ಲಿ ನಕಲಿ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ ಬಳಸಿ ಭಾರತಕ್ಕೆ ಭೇಟಿ ನೀಡಿದ್ದರು ಎಂದು ವರದಿಯಾಗಿದೆ.

ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಮತ್ತು ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್‌ಗೆ ಲಾಹೋರ್ ಎಟಿಸಿ ಭಯೋತ್ಪಾದನೆ ಹಣಕಾಸು ಪ್ರಕರಣಗಳಲ್ಲಿ ಈಗಾಗಲೇ 68 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

English summary
26/11 Mumbai terror attack: Sajid Majeed Mir jailed for 15 years in Pakistan. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X