ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಂಸಿ ಚುನಾವಣೆ: ಶಿವಸೇನೆಯ ವಿರುದ್ಧ ಸಂಸದೆ ನವನೀತ್ ರಾಣಾ ಪ್ರಚಾರ

|
Google Oneindia Kannada News

ಮುಂಬೈ, ಮೇ 10: ಮಹಾರಾಷ್ಟ್ರದ ಅಮರಾವತಿಯ ಸ್ವತಂತ್ರ ಸಂಸದೆ ನವನೀತ್ ಕೌರ್ ರಾಣಾ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ರಾಜ್ಯದ ಯಾವುದೇ ಚುನಾವಣಾ ಕ್ಷೇತ್ರದಿಂದಲೂ ಸ್ಪರ್ಧಿಸುವಂತೆ ಸವಾಲು ಹಾಕಿದ್ದರು. ಸಂಸದೆ ತಾವು ಹೇಳಿಕೆ ನೀಡಿರುವಂತೆ ಮುಂಬರುವ ಚುನಾವಣೆಯಲ್ಲಿಉದ್ಧವ್ ಠಾಕ್ರೆ ವಿರುದ್ಧ ಹೋರಾಡುವುದಾಗಿ ಹೇಳಿದ್ದ ಸಂಸದೆ ನವನೀತ್ ರಾಣಾ ಮುಂಬರುವ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಯಲ್ಲಿ ಶಿವಸೇನೆಯ ವಿರುದ್ಧ ಪ್ರಚಾರ ಮಾಡುವುದಾಗಿ ಘೋಷಿಸಿದ್ದಾರೆ.

ಆಸ್ಪತ್ರೆಯಿಂದ ಹೊರಬಂದ ತಕ್ಷಣ ಸಂಸದೆ ನವನೀತ್ ರಾಣಾ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನುಗುರಿಯಾಗಿಸಿ ಸವಾಲು ಹಾಕಿದ್ದರು. 36ರ ಹರೆಯದ ನವನೀತ್ ಅವರು ಹನುಮಾನ್ ಚಾಲೀಸಾ ಪಠಣ ಮಾಡುವುದು ಅಪರಾಧವಾದರೆ ಕೇವಲ 14 ದಿನ ಯಾಕೆ, 14 ವರ್ಷ ಜೈಲಿಗೆ ಹೋಗಲು ಸಿದ್ಧ ಎಂದು ನವನೀತ್ ರಾಣಾ ಹೇಳಿದ್ದಾರೆ. 12 ದಿನಗಳ ಕಾಲ ಜೈಲಿನಲ್ಲಿದ್ದ ನವನೀತ್ ರಾಣಾ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇದಾದ ಬಳಿಕ ಚಿಕಿತ್ಸೆಗಾಗಿ ಲೀಲಾವತಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆದ ಬಳಿಕ ಶನಿವಾರ ಸಂಜೆ ಬಿಜೆಪಿ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿದ್ದರು.

MP Navneet Rana campaigns against Shiv Sena in BMC election

ಗಮನಾರ್ಹ ಸಂಗತಿಯೆಂದರೆ, ಸಿಎಂ ಉದ್ಧವ್ ಠಾಕ್ರೆ ಅವರ ನಿವಾಸದ ಮುಂದೆ ಹನುಮಾನ್ ಚಾಲೀಸಾ ಓದುವುದಾಗಿ ಘೋಷಿಸಿದ ನಂತರ ನವನೀತ್ ಅವರನ್ನು ಕಳೆದ ಏಪ್ರಿಲ್ 23 ರಂದು ಅವರ ಪತಿಯೊಂದಿಗೆ ಬಂಧಿಸಲಾಯಿತು. ಬೈಕುಲ್ಲಾ ಮಹಿಳಾ ಜೈಲಿನಲ್ಲಿ ಅಧಿಕಾರಿಗಳು ತನ್ನನ್ನು ನಿಂದಿಸಿದ್ದಾರೆ, ಚಾಪೆಯ ಮೇಲೆ ಮಲಗುವಂತೆ ಒತ್ತಾಯಿಸಿದ್ದಾರೆ ಎಂದು ಅವರು ಮಾಧ್ಯಮಗಳಿಗೆ ಹೇಳಿಕೊಂಡಿದ್ದರು. ಶಿವಸೇನೆ ಸಂಸದ ಮತ್ತು ಪಕ್ಷದ ಮುಖ್ಯ ವಕ್ತಾರ ಸಂಜಯ್ ರಾಣಾ ಅವರನ್ನು ಉಲ್ಲೇಖಿಸಿ, ನವನೀತ್ ರಾಣಾ ಅವರು ನಾಗ್ಪುರದಲ್ಲಿ ನನ್ನನ್ನು 20 ಅಡಿ ನೆಲದಡಿಯಲ್ಲಿ ಹೂಳುವುದಾಗಿ ಹೇಳಿದ್ದರು ಎಂದು ಎಚ್ಚರಿಸಿದ್ದಾರೆ. ಬಿಎಂಸಿಯಲ್ಲಿ ಶಿವಸೇನೆ ಮಾಡಿರುವ ಭ್ರಷ್ಟಾಚಾರಕ್ಕೆ ಮುಂಬೈ ಮತ್ತು ಮಹಾರಾಷ್ಟ್ರದ ಜನರು ಅದನ್ನು ನೆಲದಿಂದ 20 ಅಡಿ ಕೆಳಗೆ ಎಸೆಯುತ್ತಾರೆ.

MP Navneet Rana campaigns against Shiv Sena in BMC election

ಕಳೆದ ವಾರ ಜಾಮೀನು ಪಡೆದಿರುವ ನವನೀತ್ ಅವರ ಪತಿ ಮತ್ತು ಬದ್ನೇರಾ (ಅಮರಾವತಿ)ನ ಸ್ವತಂತ್ರ ಶಾಸಕ ರವಿ ರಾಣಾ ಬಿಜೆಪಿಯ ಬೆದರಿಕೆಗಳನ್ನು ಪುನರುಚ್ಚರಿಸಿದ್ದಾರೆ. ಸಂಜಯ್ ರಾವತ್ ಮತ್ತು ಸಚಿವ ಅನಿಲ್ ಪರಬ್ ಶೀಘ್ರದಲ್ಲೇ ಜೈಲಿಗೆ ಹೋಗಲಿದ್ದಾರೆ ಎಂದು ಮಾಧ್ಯಮದವರ ಮುಂದೆ ಹೇಳಿದ್ದರು. ರಾಣಾ ದಂಪತಿಗಳು ನವದೆಹಲಿಗೆ ಭೇಟಿ ನೀಡಿ ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ಬಿಜೆಪಿಯ ಉನ್ನತ ನಾಯಕರು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ನೀಡಲು ಯೋಜಿಸಿದ್ದಾರೆ.

English summary
MP Navneet Rana discharged from hospital, Challenges Uddhav Thackeray,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X