• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೆಂಡ್ತಿ ಓಡಿಹೋದ್ಲು ಅಂತ ಮಕ್ಕಳೊಂದಿಗೆ ಆತ್ಮಹತ್ಯೆ

By Srinath
|

ಮಂಗಳೂರು, ಫೆ.20: ಕಟ್ಟಿಕೊಂಡ ಹೆಂಡತಿ ತನ್ನನ್ನು- ಮಕ್ಕಳನ್ನು ಬಿಟ್ಟು ಪಕ್ಕದ ಮನೆಯವನ ಜತೆ ಸಂಸಾರ ಹೂಡಿದಳೆಂದು ಬೇಸರಗೊಂಡ ವ್ಯಕ್ತಿ ತನ್ನಿಬ್ಬರು ಎಳೆಯ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.

ಮುಂಬೈ ಮಹಾನಗರದ ನಳ್ಳಸೊಪೋರಾದಲ್ಲಿ ಗಣೇಶ್ ಕಾಂಪ್ಲೆಕ್ಸಿನಲ್ಲಿ ಮಂಗಳವಾರ ರಾತ್ರಿ ಈ ವಿಚಿತ್ರ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಮಂಗಳೂರಿನ ತಾಳಪಾಡಿಯ ಶ್ರೀಧರ ಶೆಟ್ಟಿ ಎಂದು ಗುರುತಿಸಲಾಗಿದೆ. 48 ವರ್ಷದ ಶ್ರೀಧರ ಶೆಟ್ಟಿ ತನ್ನಿಬ್ಬರು ಪುತ್ರಿಯರಾದ ಶ್ರದ್ಧಾ ಶೆಟ್ಟಿ (9) ಮತ್ತು ಸಾಯಿ ದಯಾ ಶೆಟ್ಟಿ (3)ಗೆ ಮೊದಲು ವಿಷ ಉಣಿಸಿ, ನಂತರ ತಾನು ನೇಣಿಗೆ ಗೋಣೊಡ್ಡಿ ಇಹಲೋಕದ ಸಂಗ ತೊರೆದಿದ್ದಾರೆ.

ಶ್ರೀಧರ ಶೆಟ್ಟಿ ಮುಂಬೈನ ಹೋಟೆಲೊಂದರಲ್ಲಿ ಸೂಪರ್ ವೈಸರ್ ಆಗಿ ದುಡಿಯುತ್ತಿದ್ದ. ಆದರೆ ಆತನ ಪತ್ನಿ ಸೋನಾಲಿ ಪಕ್ಕದ ಮನೆಯ ಯುವಕನ ಜತೆ ಅಕ್ರಮ ಸಂಬಂಧ ಬೆಳೆಸಿ, ಅವನೊಂದಿಗೆ ಬಾಳ್ವೆ ನಡೆಸಲು ಶುರುಹಚ್ಚಿಕೊಂಡಿದ್ದರಿಂದ ಎದೆಗುಂದಿದ ಶ್ರೀಧರ ಶೆಟ್ಟಿ ತೀವ್ರ ಹತಾಶೆಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊನ್ನೆ ವ್ಯಾಲೆಂಟೈನ್ಸ್ ಡೆ ಸಂದರ್ಭದಲ್ಲಿ ಏನಾಯಿತೆಂದರೆ

ಶ್ರೀಧರನ ಪತ್ನಿ ಸೋನಾಲಿ, ತನ್ನ ಎಳೆಯ ಕಂದಮ್ಮಗಳು ಮತ್ತು ಪತಿರಾಯನನ್ನು ಬಿಟ್ಟು ಪಕ್ಕದಲ್ಲೇ ವಾಸವಾಗಿದ್ದ ತೇಜಸ್ ಅನೂಪ್ ಜೋಶಿ ಜತೆ ವಾಸವಾಗತೊಡಗಿದಳು. ಇದರಿಂದ ಹತಾಶೆಗೊಂಡ ಶ್ರೀಧರ ಶೆಟ್ಟಿ, ಫೆ. 18ರಂದು ಸೋನಾಲಿ ಮತ್ತು ತೇಜಸ್ ಮನೆಯಿಂದ ಹೊರಹೋಗಿದ್ದನ್ನು ನೋಡಿಕೊಂಡು, ಇತ್ತ ಮಕ್ಕಳಿಗೆ ವಿಷವುಣಿಸಿದ್ದಾನೆ. ನಂತರ, ತಾನು ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ.

ಪರಲೋಕಕ್ಕೆ ಹೋಗುವ ಮುನ್ನ ಆತ್ಮಹತ್ಯೆ ಪತ್ರ ಬರೆದಿಟ್ಟು ನನ್ನ ಹೆಂಡತಿ ನನ್ನ ಕೈಬಿಟ್ಟು ಹೋಗಿದ್ದಕ್ಕೆ ಭಾರಿ ನಿರಾಶೆಯಾಗಿದೆ. ಇನ್ನು ಜೀವನ ಬೇಡ ಅನ್ನಿಸಿದೆ. ಹಾಗಾಗಿ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹತಾಶೆಯಿಂದ ಹೇಳಿಕೊಂಡಿದ್ದಾನೆ.

English summary
Mangalore Sridhar Shetty (48) kills kids commits suicide in Mumbai as wife Sonali elopes with a neighbor named Tejas Anoop Joshi. Sridhar Shetty, a native of Talapady, who was working as a supervisor in a hotel, committed suicide after poisoning his young kids before hanging himself late night on Tuesday February 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X