• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಭೀತಿ: ಮಹಾರಾಷ್ಟ್ರದಿಂದ ಉತ್ತರ ಪ್ರದೇಶಕ್ಕೆ ರೈಲಿನಲ್ಲಿ ಬಂದಿಳಿದ ವಲಸೆ ಕಾರ್ಮಿಕರು

|

ಲಕ್ನೋ, ಏಪ್ರಿಲ್ 12: ಮಹಾರಾಷ್ಟ್ರ ಸೇರಿದಂತೆ ಇಡೀ ದೇಶಾದ್ಯಂತ ಕೊರೊನಾ ಸೋಂಕು ಹೆಚ್ಚಾಗುತ್ತಿತ್ತು. ಮತ್ತೆ ವಲಸೆ ಕಾರ್ಮಿಕರಲ್ಲಿ ಭೀತಿ ತರಿಸಿದೆ.

ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಕೆಲಸವನ್ನೂ ಕಳೆದುಕೊಂಡು ಊರುಗಳನ್ನು ತಲುಪಲಾಗದೆ ಕಂಗಾಲಾಗಿದ್ದರು. ಎಷ್ಟೋ ಮಂದಿ ಕಾರ್ಮಿಕರು ಸಾವನ್ನಪ್ಪಿದ್ದರು.

ಆದರೆ ಈ ಬಾರಿ ಆ ರೀತಿಯಾಗಲು ಅವಕಾಶ ನೀಡಬಾರದು ಎಂದು ಮಹಾರಾಷ್ಟ್ರದಲ್ಲಿ ಕೆಲಸಕ್ಕೆಂದು ಹೋಗಿದ್ದ ಕಾರ್ಮಿಕರು ರೈಲಿನ ಮೂಲಕ ಮತ್ತೆ ಉತ್ತರ ಪ್ರದೇಶಕ್ಕೆ ಮರಳಿದ್ದಾರೆ.

ಮಹಾರಾಷ್ಟ್ರದಿಂದ ಪ್ರಯಾಗ್‌ರಾಜ್, ವಾರಾಣಸಿ, ಗೋರಖ್‌ಪುರಕ್ಕೆ ರೈಲಿನಲ್ಲಿ ಬರುತ್ತಿದ್ದಾರೆ. ಪ್ರಯಾಣಿಕರು ಹೆಚ್ಚಾಗುತ್ತಿರುವ ಕಾರಣ ವಿಶೇಷ ರೈಲುಗಳ ವ್ಯವಸ್ಥೆ ಮಾಡಬೇಕೆಂದು ಒತ್ತಾಯ ಕೇಳಿಬರುತ್ತಿದೆ.

ಮುಂಬೈ, ಏಪ್ರಿಲ್ 12: ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 51,751 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 258 ಮಂದಿ ಸಾವನ್ನಪ್ಪಿದ್ದಾರೆ.

ಪ್ರಯೋಗಾಲಯಕ್ಕೆ ಬಂದಿದ್ದ 2,33,22,393 ಸ್ಯಾಂಪಲ್‌ಗಳ ಪೈಕಿ 34,58,996 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈಗ 32,75,224 ಮಂದಿ ಗೃಹ ಬಂಧನದಲ್ಲಿದ್ದಾರೆ, 29,399 ಮಂದಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ. ಏಪ್ರಿಲ್ 12ರವರೆಗೆ ಮಹಾರಾಷ್ಟ್ರದಲ್ಲಿ 5,64,746 ಸಕ್ರಿಯ ಪ್ರಕರಣಗಳಿವೆ.

ಭಾನುವಾರ 63,294 ಮಂದಿಗೆ ಕೊರೊನಾ ಸೋಂಕು ತಗುಲಿತ್ತು, 349 ಮಂದಿ ಮೃತಪಟ್ಟಿದ್ದರು.

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 10 ಹಾಗೂ 12ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಸಚಿವರಾದ ವರ್ಷಾ ಗಾಯಕ್‌ವಾಡ್ ತಿಳಿಸಿದ್ದಾರೆ.

English summary
Amid a sharp rise in Covid-19 cases, many migrant labourers are coming from Maharashtra to Uttar Pradesh in packed trains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X