ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮಿಷಗಳ ಅಂತರದಲ್ಲೇ ಮಹಿಳೆಗೆ ಮೂರು ಕೊರೊನಾ ಲಸಿಕೆ ಕೊಟ್ಟ ಸಿಬ್ಬಂದಿ

|
Google Oneindia Kannada News

ಮುಂಬೈ, ಜೂನ್ 30: ನಿಮಿಷಗಳ ಅಂತರದಲ್ಲೇ ಮಹಿಳೆಯೊಬ್ಬರಿಗೆ ಮೂರು ಡೋಸ್ ಕೊರೊನಾ ಲಸಿಕೆ ನೀಡಿರುವ ಸಂಗತಿ ಥಾಣೆಯಲ್ಲಿ ಬೆಳಕಿಗೆ ಬಂದಿದೆ.

ಥಾಣೆಯ ಆನಂದನಗರ ಕೋವಿಡ್ ಲಸಿಕಾ ಕೇಂದ್ರಕ್ಕೆ ಜೂನ್ 25ರಂದು 28 ವರ್ಷದ ರೂಪಾಲಿ ಸಾಲಿ ಎಂಬ ಮಹಿಳೆ ಲಸಿಕೆ ಪಡೆಯಲು ಬಂದಿದ್ದರು. ಆ ಸಂದರ್ಭ ಅವರಿಗೆ ಒಂದಾದ ನಂತರ, ನಿಮಿಷಗಳ ಅಂತರದಲ್ಲೇ ಒಟ್ಟು ಮೂರು ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ.

ಮೂರು ಲಸಿಕೆ ಪಡೆದುಕೊಂಡ ನಂತರ ಮಹಿಳೆ ಮನೆಗೆ ತೆರಳಿದ್ದು, ಆಗಲೇ ಅವರಲ್ಲಿ ಜ್ವರ ಕಾಣಿಸಿಕೊಂಡಿತ್ತು. ಇದರಿಂದ ಗಾಬರಿಯಾದ ಅವರು ಪತಿಗೆ ವಿಷಯ ತಿಳಿಸಿದ್ದಾರೆ. ಥಾಣೆ ನಗರಪಾಲಿಕೆ ನೌಕರರಾಗಿರುವ ಪತಿ ಈ ಸಂಗತಿಯನ್ನು ಸ್ಥಳೀಯ ಕಾರ್ಪೊರೇಟರ್ ಗಮನಕ್ಕೆ ತಂದಿದ್ದಾರೆ. ಆಗ ವೈದ್ಯಕೀಯ ಸಿಬ್ಬಂದಿ ಯಡವಟ್ಟು ಬೆಳಕಿಗೆ ಬಂದಿದೆ. ತಕ್ಷಣವೇ ವೈದ್ಯಾಧಿಕಾರಿಗಳಿಗೆ ದೂರಲಾಗಿದೆ.

Medical Staff Administered 3 Doses Of Corona Vaccine To woman Within Minutes In Thane

"ನನ್ನ ಪತ್ನಿಗೆ ಕೊರೊನಾ ಲಸಿಕೆಯ ಪ್ರಕ್ರಿಯೆ ಕುರಿತು ತಿಳಿದಿರಲಿಲ್ಲ. ಹೀಗಾಗಿ ಲಸಿಕೆ ನೀಡುವಾಗಲೂ ಅವರು ತಡೆದಿಲ್ಲ" ಎಂದು ಮಹಿಳೆ ಪತಿ ತಿಳಿಸಿದ್ದಾರೆ.

"ಸದ್ಯಕ್ಕೆ ವೈದ್ಯರು ಮಹಿಳೆ ಪರೀಕ್ಷೆ ನಡೆಸಿದ್ದು, ಯಾವುದೇ ಸಮಸ್ಯೆಯಿಲ್ಲ" ಎಂದು ಟಿಎಂಸಿ ವೈದ್ಯಕೀಯ ಆರೋಗ್ಯಾಧಿಕಾರಿ ಡಾ. ಕುಷ್ಬೂ ತಿಳಿಸಿದ್ದಾರೆ. ಈ ಸಂಗತಿಯ ತನಿಖೆಗೆ ಸಮಿತಿ ರಚಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಮಾತಾಡುತ್ತಾ ಒಂದೇ ವ್ಯಕ್ತಿಗೆ 5 ನಿಮಿಷದಲ್ಲಿ ಎರಡೂ ಡೋಸ್ ಲಸಿಕೆ ಕೊಟ್ಟ ಸಿಬ್ಬಂದಿಮಾತಾಡುತ್ತಾ ಒಂದೇ ವ್ಯಕ್ತಿಗೆ 5 ನಿಮಿಷದಲ್ಲಿ ಎರಡೂ ಡೋಸ್ ಲಸಿಕೆ ಕೊಟ್ಟ ಸಿಬ್ಬಂದಿ

"ಲಸಿಕೆ ನೀಡುವಾಗ ಇಂಥ ನಿರ್ಲಕ್ಷ್ಯ ಹೇಗೆ ಸಾಧ್ಯ? ಒಂದೇ ಮಹಿಳೆಗೆ ಮೂರು ಬಾರಿ ಲಸಿಕೆ ಹೇಗೆ ನೀಡುತ್ತಾರೆ? ಇದಕ್ಕೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು" ಎಂದ ಬಿಜೆಪಿ ಶಾಸಕ ನಿರಂಜನ್ ದಾವ್ಕೇರ್ ಆಗ್ರಹಿಸಿದ್ದಾರೆ. ಈ ಘಟನೆ ಕುರಿತು ವಿಚಾರಣೆ ನಡೆಸಲಿದ್ದು, ಕ್ರಮ ಕೈಗೊಳ್ಳುವುದಾಗಿ ಥಾಣೆ ಮೇಯರ್ ನರೇಶ್ ತಿಳಿಸಿದ್ದಾರೆ.

ಈಚೆಗೆ ಇಂಥ ಸಂಗತಿಗಳು ಅಲ್ಲಲ್ಲಿ ಕಂಡುಬರುತ್ತಿವೆ. ಉತ್ತರ ಪ್ರದೇಶದಲ್ಲಿಯೂ ಐದು ನಿಮಿಷಗಳ ಅಂತರದಲ್ಲಿ ಒಬ್ಬ ವ್ಯಕ್ತಿಗೆ ಎರಡು ಡೋಸ್ ಲಸಿಕೆ ನೀಡಲಾಗಿತ್ತು.

English summary
Medical staff administered three doses of Covid-19 vaccine to woman within minutes at a vaccination centre in thane. Probe is on...,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X