ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

14 ವರ್ಷಗಳ ಬಳಿಕ ಪಿಕ್ ಪಾಕೆಟ್ ಆಗಿದ್ದ ಪರ್ಸ್ ವಾಪಸ್!

|
Google Oneindia Kannada News

ಮುಂಬೈ, ಆ. 10: ಮುಂಬೈನ ಲೋಕಲ್ ಟ್ರೈನ್ ನಲ್ಲಿ ಪ್ರಯಾಣಿಸುವಾಗ ವ್ಯಕ್ತಿಯೊಬ್ಬರ ಪರ್ಸ್ ಪಿಕ್ ಪಾಕೆಟ್ ಆಗಿತ್ತು. ಆ ಪರ್ಸ್ 14 ವರ್ಷಗಳ ಬಳಿಕ ಕಳೆದುಕೊಂಡಿದ್ದ ವ್ಯಕ್ತಿ ಕೈಸೇರಿರುವ ಘಟನೆ ನಡೆದಿದೆ.

2006ರಲ್ಲಿ ಹೇಮಂತ್ ಪಡಲ್ಕರ್ ಅವರು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಂದ ಪನ್ವೇಲ್ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುವಾಗ ಪರ್ಸ್ ಕಳೆದುಕೊಂಡಿದ್ದರು. ಈ ಪರ್ಸ್ ನಲ್ಲಿ 900 ರೂ. ಇತ್ತು. ಅಚ್ಚರಿಯೆಂದರೆ 14 ವರ್ಷಗಳ ಬಳಿಕ ಹೇಮಂತ್ ಕೈ ಸೇರಿದ ಪರ್ಸ್ ನಲ್ಲಿ 900 ರು ಹಾಗೆ ಇದೆ.

ಪರ್ಸ್ ಕಳೆದು ಹೋದಾಗ ದೂರು ದಾಖಲಿಸಿದ್ದರು. ಮುಂಬೈ ಪೊಲೀಸರು ಪರ್ಸ್ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿ ಕರೆ ಮಾಡಿದ್ದಾರೆ. ಏಪ್ರಿಲ್ ತಿಂಗಳಲ್ಲೇ ಪರ್ಸ್ ಸಿಕ್ಕಿರುವ ಬಗ್ಗೆ ವಾಶಿಯಾ ರೈಲ್ವೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು. ಆದರೆ, ಕೊರೊನಾವೈರಸ್ ಕಾರಣದಿಂದಾಗಿ ಲಾಕ್ಡೌನ್ ಹೇರಲಾಗಿತ್ತು ಹೀಗಾಗಿ, ಪಡಲ್ಕರ್ ಪರ್ಸ್ ಪಡೆಯಲು ಸಾಧ್ಯವಾಗಿರಲಿಲ್ಲ.

Man Got His Missing Purse Back After 14 Years

ಈಗ ನಿರ್ಬಂಧ ಸಡಿಲಿಕೆಯ ನಂತರ ಪನ್ವೇಲ್ ನಿವಾಸಿಯಾದ ಪಡಲ್ಕರ್ ವಾಶಿಯಲ್ಲಿರುವ ರೈಲ್ವೆ ಪೊಲೀಸರ ಕಚೇರಿಗೆ ತೆರಳಿ ತಮ್ಮ ಪರ್ಸ್ ಹಾಗೂ ಹಣ ಪಡೆದುಕೊಂಡಿದ್ದಾರೆ. ನನ್ನ ಪರ್ಸ್‌ನಲ್ಲಿ 900 ರೂ. ಇತ್ತು. ಇದರಲ್ಲಿ 2016ರಲ್ಲಿ ಅಮಾನ್ಯೀಕರಣಗೊಂಡ 500 ರೂ.ಗಳ ಒಂದು ನೋಟು ಸೇರಿದೆ. ಪೊಲೀಸರು ಸ್ಟಾಂಪ್ ಪೇಪರ್ ಕೆಲಸಕ್ಕಾಗಿ 100 ರೂ.ಗಳನ್ನು ಕಡಿತಗೊಳಿಸಿದ್ದಾರೆ. ನನಗೆ 300 ರೂ. ನೀಡಿದ್ದು, ರದ್ದಾದ 500 ರೂ.ಗಳನ್ನು ಬದಲಿಸಿ ಹೊಸ ನೋಟಿನಲ್ಲಿ ಕೊಡುವುದಾಗಿ ತಿಳಿಸಿದ್ದಾರೆ ಎಂದು ಪಡಲ್ಕರ್ ಹೇಳಿದರು.

English summary
man finds his old purse back. This purse was lost in the local train of Mumbai 14 years ago and at that time there was Rs 900 in this purse
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X