ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮಟ್ಕಾ ಕಿಂಗ್ ರತನ್ ಖತ್ರಿ ಇನ್ನಿಲ್ಲ

|
Google Oneindia Kannada News

ಮುಂಬೈ, ಮೇ 11: ಭಾರತದಲ್ಲಿ ಹಲವು ದಶಕಗಳ ಕಾಲ ಮಟ್ಕಾ ಸಾಮ್ರಾಜ್ಯವನ್ನು ಸೃಷ್ಟಿಸಿ, ಆಳಿ ಮಟ್ಕಾ ಕಿಂಗ್ ಎನಿಸಿಕೊಂಡಿದ್ದ ರತನ್ ಖತ್ರಿ ಅವರು ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಖತ್ರಿ ಅವರು ನವಜೀವನ್ ಸೊಸೈಟಿ ಪ್ರದೇಶದ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಭಾರತ-ಪಾಕಿಸ್ತಾನ ವಿಭಜನೆಯಾದಾಗ ಕರಾಚಿಯಿಂದ ಮುಂಬೈಗೆ ವಲಸೆ ಬಂದ ಖತ್ರಿ ಅವರು 1962ರಲ್ಲಿ ಮಟ್ಕಾ ಆರಂಭಿಸಿದ ಕಲ್ಯಣಿ ಭಗತ್ ಅವರ ಬಳಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ.

ಮಡಕಿ ತರಾಕ ರೊಕ್ಕ ಇಲ್ಲದಿದ್ರೂ ಮಟ್ಕ ಆಡ್ತಾಳಮಡಕಿ ತರಾಕ ರೊಕ್ಕ ಇಲ್ಲದಿದ್ರೂ ಮಟ್ಕ ಆಡ್ತಾಳ

1964 ರಲ್ಲಿ ತನ್ನದೇ ಆದ ರತನ್ ಮಟ್ಕಾ ಆರಂಭಿಸಿ, ಜೂಜಾಟದಲ್ಲಿ ಯಶಸ್ಸು ಗಳಿಸಿದ. ಯಶಸ್ಸಿನ ಉತ್ತುಂಗದಲ್ಲಿದ್ದಾಗ ದಿನವೊಂದಕ್ಕೆ 1 ಕೋಟಿ ರು ವಹಿವಾಟು ನಡೆಸಿದ ದಾಖಲೆಯೂ ಇದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 19 ತಿಂಗಳುಗಳ ಕಾಲ ಜೈಲುವಾಸ ಆನುಭವಿಸಿದ್ದ ರತನ್ 90ರ ದಶಕದ ತನಕ ಓಪನ್, ಕ್ಲೋಸ್ ವಹಿವಾಟು ನಡೆಸಿದ, ನಂತರ ಸುರೇಶ್ ಭಗತ್, ಅರುಣ್ ಗಾವ್ಲಿ ಗ್ಯಾಂಗಿನ ಪಪ್ಪು ಸಾವ್ಲಾ ಅವರು ಓಸಿ, ಮಟ್ಕಾ ದಂಧೆಯನ್ನು ಮುಂದುವರೆಸಿದ್ದು ಈಗ ಇತಿಹಾಸ.

Matka King Ratan Khatri no more

ಮಟ್ಕಾ ಅಥವಾ ಓಸಿ ಅರ್ಥಾತ್ ಓಪನ್ ಅಂಡ್ ಕ್ಲೋಸ್ ಆಟ ಭಲೇ ಸಿಂಪಲ್ಲು, ಆದ್ರೆ ಅಷ್ಟೇ ಕಾಂಪ್ಲಿಕೇಟೆಡ್ದು. ನಂಬರಿನ ಮೇಲೆ ದುಡ್ಡು ಕಟ್ಟೋ ಆಟ ಇದು. ಮಧ್ಯಾಹ್ನ, ಮತ್ತು ರಾತ್ರಿ ಎರಡು ಹಂತಗಳಲ್ಲಿ ಜೂಜು ನಡೆಯುತ್ತದೆ. ಜೂಜಾಡುವವರು ಮೊದಲಿಗೆ ಓಪನ್ ಒಂದರಿಂದ ಹತ್ತರೊಳಗಿನ ನಂಬರೊಂದರ ಮೇಲೆ ಜೂಜು ಕಟ್ಟಬಹುದು, ಅಥವಾ, ಒಂದರಿಂದ 99ರ ಒಳಗಿನ ಸಂಖ್ಯೆಯ ಮೇಲೂ ದುಡ್ಡು ಹಾಕಬಹುದು.

ರತನ ಖತ್ರಿ ಎಂಬ ಮನುಷ್ಯ 1962ರಲ್ಲಿ ಬೊಂಬಾಯಿಯಲ್ಲಿ ಈ ಮಟ್ಕಾವನ್ನು ಪ್ರಚಲಿತಗೊಳಿಸಿದ. ಬೊಂಬಾಯಿಯಲ್ಲಿ ಈತ ಪ್ರತಿ ರಾತ್ರಿ ಅಂದಿನ ನಂಬರ್ ಯಾವುದನ್ನುವುದನ್ನ ನಾಲ್ಕೆಂಟು ಜನರ ಮುಂದೆ ತಾನೇ ಲಾಟರಿ ಎತ್ತಿ ಅಂದಿನ ನಂಬರು ಯಾವುದೆಂದು ಹೇಳುತ್ತಿದ್ದ. ಯಾರೇ ಆಗಲಿ, ಅವರಾಡಿದ ನಂಬರು ಬಂದರೆ, ದುಡ್ಡು ಸಿಕ್ಕೇ ಸಿಗುತ್ತಿತ್ತು. ಅದೆಷ್ಟೇ ಲಕ್ಷ ಬೇಕಾದರೂ ಆಗಲಿ. ಯಾವುದೇ ಮೋಸ ಇರಲಿಲ್ಲ.

English summary
Known as Matka King Ratan Khatri (88) passed away. Ratan Khatri died at his home in Mumbai Central.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X