• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಳಸಿದ ಸಂಬಂಧ, ಕಿನ್ನರಿ ನಟನ ವಿರುದ್ಧ ಕಿರುಕುಳದ ದೂರು

By Mahesh
|
   ಕಿನ್ನರಿ ಧಾರಾವಾಹಿಯ ನಕುಲ್ ಅಲಿಯಾಸ್ ಕಿರಣ್ ರಾಜ್ ವಿರುದ್ಧ ಗರ್ಲ್ ಫ್ರೆಂಡ್ ನಿಂದ ದೂರು | Oneindia Kannada

   ಮುಂಬೈ, ಏಪ್ರಿಲ್ 03: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಕಿನ್ನರಿ' ಧಾರವಾಹಿಯ ಪ್ರಮುಖ ಪಾತ್ರಧಾರಿ ನಟ ಕಿರಣ್ ರಾಜ್ ವಿರುದ್ಧ ಹಲ್ಲೆ, ಕಿರುಕುಳದ ಪ್ರಕರಣ ದಾಖಲಾಗಿದೆ.

   ನಕುಲ್ ಪಾತ್ರಧಾರಿ ಕಿರಣ್ ರಾಜ್ ವಿರುದ್ಧ ಆತನ ಗೆಳತಿ ಯಾಸ್ಮಿನ್ ಪಠಾಣ್ ಅವರು ಮುಂಬೈಯ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಮಾತ್ರವಲ್ಲದೆ ಹಿಂದಿ ಧಾರಾವಾಹಿಗಳಲ್ಲೂ ಕಿರಣ್ ರಾಜ್ ಗುರುತಿಸಿಕೊಂಡಿದ್ದಾರೆ.

   ನಟಿ ಹಾಗೂ ಮಾಡೆಲ್ ಯಾಸ್ಮಿನ್ ಪಠಾಣ್ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ಕಿರಣ್ ರಾಜ್ ಕೂಡಾ ಯಾಸ್ಮಿನ್ ವಿರುದ್ಧ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

   ಹಳಸಿದ ಸಂಬಂಧ: ಯಾಸ್ಮಿನ್ ಪಠಾಣ್ ಹಾಗೂ ಕಿರಣ್ ರಾಜ್ ಐದಾರು ವರ್ಷಗಳಿಂದಲೂ ಪ್ರೇಮಿಗಳಾಗಿದ್ದು, ಲಿವ್ ಇನ್ ಟುಗೆದರ್ ನಲ್ಲಿದ್ದಾರೆ. ಆದರೆ, ಇಬ್ಬರ ನಡುವೆ ಮಾರ್ಚ್ 26 ರಂದು ಇಬ್ಬರ ಮಧ್ಯೆ ಜಗಳವಾಗಿದೆ. ಕಿರಣ್ ರಾಜ್ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಾರ್ಚ್ 29ರಂದು ಮುಂಬೈನ ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

   ಆದರೆ, ಕಿರಣ್ ಅವರು ಯಾಸ್ಮಿನ್ ಆರೋಪವನ್ನು ಅಲ್ಲಗೆಳೆದಿದ್ದು, ನಾನು ಹಲ್ಲೆ ಮಾಡಿಲ್ಲ, ಬದಲಿಗೆ ಆಕೆ ನನ್ನ ಮನೆಗೆ ಬಂದು ನನ್ನ ತಾಯಿ ಮೇಲೆ ಹಲ್ಲೆ ಮಾಡಿ, ನಿಂದಿಸಿದ್ದಾಳೆ. ಮಾರ್ಚ್ 31ರಂದು ರಾಜರಾಜೇಶ್ವರಿ ನಗರ ಪೊಲೀಸರ ಬಳಿ ದೂರು ನೀಡಿದೆ. ಆದರೆ ಎಫ್ ಐಆರ್ ದಾಖಲಿಸುವುದು ಬೇಡ ಎಂದು ಹೇಳಿದೆ. ಅವಳು ಒಂಥರಾ ಸೈಕೊ ಥರಾ ಆಡುತ್ತಾಳೆ. ಅವಳ ಮೇಲೆ 2-3 ವಂಚನೆ ಪ್ರಕರಣಗಳು ಇವೆ ಎಂದು ದೂರಿದ್ದಾರೆ.

   English summary
   Model cum Yasmin Pathan lodges complaint against Kinnari Kannada serial fame actor Kiran raj. Yasmin in her complaint with Mumbai police said, actor physically assaulted her. Kiran also filed a counter plaint against her in Rajarajeshwari Nagar police in Bengaluru
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X