ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಬಂದ್‌ ಹಿಂಪಡೆದ ಮರಾಠ ಸಂಘಟನೆಗಳು

By Nayana
|
Google Oneindia Kannada News

ಮುಂಬೈ, ಜು.25: ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಬೇಕು ಎಂದು ಒತ್ತಾಯಿಸಿ ಕರೆ ನೀಡಿದ್ದ ಮಹಾರಾಷ್ಟ್ರ ಬಂದ್‌ ಹಿಂಪಡೆಯಲಾಗಿದೆ.

ಮಹಾರಾಷ್ಟ್ರ ಬಂದ್‌: ಆತ್ಮಹತ್ಯೆಗೆ ಯತ್ನಿಸಿದ್ದ ಪ್ರತಿಭಟನಾಕಾರ ಸಾವು ಮಹಾರಾಷ್ಟ್ರ ಬಂದ್‌: ಆತ್ಮಹತ್ಯೆಗೆ ಯತ್ನಿಸಿದ್ದ ಪ್ರತಿಭಟನಾಕಾರ ಸಾವು

ಈ ಕುರಿತು ಮರಾಠ ಸಂಘಟನೆಗಳು ಮಾಹಿತಿ ನೀಡಿದ್ದು, ಸರ್ಕಾರವನ್ನು ಎಚ್ಚರಿಸುವುದು ನಮ್ಮ ಉದ್ದೇಶವಾಗಿತ್ತು, ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಬೇಕು ಎನ್ನುವುದು ನಮ್ಮ ಬಹುದಿನಗಳ ಬೇಡಿಕೆಯಾಗಿತ್ತು, ಆದರೆ ಈ ಪ್ರತಿಭಟನೆ, ಬಂದ್‌ನಿಂದ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ ಎಂದು ತಿಳಿಸಿದೆ.

ಆದರೆ ಮಹಾರಾಷ್ಟ್ರ ಸರ್ಕಾರದ ಮೇಲೆ ನಮಗೆ ಅಸಮಧಾನವಿದೆ ಎಂದು ತಿಳಿಸಿದೆ. ಮಂಗಳವಾರ ಪ್ರತಿಭಟನೆ ವೇಳೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಮರಾಠ ಸಮು ದಾಯದ ಜಗನ್ನಾಥ್‌ ಸೋನಾವ್ನೆ ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

Maratha groups call off bandh but say they are upset with govt measures

ಸೋಮವಾರ ಔರಂಗಾಬಾದ್‌ನಲ್ಲಿ ಗೋದಾವರಿ ನದಿಗೆ ದುಮುಕಿ ಕಾಕಾಸಾಹೇಬ್‌ ಶಿಂದೆ ಎನ್ನುವವರು ಸೋಮವಾರ ಮೃತಪಟ್ಟಿದ್ದರು. ಸಾವಿನ ಬಳಿಕ ಪ್ರತಿಭಟನೆ ಇನ್ನಷ್ಟು ತೀವ್ರತೆಯನ್ನು ಪಡೆದುಕೊಂಡು ಹಿಂಸಾಚಾರವೂ ಆರಂಭವಾಗಿತ್ತು.
ಇದೀಗ ಮತ್ತೊಂದು ಪ್ರತಿಭಟನಾಕಾರ ಮೃತಪಟ್ಟಿರುವ ಹಿನ್ನೆಲೆ ಇನ್ನಷ್ಟು ಉದ್ವಿಗ್ನಗೊಳ್ಳುವ ಸಾಧ್ಯತೆ ಇದೆ. ಜಗನ್ನಾಥ್‌ ಮಂಗಳವಾರ ವಿಷ ಕುಡಿದು ಆತ್ಮಹತ್ಯೆಗೆ ತನ್ಇಸಿದ್ದ ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಬಂದ್‌: ಗುಂಪುಗಳ ನಡುವೆ ಘರ್ಷಣೆ, ಉದ್ವಿಗ್ನಗೊಂಡ ಉದಗಿರಿಬಂದ್‌: ಗುಂಪುಗಳ ನಡುವೆ ಘರ್ಷಣೆ, ಉದ್ವಿಗ್ನಗೊಂಡ ಉದಗಿರಿ

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ತಮ್ಮ ಸಮುದಾಯದ ಮೀಸಲಾತಿ ಬೇಡಿಕೆಯನ್ನು ಪರಿಗಣಿಸುವುದಾಗಿ ಹಲವು ಬಾರಿ ಭರವಸೆ ನೀಡಿರುವ ಹೊರತಾಗಿಯೂ ಅವರು ಈವರೆಗೆ ಏನನ್ನೂ ಮಾಡಿಲ್ಲ ಎಂದು ಮರಾಠಾ ಸಂಘಟನೆಗಳು ಆಕ್ಷೇಪಿಸಿವೆ. ಹಿಂಸಾಚಾರಗಳು ನಮ್ಮ ಉದ್ದೇಶವಲ್ಲ ಹಾಗಾಗಿ ಈ ಬಂದ್‌ ವಾಪಸ್‌ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.

English summary
We only wanted to prove that we are together. We never wanted protests to get violent," the groups told the press as they called off the state-wide bandh on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X