ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಡೆದುಕೊಂಡೆ ಊರ ಕಡೆ ಮುಖ ಮಾಡಿದ ವಲಸೆ ಕಾರ್ಮಿಕರು

|
Google Oneindia Kannada News

ಮುಂಬೈ, ಏಪ್ರಿಲ್ 17: ಜೀವನದ ಅವಶ್ಯಕತೆಗಾಗಿ ಸ್ವಂತ ಊರುಗಳನ್ನು ಬಿಟ್ಟು ಮಹಾನಗರಗಳಿಗೆ ಬಂದಿರುವ ವಲಸೆ ಕಾರ್ಮಿಕರ ಸಂಖ್ಯೆ ಬಹಳ ದೊಡ್ಡದಿದೆ. ಕೊರೊನಾ ವೈರಸ್‌ ಹಿನ್ನೆಲೆ ಲಾಕ್‌ಡೌನ್‌ ಘೋಷಣೆ ಆದ ಬಳಿಕ ಇಂತಹ ಕಾರ್ಮಿಕರಿಗೆ ಭಾರಿ ಕಷ್ಟ ಎದುರಾಗಿದೆ.

ಒಂದು ಕಡೆ ಕೊರೊನಾ ಭಯ, ಕೆಲಸ ಇಲ್ಲ, ವೇತನ ಇಲ್ಲ. ತಿನ್ನಲು ಆಹಾರವೂ ಸಿಗದ ಉದಾಹರಣೆಗಳು ವರದಿಯಾಗುತ್ತಿದೆ. ಈ ಸಂಕಷ್ಟದಿಂದ ತಪ್ಪಿಸಿಕೊಳ್ಳಲು ತಮ್ಮ ಊರುಗಳಿಗೆ ವಾಪಸ್ ಹೋಗಲು ಮುಂದಾಗಿದ್ದಾರೆ.

Migrant Labourers Walking On Foot Towards Their Homes

ಸಾರಿಗೆ ಸಂಸ್ಥೆ ನೌಕರರಿಗೆ ಸಿಹಿ ಸುದ್ದಿ ನೀಡಿದ ಲಕ್ಷ್ಮಣ ಸವದಿಸಾರಿಗೆ ಸಂಸ್ಥೆ ನೌಕರರಿಗೆ ಸಿಹಿ ಸುದ್ದಿ ನೀಡಿದ ಲಕ್ಷ್ಮಣ ಸವದಿ

ಆದರೆ, ಸ್ಥಳೀಯವಾಗಿ ಅಥವಾ ಅಂತರರಾಜ್ಯಗಳಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ. ಎಲ್ಲವೂ ಬಂದ್ ಆಗಿದೆ. ಆದರೂ, ಈ ಬಗ್ಗೆ ಲೆಕ್ಕಿಸದೆ ಅನೇಕ ಕಾರ್ಮಿಕರು ನಡೆದುಕೊಂಡೇ ಊರಿನ ಕಡೆ ಮುಖ ಮಾಡಿದ್ದಾರೆ.

ಇದೀಗ, ಇಂತಹ ದೃಶ್ಯವೊಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಕಂಡು ಬಂದಿದೆ. ಗಂಟೆಮೂಟೆ ಕಟ್ಟಿಕೊಂಡು, ಹೆಂಡತಿ ಮಕ್ಕಳ ಜೊತೆ ನಡೆದುಕೊಂಡೆ ಊರುಗಳಿಗೆ ಹೋಗುತ್ತಿದ್ದಾರೆ. ''ನಾನು ಕಳೆದ ಐದು ದಿನಗಳಿಂದ ಪ್ರಯಾಣ ಮಾಡುತ್ತಿದ್ದೇನೆ. ನಮ್ಮ ಊರು ತಲುಪಲು ಇನ್ನು ಆರು ದಿನ ಬೇಕು' ಎಂದು ಒಬ್ಬ ವ್ಯಕ್ತಿ ಹೇಳಿದ್ದಾರೆ.

ಈ ಗುಂಪಿನಲ್ಲಿ ಒಂದು ವರ್ಷದ ಮಗು ಜೊತೆ ಸೈಕಲ್‌ನಲ್ಲಿ ಸಾಗುತ್ತಿರುವ ದಂಪತಿ ಕೂಡ ಇದ್ದಾರೆ. ನಾಗ್ಪುರದಿಂದ ಮಧ್ಯಪ್ರದೇಶದಲ್ಲಿರುವ ಊರಿಗೆ ಹೋಗುತ್ತಿದ್ದಾರೆ. ಏಪ್ರಿಲ್ 14 ರಂದು ಲಾಕ್‌ಡೌನ್ ಮುಗಿಯುತ್ತೆ ಎಂದು ಕಾದೆವು. ಆದರೆ, ಅದು ಮುಂದುವರಿಯಿತು. ಬಸ್‌ಗಾಗಿ ಎಷ್ಟೇ ಕಾದರೂ ಬಸ್ ಬಂದಿಲ್ಲ. ಹಾಗಾಗಿ, ನಡೆದುಕೊಂಡು ಹೋಗುತ್ತಿದ್ದೇವೆ'' ಎಂದಿದ್ದಾರೆ.

ಷರತ್ತುಗಳನ್ನು ಹಾಕಿ ಮದುವೆಗೆ ಅವಕಾಶ ನೀಡಿದ ಉತ್ತರಾಖಂಡ ಸರ್ಕಾರಷರತ್ತುಗಳನ್ನು ಹಾಕಿ ಮದುವೆಗೆ ಅವಕಾಶ ನೀಡಿದ ಉತ್ತರಾಖಂಡ ಸರ್ಕಾರ

ಇದು ಕೇವಲ ಮಹಾರಾಷ್ಟ್ರ ಒಂದು ರಾಜ್ಯದಲ್ಲಿ ಮಾತ್ರವಲ್ಲ, ದೇಶದ ಹಲವು ರಾಜ್ಯಗಳಲ್ಲಿ ವಲಸೆ ಕಾರ್ಮಿಕರ ಸ್ಥಿತಿ ಇದೇ ಆಗಿದೆ. ಏಪ್ರಿಲ್ 14ರ ಸಂಜೆ ಊರುಗಳಿಗೆ ಹೋಗಲು ಮುಂಬೈನ ಬಾಂದ್ರಾದಲ್ಲಿ ಬಹಳ ದೊಡ್ಡ ಮಟ್ಟದ ವಲಸೆ ಕಾರ್ಮಿಕರು ಜಮಾಯಿಸಿದ್ದ ಘಟನೆ ಸ್ಮರಿಸಬಹುದು.

English summary
Migrant labourers cycling, walking on foot in Nagpur towards their homes in Satna district of Madhya Pradesh amid CoronavirusLockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X