ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಅನ್ಯಗ್ರಹಕ್ಕೂ ಹೋಗ್ತಾರೆ: ಶಿವಸೇನೆ ವ್ಯಂಗ್ಯ

By Manjunatha
|
Google Oneindia Kannada News

ಮುಂಬೈ, ಜೂನ್ 20: ಪ್ರಧಾನಿ ಮೋದಿ ಇನ್ನು ಮುಂದೆ ಅನ್ಯಗ್ರಹಗಳ ಪ್ರವಾಸವನ್ನೂ ಮಾಡುತ್ತಾರೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ವ್ಯಂಗ್ಯವಾಡಿದ್ದಾರೆ.

ಶಿವಸೇನೆಯ 52ನೇ ಸಂಸ್ಥಾಪನಾ ದಿನದಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು.

ಎನ್ ಡಿಎಗೆ ಆಘಾತ: ಮೈತ್ರಿಕೂಟದಿಂದ ಹೊರ ನಡೆದ ಶಿವಸೇನಾ ಎನ್ ಡಿಎಗೆ ಆಘಾತ: ಮೈತ್ರಿಕೂಟದಿಂದ ಹೊರ ನಡೆದ ಶಿವಸೇನಾ

ನರೇಂದ್ರ ಮೋದಿ ಕೇವಲ ಸುಳ್ಳು ಭರವಸೆಗಳನ್ನು ನೀಡಿ 2014ರಲ್ಲಿ ಅಧಿಕಾರಕ್ಕೆ ಬಂದ್ದಿದ್ದಾರೆ ಎಂದು ಆರೋಪಿಸಿದ ಅವರು, ಮೋದಿ ಅವರ ವಿದೇಶ ಪ್ರವಾಸಗಳ ಬಗ್ಗೆ ಮೇಲಿನಂತೆ ವ್ಯಂಗ್ಯವಾಡಿದರು.

ಮೋದಿ ಗುಜರಾತಿಗಳನ್ನು ಚಂದ್ರನ ಮೇಲೆ ಕಳಿಸುತ್ತಾರೆ : ರಾಹುಲ್ಮೋದಿ ಗುಜರಾತಿಗಳನ್ನು ಚಂದ್ರನ ಮೇಲೆ ಕಳಿಸುತ್ತಾರೆ : ರಾಹುಲ್

Modi may visit alien planet soon : Uddhav Thackeray

ಜಮ್ಮು ಕಾಶ್ಮೀರದಲ್ಲಿ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರ ಮುರಿದುಬಿದ್ದ ಬಗ್ಗೆ ಮಾತನಾಡಿದ ಉದ್ಧವ್ ಠಾಕ್ರೆ, 600 ಸೈನಿಕರನ್ನು ಬಲಿಕೊಟ್ಟ ಮೇಲೆ ಮೈತ್ರಿ ಸರ್ಕಾರ ಅಪ್ರಯೋಜಕ ಎಂದು ಗೊತ್ತಾಯಿತಾ ಎಂದು ಹರಿಹಾಯ್ದರು.

ಯೋಗಿ ಆದಿತ್ಯನಾಥ್ ಗೆ ಚಪ್ಪಲಿಯೇಟು ಕೊಡ್ಬೇಕೆನಿಸಿದೆ : ಉದ್ಧವ್ ಠಾಕ್ರೆ ಯೋಗಿ ಆದಿತ್ಯನಾಥ್ ಗೆ ಚಪ್ಪಲಿಯೇಟು ಕೊಡ್ಬೇಕೆನಿಸಿದೆ : ಉದ್ಧವ್ ಠಾಕ್ರೆ

ರಂಜಾನ್ ಹಬ್ಬದ ಸಮಯ ಕದನ ವಿರಾಮ ಘೋಷಿಸಿದ್ದರ ಬಗ್ಗೆಯೂ ಟೀಕಿಸಿದ ಅವರು, ಗಣೇಶ ಹಬ್ಬ, ದೀಪಾವಳಿ ಹಬ್ಬದಂದು ಪಾಕಿಸ್ತಾನ ಇದೇ ನೀತಿ ಅನುಸರಿಸುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಬಿಜೆಪಿ ವಿರುದ್ಧ ಕೆಂಡಾಮಂಡಲವಾಗಿರುವ ಶಿವಸೇನೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಇತ್ತೀಚೆಗೆ ಮಾಡುತ್ತಿದೆ. ಶಿವಸೇನೆಯು ಎನ್‌ಡಿಎ ಮೈತ್ರಿಕೂಟದಿಂದ ಜನವರಿಯಲ್ಲಿ ಹೊರಬಂದಿತ್ತು.

English summary
Shivasena party chief Uddhav Thackeray lambasted Narendra Modi and BJP. He said criticizing Modi's foreign tour 'he may visit alien planet soon'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X