ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನ್‌ ಕಿ ಬಾತ್‌; ತುರ್ತುಪರಿಸ್ಥಿತಿ ಮರೆಯಲು ಸಾಧ್ಯವಿಲ್ಲ ಎಂದ ಮೋದಿ

|
Google Oneindia Kannada News

ನವದೆಹಲಿ, ಜೂ. 26: "ಭಾರತ ದೇಶವು ತನ್ನ ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ 1975ರ ಭೀಕರ ತುರ್ತು ಪರಿಸ್ಥಿತಿಯನ್ನು ಎಂದಿಗೂ ಮರೆಯಬಾರದು" ಎಂದು ಪ್ರಧಾನಿ ನರೇಂದ್ರ ಮೋದಿ
ಭಾನುವಾರ ಹೇಳಿದರು.

ತಮ್ಮ ತಿಂಗಳ ರೆಡಿಯೋ ಭಾಷಣ ಮನ್ ಕಿ ಬಾತ್‌ನ 90ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ದೇಶವು ಸ್ವಾತಂತ್ರ್ಯದ 75 ವರ್ಷಗಳ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ, ಆ ಭಯಾನಕ ತುರ್ತು ಪರಿಸ್ಥಿತಿಯನ್ನು ನಾವು ಎಂದಿಗೂ ಮರೆಯಬಾರದು" ಎಂದರು.

ಮೋದಿ ಮನ್‌ ಕಿ ಬಾತ್‌: ಆರ್ಥಿಕತೆ ಪುನರಾರಂಭ ಆದರೆ ಎಚ್ಚರವಿರಲಿ ಮೋದಿ ಮನ್‌ ಕಿ ಬಾತ್‌: ಆರ್ಥಿಕತೆ ಪುನರಾರಂಭ ಆದರೆ ಎಚ್ಚರವಿರಲಿ

"ಅಮೃತ ಮಹೋತ್ಸವವು ನೂರಾರು ವರ್ಷಗಳ ಗುಲಾಮಗಿರಿಯಿಂದ ಸ್ವಾತಂತ್ರ್ಯದ ವಿಜಯದ ಸಾಹಸಗಾಥೆಯನ್ನು ಒಳಗೊಳ್ಳುತ್ತದೆ. ಆದರೆ ಸ್ವಾತಂತ್ರ್ಯದ ನಂತರದ 75 ವರ್ಷಗಳ ಪ್ರಯಾಣವನ್ನು ಸಹ ಒಳಗೊಂಡಿದೆ. ನಾವು ಇತಿಹಾಸದ ಪ್ರತಿಯೊಂದು ಪ್ರಮುಖ ಹಂತದಿಂದ ಕಲಿಯುತ್ತಾ ಮುನ್ನಡೆಯುತ್ತೇವೆ" ಎಂದು ಹೇಳಿದ್ದಾರೆ.

ಮೋದಿಯ ಮನ್‌ ಕಿ ಬಾತ್‌ ನಲ್ಲಿ ಮೈಸೂರಿನ ದರ್ಶನ್ ಹೆಸರು!ಮೋದಿಯ ಮನ್‌ ಕಿ ಬಾತ್‌ ನಲ್ಲಿ ಮೈಸೂರಿನ ದರ್ಶನ್ ಹೆಸರು!

 ನಾಗರಿಕರಿಂದ ಎಲ್ಲಾ ಹಕ್ಕು ಕಿತ್ತುಕೊಳ್ಳಲಾಗಿತ್ತು

ನಾಗರಿಕರಿಂದ ಎಲ್ಲಾ ಹಕ್ಕು ಕಿತ್ತುಕೊಳ್ಳಲಾಗಿತ್ತು

24-25 ವರ್ಷ ವಯಸ್ಸಿನ ಯುವಕರನ್ನು ಉದ್ದೇಶಿಸಿದ ಮಾತನಾಡಿದ ಪ್ರಧಾನಿ, "ಯುವಕರ ಹೆತ್ತವರು ಚಿಕ್ಕವರಿದ್ದಾಗ ಅವರ ಬದುಕುವ ಹಕ್ಕನ್ನು ಅವರಿಂದ ಕಸಿದುಕೊಳ್ಳಲಾಗಿದೆ ಎಂದು ನಿಮಗೆ ತಿಳಿದಿದೆಯೇ?. ಇದು ಹೇಗೆ ಸಂಭವಿಸಿತು ಎಂದು ನೀವು ಯೋಚಿಸುತ್ತಿರಬೇಕು?. ಇದು ಅಸಾಧ್ಯ ಆದರೆ ನನ್ನ ಯುವ ಸ್ನೇಹಿತರೇ, ಇದು ನಮ್ಮ ದೇಶದಲ್ಲಿ ಒಮ್ಮೆ ಸಂಭವಿಸಿದೆ. ಇದು ವರ್ಷಗಳ ಹಿಂದೆ 1975ರಲ್ಲಿ ಸಂಭವಿಸಿತು. ಇದು ಜೂನ್ ತಿಂಗಳಿನಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಯಿತು. ದೇಶದ ನಾಗರಿಕರಿಂದ ಎಲ್ಲಾ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ" ಎಂದು ಹೇಳಿದರು.

 ಮುದ್ರಣಾಲಯಗಳನ್ನು ನಿಯಂತ್ರಣಕ್ಕೆ ತರಲಾಯಿತು

ಮುದ್ರಣಾಲಯಗಳನ್ನು ನಿಯಂತ್ರಣಕ್ಕೆ ತರಲಾಯಿತು

"ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಎಲ್ಲಾ ಭಾರತೀಯರಿಗೆ ಒದಗಿಸಲಾದ ಜೀವನದ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕುಗಳಲ್ಲಿ ಒಂದಾಗಿದೆ. 1975ರ ಸಮಯದಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಪ್ರಯತ್ನ ನಡೆದಿತ್ತು. ದೇಶದ ನ್ಯಾಯಾಲಯಗಳು ಪ್ರತಿ ಸಾಂವಿಧಾನಿಕ ಸಂಸ್ಥೆಗಳು, ಮುದ್ರಣಾಲಯಗಳನ್ನು ನಿಯಂತ್ರಣಕ್ಕೆ ತರಲಾಯಿತು. ಸೆನ್ಸಾರ್‌ಶಿಪ್‌ನ ಸ್ಥಿತಿಯು ಅನುಮೋದನೆಯಿಲ್ಲದೆ ಏನನ್ನೂ ಮುದ್ರಿಸಲು ಸಾಧ್ಯವಾಗಲಿಲ್ಲ" ಎಂದು ಪ್ರಧಾನಿ ಹೇಳಿದರು.

 ಭಾರತದ ಜನರ ನಂಬಿಕೆ ಅಲುಗಾಡಲಿಲ್ಲ

ಭಾರತದ ಜನರ ನಂಬಿಕೆ ಅಲುಗಾಡಲಿಲ್ಲ

ಖ್ಯಾತ ಗಾಯಕ ಕಿಶೋರ್ ಕುಮಾರ್ ಅವರು ಸರ್ಕಾರದ ನಿಲುವನ್ನು ಖಂಡಿಸಿದ ನಂತರ ಅವರ ಮೇಲೆ ವಿಧಿಸಲಾದ ನಿಷೇಧದ ಕುರಿತು ಮಾತನಾಡಿದ ಪ್ರಧಾನಿ ಮೋದಿ, "1975ರಲ್ಲಿ ರೇಡಿಯೊದಲ್ಲಿ ಅವರ ಹಾಡುಗಳನ್ನು ನಿಲ್ಲಿಸಲಾಯಿತು. ಆದರೆ ಅಂತಹ ಅನೇಕ ಪ್ರಯತ್ನಗಳು, ಸಾವಿರಾರು ಬಂಧನಗಳು ಮತ್ತು ಲಕ್ಷಗಟ್ಟಲೆ ಜನರ ಮೇಲೆ ದೌರ್ಜನ್ಯದ ನಂತರವೂ, ಪ್ರಜಾಪ್ರಭುತ್ವದಲ್ಲಿ ಭಾರತದ ಜನರ ನಂಬಿಕೆ ಅಲುಗಾಡಲಿಲ್ಲ" ಎಂದು ಪ್ರಧಾನಿ ಮೋದಿ ಹೇಳಿದರು.

 ಜನರು ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಿದ್ದಾರೆ

ಜನರು ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಿದ್ದಾರೆ

"ಭಾರತದ ಜನರು ನಾವು ಶತಮಾನಗಳಿಂದ ನಡೆಸಿಕೊಂಡು ಬಂದಿರುವ ಪ್ರಜಾಪ್ರಭುತ್ವದ ಸಂಸ್ಕಾರಗಳು, ನಮ್ಮ ರಕ್ತನಾಳಗಳಲ್ಲಿ ಇರುವ ಪ್ರಜಾಪ್ರಭುತ್ವದ ಮನೋಭಾವವು ಅಂತಿಮವಾಗಿ ಗೆದ್ದಿದೆ. ಭಾರತದ ಜನರು ತುರ್ತು ಪರಿಸ್ಥಿತಿಯನ್ನು ತೊಡೆದು ಹಾಕಿದರು ಹಾಗೂ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಿದರು. ಪ್ರಜಾಸತ್ತಾತ್ಮಕ ರೀತಿಯಲ್ಲಿ ಸರ್ವಾಧಿಕಾರ ಮನೋಭಾವನೆಯನ್ನು, ಸರ್ವಾಧಿಕಾರಿ ಧೋರಣೆಯನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ಸೋಲಿಸಿದ ಉದಾಹರಣೆಯನ್ನು ಇಡೀ ಪ್ರಪಂಚದಲ್ಲಿ ಕಾಣುವುದು ಕಷ್ಟ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ದೇಶವಾಸಿಗಳ ಪರ ಪ್ರಜಾಪ್ರಭುತ್ವದ ಸೈನಿಕನಾಗಿ ಹೋರಾಟ ನನಗೆ ಸಾಕ್ಷಿಯಾಗುವ ಸೌಭಾಗ್ಯ ಸಿಕ್ಕಿತು" ಹೇಳಿದರು.

English summary
Indian prime minister Narendra Modi on Sunday said that India should never forget the terrible emergency of 1975 as the country celebrates the 75th anniversary of its independence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X