ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

400 ಕೋಟಿಗೆ ಮಣಿಪಾಲ್ ತೆಕ್ಕೆಗೆ ನಾನಾವತಿ ಆಸ್ಪತ್ರೆ

By Srinath
|
Google Oneindia Kannada News

ಬೆಂಗಳೂರು, ಮೇ 20: ನಾಡಿನ ಹೆಸರಾಂತ ಉದ್ಯಮಿಗಳಾದ ರಂಜನ್ ಪೈ ಮಾಲೀಕತ್ವದ ಮಣಿಪಾಲ್ ಹೆಲ್ತ್ ಎಂಟರಪ್ರೈಸಸ್ (MHE) ತನ್ನ ಸಾಮ್ರಾಜ್ಯವನ್ನು ಮತ್ತೆ ವಿಸ್ತರಿಸಿಕೊಂಡಿದೆ. ಖಚಿತ ಮೂಲಗಳ ಪ್ರಕಾರ ಮಣಿಪಾಲ್ ಆಸ್ಪತ್ರೆಯು ಮುಂಬೈ ಮೂಲದ ಡಾ. ಬಾಲಾಭಾಯ್ ನಾನಾವತಿ ಆಸ್ಪತ್ರೆಯನ್ನು 400 ಕೋಟಿ ರೂಗೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಮುಂಬೈನ ವಿಲೆ ಪಾರ್ಲೆಯಲ್ಲಿರುವ ನಾನಾವತಿ ಆಸ್ಪತ್ರೆ 350 ಹಾಸಿಗೆಗಳುಳ್ಳ ಸುಪ್ರಸಿದ್ದ ಆಸ್ಪತ್ರೆಯಾಗಿದೆ. ಆದರೆ ನಾನಾವತಿ ಆಸ್ಪತ್ರೆಯ ಈಗಿರುವ ಸಾಲಗಳು, ಕಾರ್ಯಕಾರಿ ಬಂಡವಾಳ, ವಿಸ್ತರಣೆ ಯೋಜನೆ ಮತ್ತು ಹಾಲಿ 1,400 ಸಿಬ್ಬಂದಿಗೆ ಸ್ವಯಂ ನಿವೃತ್ತಿ ಕಲ್ಪಿಸಲು ಈ 400 ಕೋಟಿ ರೂ ವ್ಯಯವಾಗಲಿದೆ ಎಂದು ಮೂಲಗಳು ತಿಳಿಸಿವೆ. ಅಂದಹಾಗೆ 65 ವರ್ಷದ ನಾನಾವತಿ ಆಸ್ಪತ್ರೆಯ ಈಗ ಟ್ರಸ್ಟ್ ಒಂದರ ಸುಪರ್ದಿಯಲ್ಲಿದೆ.

Bangalore- Manipal Health Enterprises may take over Nanavati Hospital in Mumbai

ದೇಶ, ವಿದೇಶಗಳಲ್ಲಿ ಉದ್ಯಮವನ್ನು ವಿಸ್ತರಿಸುವ ಹಂಬಲದಲ್ಲಿ ರಂಜನ್ ಪೈ ಅವರು ಇದೀಗ ರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬೈಗೆ ಕಾಲಿಟ್ಟಿರುವುದು ನಾಡಿನ ಹೆಮ್ಮೆಯ ವಿಷಯ. ಕಳೆದ ವರ್ಷ ಕೌಲಾಲಂಪುರದಲ್ಲಿ 72 ಹಾಸಿಗೆ ಸಾಮರ್ಥ್ಯ ಆಸ್ಪತ್ರೆ ಮತ್ತು ಜೈಪುರದಲ್ಲಿ 280 ಹಾಸಿಗೆಗಳುಳ್ಳ ಆಸ್ಪತ್ರೆಯನ್ನು ಮಣಿಪಾಲ್ ಆಸ್ಪತ್ರೆಯು ತನ್ನ ಒಡೆತನಕ್ಕೆ ತೆಗೆದುಕೊಂಡಿದೆ.

ಕಳೆದೊಂದು ವರ್ಷದಿಂದ ನಾನಾವತಿ ಆಸ್ಪತ್ರೆ ಮತ್ತು ಮಣಿಪಾಲ್ ಆಸ್ಪತ್ರೆ ನಡುವೆ ಮಾತುಕತೆ ನಡೆದಿತ್ತು. ಇನ್ನೂ ಕೆಲ ಹೆಲ್ತ್ ಕೇರ್ ಕಂಪನಿಗಳು ನಾನಾವತಿ ಆಸ್ಪತ್ರೆ ಖರೀದಿಗೆ ಮುಂದಾಗಿದ್ದವು. ಆದರೆ ಕೊನೆಗೆ ತೀವ್ರ ಸ್ಪರ್ಧೆಯ ನಂತರ ಮಣಿಪಾಲ್ ಆಸ್ಪತ್ರೆಯು ನಾನಾವತಿ ಆಸ್ಪತ್ರೆಯನ್ನು ತನ್ನ ಮಡಿಲಿಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

English summary
According to reports Bangalore-besed Manipal Health Enterprises may take over Nanavati Hospital in Mumbai for Rs 400 crore. The 65-year-old Nanavati Hospital is run by a trust. Post the transaction, which is expected to close in a fortnight, the hospital will have a joint branding, a source close to the matter informed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X