• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮರ ಕಡಿದಿರುವ ಜಾಗದಲ್ಲಿ ಕಾಮಗಾರಿ ನಡೆಯಲಿದೆ ಎಂದ ಮೆಟ್ರೋ ನಿಗಮ

|

ಮುಂಬೈ, ಅಕ್ಟೋಬರ್ 8: ಹೊಸದಾಗಿ ಮರಗಳನ್ನು ಕಡಿಯುವುದಿಲ್ಲ ಆದರೆ ಮರಗಳು ಕಡಿದಿರುವ ಜಾಗದಲ್ಲಿ ಮೆಟ್ರೋ ಕಾಮಗಾರಿ ಆರಂಭಿಸುವುದಾಗಿ ಮುಂಬೈ ಮೆಟ್ರೋ ನಿಗಮ ಹೇಳಿದೆ.

ಎಂಎಂಆರ್‌ಸಿ ಮೆಟ್ರೋ ಕಾಮಗಾರಿಗಾಗಿ 2,141 ಮರಗಳ ಮಾರಣಹೋಮ ಮಾಡಿದ್ದರು. ಇದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಸುಪ್ರೀಂ ಕೋರ್ಟ್​ ಮುಂದಿನ ತೀರ್ಪು ನೀಡುವತನಕ ಯಾವುದೇ ಮರಗಳನ್ನು ಕಡಿಯುವುದಿಲ್ಲ. ಆದರೆ, ಈಗಾಗಲೇ ಮರ ಕಡಿದಿರುವ ಪ್ರದೇಶದಲ್ಲಿ ಮೆಟ್ರೋ ಕಾಮಗಾರಿ ನಡೆಯಲಿದೆ ಎಂದು ಎಂಎಂಆರ್​​ಸಿ ತಿಳಿಸಿದೆ.

ಮೆಟ್ರೋಗಾಗಿ ಮರ ಕಟಾವು: ಸುಪ್ರೀಂಕೋರ್ಟ್ ಮಧ್ಯಂತರ ತಡೆ

ಅಕ್ಟೋಬರ್ 7ರಂದು ಬೆಳಗ್ಗೆ ಸುಮಾರು 10 ಗಂಟೆಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​ ಆರೆ ಕಾಲೋನಿಯ ಪ್ರತಿನಿಧಿಗಳು ಮತ್ತು ಮುಂಬೈನ ಮೆಟ್ರೋ ಅಧಿಕಾರಿಗಳ ವಾದ-ಪ್ರತಿವಾದ ಆಲಿಸಲಿತು. ಬಳಿಕ ಇನ್ನುಮುಂದೆ ಈ ಭಾಗದಲ್ಲಿ ಮರ ಕಡಿಯದಂತೆ ಆದೇಶ ಹೊರಡಿಸಿತ್ತು.

ಮುಂಬೈ ನ್ಯಾಯಲಯವೇ ಪ್ರತಿಭಟನಕಾರರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಸೋಮವಾರದವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಈ ಬೆನ್ನಲ್ಲೇ ಮತ್ತೆ 38 ಜನರನ್ನು ಪೊಲೀಸರು ಬಂಧಿಸಿದ್ದು, ಒಟ್ಟಾರೆ 55 ಮಂದಿಯನ್ನು ವಶಕ್ಕೆ ಪಡೆದಿದ್ದರು.

ಮೆಟ್ರೋ ಕಾಮಗಾರಿಗಾಗಿ ಮರಗಳನ್ನು ಕಡಿಯಲು ಮುಂದಾದ ಅಧಿಕಾರಿಗಳ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ ಆರೆ ಕಾಲೋನಿಯ 29 ಮಂದಿಯನ್ನು ಬಂಧಿಸಲಾಗಿತ್ತು.

ಮರ ಕಡಿಯುವುದರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರಲ್ಲಿ 38 ಮಂದಿಯನ್ನು ಬಂಧಿಸಲಾಗಿದ್ದು, 55 ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮುಂಬೈ ಪೊಲೀಸ್ ಮೂಲಗಳು ತಿಳಿಸಿವೆ. ಪರಿಸರ ಹೋರಾಟಗಾರರ ಬಂಧನಕ್ಕೆ ಕಾಂಗ್ರೆಸ್​ ಸೇರಿದಂತೆ ಶಿವಸೇನೆ ನಾಯಕ ಆದಿತ್ಯಾ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ತುರ್ತು ಅರ್ಜಿ ವಿಚಾರಣೆಗೆ ಮುಂದಾದ ಸುಪ್ರೀಂಕೋರ್ಟ್​​, ಪ್ರತಿಭಟನಾಕಾರರ ಪರವಾಗಿ ತೀರ್ಪು ನೀಡಿದೆ. ಇನ್ನುಮುಂದೆ ಈ ಭಾಗದಲ್ಲಿ ಯಾವುದೇ ಮರವನ್ನು ಕಡಿಯಬಾರದು. ಈ ಬಗ್ಗೆ ಮಹಾರಾಷ್ಟ್ರ ಸರ್ಕಾರ ಖಾತ್ರಿ ಕೊಡಬೇಕು. ಅಷ್ಟೇ ಅಲ್ಲ, ಬಂಧನಕ್ಕೊಳಗಾದ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಬೇಕು, ಎಂದು ಸುಪ್ರೀಂಕೋರ್ಟ್​​ ಆದೇಶಿಸಿ, ಪ್ರಕರಣದ ವಿಚಾರಣೆಯನ್ನು ಅ.21ಕ್ಕೆ ಮಂದೂಡಿದೆ.

ಸೋರು ಬಥೇನಾ ಎಂಬವರು ಟ್ವೀಟ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು ಮೆಟ್ರೋ ಡಿಪೋದಲ್ಲಿ ಮರಗಳನ್ನು ಅಕ್ರಮವಾಗಿ ಕತ್ತರಿಸಲಾಗುತ್ತಿದೆ. ಕಾನೂನಿನ ಪ್ರಕಾರ ಮರಗಳನ್ನು ಕಡಿಯಲು ಹೈಕೋರ್ಟ್ ಅನುಮತಿ ನೀಡಿದರೂ ಸಹ 15 ದಿನಗಳ ನಂತರವೇ ಅದನ್ನು ಕಡಿಯಬೇಕು. ಆದರೆ, ಈ ಕುರಿತು ಹೈಕೋರ್ಟ್ ವೆಬ್​ಸೈಟಿನಲ್ಲಿ ಶುಕ್ರವಾರ ಸಂಜೆ 4 ಗಂಟೆಗೆ ಅನುಮತಿ ಪತ್ರವನ್ನು ಅಪ್ಲೋಡ್ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

English summary
The Mumbai Metro Rail Corporation said 2,141 trees in North Mumbai's Aarey Colony have already been felled for the construction of a car shed, hours after the Supreme Court stayed the chopping of more trees in the city's 'green lung'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X