ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ: ನರೇಂದ್ರ ಮೋದಿ 'ಮುಖವಾಡ' ಧರಿಸಿ ಲಡ್ಡು ತಯಾರಿ

|
Google Oneindia Kannada News

ನವದೆಹಲಿ, ಮೇ 21: 17ನೇ ಲೋಕಸಭೆಗಾಗಿ ನಡೆದ ಚುನಾವಣಾ ಹಬ್ಬ ಈಗ ಕೊನೆ ಹಂತ ತಲುಪಿದೆ. ಚುನಾವಣಾ ಪೂರ್ವ ಸಮೀಕ್ಷೆ, ಎಕ್ಸಿಟ್ ಪೋಲ್ ಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎಗೆ ಬಹುಮತ ಸಿಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದ್ದಂತೆ ಬಿಜೆಪಿ ಬೆಂಬಲಿಗರಿಂದ ಸಂಭ್ರಮಾಚರಣೆಗೆ ಭರ್ಜರಿಯಾಗಿ ತಯಾರಿ ನಡೆಯುತ್ತಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಲೋಕಸಭೆಯ 542 ಸ್ಥಾನಗಳಿಗಾಗಿ ಏಪ್ರಿಲ್ 11ರಿಂದ ಮೇ 19ರ ತನಕ ಏಳು ಹಂತಗಳಲ್ಲಿ ಚುನಾವಣೆ ನಡೆಸಲಾಯಿತು. ಮೇ 23ರಂದು ಅಂತಿಮ ಫಲಿತಾಂಶ ಹೊರಬೀಳಲಿದೆ. ಮೋದಿ ಗೆಲುವಿನ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿದೆ ಎಂಬ ಸಂತಸದಲ್ಲಿ ಮುಂಬೈನ ಬೊರಿವಲಿಯ ಸಿಹಿ ತಿನಿಸು ಅಂಗಡಿಯಲ್ಲಿ ಲಡ್ಡು ತಯಾರಿ ಆರಂಭವಾಗಿದೆ.

ಒಂದು ಪ್ರಶ್ನೆಯನ್ನು ಮೋದಿ ಸ್ವೀಕರಿಸಲಿಲ್ಲವೇಕೆ? ಶಿವಸೇನಾ ಪ್ರತಿಕ್ರಿಯೆ ಒಂದು ಪ್ರಶ್ನೆಯನ್ನು ಮೋದಿ ಸ್ವೀಕರಿಸಲಿಲ್ಲವೇಕೆ? ಶಿವಸೇನಾ ಪ್ರತಿಕ್ರಿಯೆ

ಸರಿ ಸುಮಾರು 1500 ರಿಂದ 2000 ಕೆಜಿ ಸಿಹಿ ತಿನಿಸಿನ ಆರ್ಡರ್ ಸಿಕ್ಕಿದೆ ಎಂದು ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲ್ ಶೆಟ್ಟಿ ಅವರು ಆರ್ಡರ್ ಕೊಟ್ಟು ಹೋಗುತ್ತಿದ್ದಂತೆ ನಮ್ಮ ಅಂಗಡಿ ಕೆಲಸಗಾರರು ಮೋದಿ ಅವರ ಮಾಸ್ಕ್ ಧರಿಸಿ ಲಡ್ಡು ತಯಾರಿ ಮಾಡಲು ಶುರು ಮಾಡಿದ್ದಾರೆ ಎಂದು ಅಂಗಡಿ ಮಾಲೀಕರು ಹೇಳಿದ್ದಾರೆ.

Men wearing Modi masks prepare 2,000 Kg Laddoos ahead of poll results

ನಟಿ ಊರ್ಮಿಳಾ ಮಾತೊಂಡ್ಕರ್ ಅವರು ಹಾಲಿ ಸಂಸದ ಗೋಪಾಲ್ ಶೆಟ್ಟಿ ಸ್ಪರ್ಧಿಸಿರುವುದು ಮುಂಬೈ ಉತ್ತರ ಕ್ಷೇತ್ರದಲ್ಲಿ ತೀವ್ರ ಪೈಪೋಟಿಯ ನಿರೀಕ್ಷೆ ಹುಟ್ಟು ಹಾಕಿದೆ. ಆದರೆ, ಏಕ್ಸಿಟ್ ಪೋಲ್ ನಲ್ಲಿ ಈ ಕ್ಷೇತ್ರ ಸೇರಿದಂತೆ ಮಹಾರಾಷ್ಟ್ರದಲ್ಲಿ 34 ಹಾಗೂ ಮುಂಬೈನ 6 ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಬಂದಿದೆ.

ಸುದ್ದಿಗೋಷ್ಠಿಯಲ್ಲಿ ಮೌನ: ಮೋದಿಯನ್ನು ಅಣಕಿಸಿದ ಕಾಂಗ್ರೆಸ್ ಸುದ್ದಿಗೋಷ್ಠಿಯಲ್ಲಿ ಮೌನ: ಮೋದಿಯನ್ನು ಅಣಕಿಸಿದ ಕಾಂಗ್ರೆಸ್

2014ರಲ್ಲಿ ಕಾಂಗ್ರೆಸ್ಸಿನ ಸಂಜಯ್ ನಿರುಪಮ್ ಅವರನ್ನು ಶೇ 47.2 ಮತಗಳ ಅಂತರದಿಂದ ಗೋಪಾಲ್ ಶೆಟ್ಟಿ ಸೋಲಿಸಿದ್ದರು. ಉತ್ತರಪ್ರದೇಶ ನಂತರ ಮಹಾರಾಷ್ಟ್ರ ಅತ್ಯಧಿಕ 48 ಸ್ಥಾನಗಳನ್ನು ಹೊಂದಿದೆ. ಹೀಗಾಗಿ, ಈ ರಾಜ್ಯದಲ್ಲಿ ಬಿಜೆಪಿ ಗೆಲುವಿನ ಮುನ್ಸೂಚನೆ ಸಿಕ್ಕಿರುವುದು ಸಂಭ್ರಮಾಚರಣೆಗೆ ನಾಂದಿ ಹಾಡಿದೆ.

English summary
It seems that the 17th Lok Sabha was a bit of a cakewalk for the Bharatiya Janata Party (BJP) as it is pretty confident of its victory even before the results of the Lok Sabha elections 2019 are declared.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X