ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಮುಕೇಶ್ ಅಂಬಾನಿಗೆ ಜೀವ ಬೆದರಿಕೆ ಹಾಕಿದವನ ಕಥೆ ಏನಾಯಿತು?

|
Google Oneindia Kannada News

ಮುಂಬೈ, ಆಗಸ್ಟ್ 16: ರಿಲಾಯನ್ಸ್ ಗ್ರೂಪ್ ಮುಖ್ಯಸ್ಥ ಮುಖೇಶ್ ಅಂಬಾನಿಗೆ ಬೆದರಿಕೆ ಕರೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದ ಆರೋಪಿಯನ್ನು ಆಗಸ್ಟ್ 30ರವರೆಗೂ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.

56 ವರ್ಷದ ಬಂಧಿತ ಆರೋಪಿ ವಿಷ್ಣು ಭೌಮಿಕ್ ಅನ್ನು ಆಗಸ್ಟ್ 16ರ ಮಂಗಳವಾರ ಮುಂಬೈನ 37ನೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ವಿಚಾರಣೆ ನಡೆಸಿದ ಕೋರ್ಟ್ ಆರೋಪಿ ಅನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.

ದಿನಕ್ಕೆ ನೂರಾರು ಕೋಟಿ ಗಳಿಕೆಯಿದ್ದರೂ ಅಂಬಾನಿ ತಿಂಗಳ ಸಂಬಳ ಶೂನ್ಯ!ದಿನಕ್ಕೆ ನೂರಾರು ಕೋಟಿ ಗಳಿಕೆಯಿದ್ದರೂ ಅಂಬಾನಿ ತಿಂಗಳ ಸಂಬಳ ಶೂನ್ಯ!

ಪ್ರಾಸಿಕ್ಯೂಷನ್ ಆರೋಪಿಯನ್ನು 10 ದಿನಗಳ ಕಸ್ಟಡಿಗೆ ಒಪ್ಪಿಸುವಂತೆ ಕೋರಿತ್ತು. "ಸ್ವಾತಂತ್ರ್ಯ ದಿನಾಚರಣೆಯ ದಿನವೇ ಈ ಕರೆಯನ್ನು ಮಾಡಿದ್ದು, ಉದ್ದೇಶಪೂರ್ವಕ ಎಂಬುದು ಗೊತ್ತಾಗುತ್ತದೆ. ಅವನು ಬೇರೆ ದಿನದಲ್ಲಿ ಏಕೆ ಹೀಗೆ ಕರೆ ಮಾಡಲಿಲ್ಲ?, ಮುಕೇಶ್ ಅಂಬಾನಿಗೆ ಬೆದರಿಕೆ ಇದೆ. ಆರೋಪಿಯು ಮುಕೇಶ್ ಅವರಿಗೇ ಏಕೆ ವಿಶೇಷವಾಗಿ ಕರೆ ಮಾಡಿದರು. ಆದ್ದರಿಂದ ಇದು ಸರಳವಾಗ ಪ್ರಕರಣವಲ್ಲದೇ ಗಂಭೀರ ಅಪರಾಧವಾಗಿದೆ," ಎಂದು ಪ್ರಾಸಿಕ್ಯೂಷನ್ ವಾದ ಮಂಡಿಸಿತ್ತು.

Mukesh Ambani threaten case: Accused Vishnu Bhowmik sent to police custody till Aug 30

ಪ್ರಾಸಿಕ್ಯೂಷನ್ ವಾದದಲ್ಲಿ ಏನಿದೆ?:

ಈ ಪ್ರಕರಣದಲ್ಲಿ ಆರೋಪಿಯು ಪುನರಾವರ್ತಿತ ಅಪರಾಧಿ ಆಗಿದ್ದಾನೆ ಎಂಬ ಅಂಶವನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಬೇಕು. ಇದೇ ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆ ಮಾಡುವುದಕ್ಕೆ ಹೆಚ್ಚಿನ ತನಿಖೆ ನಡೆಸಬೇಕಾದ ಅಗತ್ಯವಿದೆ. ವಿವರವಾಗಿ ತಾಂತ್ರಿಕ ತನಿಖೆ ಅನ್ನು ನಡೆಸಬೇಕಾಗಿದೆ," ಎಂದು ಪ್ರಾಸಿಕ್ಯೂಷನ್ ಹೇಳಿದೆ.

ಆರೋಪಿ ಪರ ವಕೀಲರ ವಾದವೇನು?:

ಈ ಪ್ರಕರಣದಲ್ಲಿ ಆರೋಪಿ ಪರ ವಕೀಲರು, ಆರೋಪಿಯು ನೇರವಾಗಿ ವ್ಯಕ್ತಿಯೇ ಕರೆ ಮಾಡಿದ್ದಲ್ಲ. ಆದರೆ ನೇರವಾಗಿ ವ್ಯಕ್ತಿಗೇ ಕರ ಮಾಡಿದ್ದನು ಎನ್ನುವಂತೆ ಬಿಂಬಿಸಲಾಗುತ್ತಿದೆ ಎಂದು ವಾದಿಸಿದ್ದಾರೆ. ಆರೋಪಿಯನ್ನು "ಮಾನಸಿಕ ಅಸ್ವಸ್ಥ" ಎಂದು ಕರೆದ ಆರೋಪಿಯ ಪರ ವಕೀಲರು, "ಆ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಅವರು ಮನೋವೈದ್ಯರ ಚಿಕಿತ್ಸೆಯಲ್ಲಿದ್ದಾರೆ ಎಂದು ತೋರಿಸಲು ನನ್ನ ಬಳಿ ಪ್ರಮಾಣ ಪತ್ರಗಳಿವೆ," ಎಂದು ಹೇಳಿದರು.

Recommended Video

ಅಟಲ್ ಅಂದ್ರೆ ಅಮೋಘ, ಅನನ್ಯ, ಅನರ್ಘ್ಯ ರತ್ನ | Oneindia Kannada

ಆರೋಪಿಯು ಕೆಟ್ಟದ್ದನ್ನು ಮಾಡುವುದಕ್ಕೆ ಸಂಬಂದಿಸಿದಂತೆ ಯಾವುದೇ ಉದ್ದೇಶವನ್ನು ಹೊಂದಿರಲಿಲ್ಲ. ಯಾವುದೇ ರೀತಿ ಅಪರಾಧಗಳ ಹಿನ್ನೆಲೆಯನ್ನು ಆರೋಪಿ ಹೊಂದಿಲ್ಲ ಎಂದು ಆರೋಪಿ ಪರ ವಕೀಲರು ಹೇಳಿದ್ದಾರೆ.

English summary
Mukesh Ambani threaten case: Accused Vishnu Bhowmik sent to police custody till Aug 30. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X