ಮಹಾರಾಷ್ಟ್ರದ ರಸ್ತೆ ಅಪಘಾತದಲ್ಲಿ ಖ್ಯಾತ ಹಿನ್ನಲೆ ಗಾಯಕಿ ಸಾವು
ಮುಂಬೈ, ನವೆಂಬರ್ 15: ಮಹಾರಾಷ್ಟ್ರದ ಥಾಣೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮರಾಠಿ ಖ್ಯಾತ ಗಾಯಕಿ ಮೃತಪಟ್ಟಿದ್ದಾರೆ.
ಗೀತಾ ಮಲಿ ಮೃತ ಗಾಯಕಿ, ಆಕೆ ತನ್ನ ಪತಿ ವಿಜಯ್ ಅವರ ಜೊತೆಯಲ್ಲಿ ಮುಂಬೈ-ಆಗ್ರಾ ಹೈವೇಯಲ್ಲಿ ಅಮೆರಿಕದಿಂದ ತಮ್ಮ ಊರು ನಾಸಿಕ್ಗೆ ಹಿಂದಿರುಗುತ್ತಿದ್ದರು.
ಬಿಜೆಪಿ ಸಂಸದ ಪ್ರಯಾಣಿಸುತ್ತಿದ್ದ ಕಾರು ಅಪಘಾತ
ಅಪಘಾತದಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಯಾಗದೆ ಗಾಯಕಿ ಸಾವನ್ನಪ್ಪಿದ್ದಾರೆ. ಗೀತಾ ಹಲವು ಮರಾಠಿ ಚಿತ್ರಗಳಿಗೆ ಹಾಡು ಹಾಡಿದ್ದಾರೆ. ಅಲ್ಲದೆ ತಮ್ಮ ಸ್ವಂತ ಮ್ಯೂಸಿಕ್ ಆಲ್ಬಂ ಕೂಡ ಶುರು ಮಾಡಿದ್ದರು.
ಗೀತಾ ಪ್ರಯಾಣಿಸುತ್ತಿದ್ದ ಕಾರು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಕಂಟೇನರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗೀತಾ ಮೃತಪಟ್ಟಿದ್ದಾಳೆ. ಗೀತಾ ಜೊತೆ ಆಕೆಯ ಪತಿ ವಿಜಯ್ ಕೂಡ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಅಪಘಾತದಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.