ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್‌ ಪೇನಿಂದ ಕರೆಂಟ್ ಬಿಲ್ ಕಟ್ಟಲು ಹೋಗಿ 96 ಸಾವಿರ ಕಳೆದುಕೊಂಡ

|
Google Oneindia Kannada News

ಮುಂಬೈ, ಸೆಪ್ಟೆಂಬರ್ 12: ಗೂಗಲ್ ಪೇ ಮೂಲಕ ವಿದ್ಯುತ್ ಬಿಲ್ ಕಟ್ಟಲು ಹೋಗಿ ವ್ಯಕ್ತಿಯೊಬ್ಬ 96 ಸಾವಿರ ರೂ ಕಳೆದುಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಆದರೆ ಇದು ಗೂಗಲ್ ಪೇ ನಿಂದ ಆಗಿದ್ದಲ್ಲ, ಸೈಬರ್ ಕಳ್ಳರು ಗೂಗಲ್‌ ಪೇಯನ್ನು ದಾಳವಾಗಿ ಬಳಸಿಕೊಂಡು ಹಣ ಕದಿಯಲು ಆರಂಭಿಸಿದ್ದಾರೆ.

ಮುಂಬೈ ಮೂಲದ 31 ವರ್ಷದ ವ್ಯಕ್ತಿಯೊಬ್ಬರಿಗೆ ವಂಚಕನೊಬ್ಬ ಗೂಗಲ್ ಪೇ ಕಸ್ಟಮರ್ ಕೇರ್ ಅಧಿಕಾರಿ ಎಂದು ಸುಳ್ಳು ಹೇಳಿ, 96 ಸಾವಿರ ರೂ. ಹಣವನ್ನು ವಂಚಿಸಿದ್ದಾನೆ. ವಂಚನೆಗೊಳಗಾದ ವ್ಯಕ್ತಿ ಅಂಧೇತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಆ ವ್ಯಕ್ತಿ ಗೂಗಲ್ ಪೇ ಮೂಲಕ ಕರೆಂಟ್ ಬಿಲ್ ಪಾವತಿಸಲು ಹೊರಟಿದ್ದರು. ಹಣ ವರ್ಗಾವಣೆ ಸಂದರ್ಭದಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ವರ್ಗಾವಣೆಯಾಗಿಲ್ಲ.

17 ಲಕ್ಷ ಮಂದಿಗೆ 5000 ಕೋಟಿ ವಂಚಿಸಿದ ಪವನ್ ಬಂಧನ17 ಲಕ್ಷ ಮಂದಿಗೆ 5000 ಕೋಟಿ ವಂಚಿಸಿದ ಪವನ್ ಬಂಧನ

ಬಳಿಕ ಕಸ್ಟಮರ್ ಕೇರ್ ನಂಬರ್‌ಗೆ ಕರೆ ಮಾಡಿದ್ದಾರೆ ಆಗ ಅಲ್ಲಿ ಒಂದು ನಂಬರ್ ಕಂಡಿದೆ,ಕಾಲ್ ಮಾಡಿದಾಗ, ಹಣ ಪಾವತಿ ಮಾಡುವಾಗ ಸಾಮಾನ್ಯವಾಗಿ ಸಮಸ್ಯೆ ಎದುರಾಗುತ್ತದೆ ಹಾಗಾಗಿ ತಲೆ ಕೆಡಿಸಿಕೊಳ್ಳಬೇಡಿ ಎಂದು ನಾನೊಂದು ಲಿಂಕ್ ಕಳುಹಿಸುತ್ತೇನೆ. ಆ ಲಿಂಕ್ ಕ್ಲಿಕ್ ಮಾಡಿ ಎಂದು ಸೂಚಿಸಿದ್ದಾನೆ.

ನೌಕರಿ ಕೊಡಿಸುವುದಾಗಿ ವಂಚನೆ; ಹಣ ಕೇಳಿದ್ದಕ್ಕೆ ಥಳಿಸಿದ ಆರೋಪಿನೌಕರಿ ಕೊಡಿಸುವುದಾಗಿ ವಂಚನೆ; ಹಣ ಕೇಳಿದ್ದಕ್ಕೆ ಥಳಿಸಿದ ಆರೋಪಿ

ಈತನ ಮಾತಿನ ಮೇಲೆ ನಂಬಿಕೆ ಇಟ್ಟು ವ್ಯಕ್ತಿ ಲಿಂಕ್ ಕ್ಲಿಕ್ ಮಾಡಿದಾಗ ಅವರ ಖಾತೆಯಿಂದ 96 ಸಾವಿರ ರೂ. ಹಣ ವಂಚಕನ ಖಾತೆಗೆ ಹೋಗಿದೆ. ಹಣ ವರ್ಗಾವಣೆಯದ ನಂತರ ತಾನು ವಂಚನೆ ಒಳಗಾದ ವಿಚಾರ ವ್ಯಕ್ತಿಗೆ ಗೊತ್ತಾಗಿದೆ.

ಗೂಗಲ್ ಪೇ ಹೆಸರಲ್ಲಿ ವಂಚನೆ ದೂರು ದಾಖಲಾಗಿದ್ದು ಅನಾಮಿಕ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಗೂಗಲ್ ಪೇ ಫೋನ್ ಪೇ ಆಪ್‌ಗಳಲ್ಲಿ ವಂಚನೆ ಹೇಗೆ ನಡೆಯುತ್ತೆ?

ಗೂಗಲ್ ಪೇ ಫೋನ್ ಪೇ ಆಪ್‌ಗಳಲ್ಲಿ ವಂಚನೆ ಹೇಗೆ ನಡೆಯುತ್ತೆ?

ಯುಪಿಐ ಆಧಾರಿತ ಮೂಲಕ ಹಣ ವಹಿವಾಟು ನಡೆಸುವ ವ್ಯವಸ್ಥೆಯಲ್ಲಿ ಅಷ್ಟೇನೂ ಜನಪ್ರಿಯವಲ್ಲದ ಒಂದು ಫೀಚರ್ ಮೂಲಕ ಹಣ ದೋಚುತ್ತಿರುವ ಘಟನೆಗಳು ವರದಿಯಾಗಿವೆ. ಯುಪಿಐ ಪೇಮೆಂಟ್ ಆಪ್‌ಗಳಲ್ಲಿ ಹಣ ಕೇಳುವುದಕ್ಕಾಗಿ ಅಥವಾ ನಮಗೆ ಯಾರಿಂದಲಾದರೂ ಹಣ ಬರಬೇಕಿದೆ ಎಂದಾದರೆ ನಾವು ಅವರಿಗೆ ಮೊಬೈಲ್ ಆಪ್‌ನಲ್ಲಿ ವಿನಂತಿ ಕಳುಹಿಸಬಹುದು. ಇದನ್ನೇ ಬಳಸಿಕೊಂಡು ವಂಚಕರು ಗ್ರಾಹಕರ ಹಣಕ್ಕೆ ಕನ್ನಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ಗೂಗಲ್ ಪೇ, ಫೋನ್ ಪೇ ಆಪ್‌ಗಳು ಸೇರಿದಂತೆ ಯುಪಿಐ ಆಧಾರಿತವಾಗಿ ಹಣ ವಹಿವಾಟು ನಡೆಸುವ ಎಲ್ಲಾ ಮೊಬೈಲ್‌ ಆಪ್‌ಗಳಲ್ಲಿ 'ರಿಕ್ಷೆಸ್ಟ್ ಮನಿ' ಎಂಬ ಆಯ್ಕೆ ಇರುತ್ತದೆ. ಈ 'ರಿಕ್ಷೆಸ್ಟ್ ಮನಿ' ಆಯ್ಕೆಯಲ್ಲಿ ಓರ್ವ ತನ್ನ ಭೀಮ್ ಅಪ್ಲಿಕೇಶನ್‌ ಅಥವಾ ತನ್ನ ಬ್ಯಾಂಕ್‌ ಯುಪಿಐ ಅಪ್ಲಿಕೇಶನ್‌ ಮೂಲಕ ಇತರರಿಗೆ ಹಣ ಕಳುಹಿಸಲು ವಿನಂತಿ ಕಳುಹಿಸಬಹುದು. ಆ ರಿಕ್ವೆಸ್ಟ್ ಗೆ ಆತ ಓಕೆ ಕೊಟ್ಟರೆ ಅವನ ಖಾತೆಯಿಂದ ಹಣ ರಿಕ್ಷೆಸ್ಟ್ ಕಳುಹಿಸಿದ ವ್ಯಕ್ತಿಯ ಖಾತೆಗೆ ಹೋಗುತ್ತದೆ.

ರಿಕ್ವೆಸ್ಟ್‌ ಮನಿ ಸೌಲಭ್ಯ ದುರ್ಬಳಕೆ

ರಿಕ್ವೆಸ್ಟ್‌ ಮನಿ ಸೌಲಭ್ಯ ದುರ್ಬಳಕೆ

ಈ 'ರಿಕ್ಷೆಸ್ಟ್ ಮನಿ' ಎಂಬುದುದು ಒಂದು ಒಳ್ಳೆಯ ಸೌಲಭ್ಯವಾದರೂ ಕೂಡ, ಇದನ್ನೇ ದುರ್ಬಳಕೆ ಮಾಡಿಕೊಳ್ಳುವ ಹೊಸ ವಿಧಾನವೊಂದು ಚಾಲ್ತಿಗೆ ಬಂದಿದೆ. ಯಾರೋ ಅನಾಮಿಕರು ಕರೆ ಮಾಡಿ, ನಿಮಗೆ 50 ಸಾವಿರ ರೂ. ಬಹುಮಾನ ಬಂದಿದೆ. ಈಗಲೇ ನಾವು ವರ್ಗಾವಣೆ ಮಾಡುತ್ತೇವೆ. ಅದಕ್ಕೆ ನೀವು ಮಾಡಬೇಕಾದ್ದಿಷ್ಟೇ. ನಿಮ್ಮ ಪೇಮೆಂಡ್ ಅಪ್ಲಿಕೇಶನ್‌ ಓಪನ್‌ ಮಾಡಿ ಅದರಲ್ಲಿ ರಿಕ್ವೆಸ್ಟ್ ಬಂದ ತಕ್ಷಣ ಅಕ್ಸೆಪ್ಟ್ ಅಂತ ಕೊಟ್ಟುಬಿಡಿ ಎಂದು ಹೇಳುತ್ತಾರೆ. ಡಿಜಿಟಲ್‌ ಪೇಮೆಂಟ್‌ ಆ್ಯಪ್‌ 'ಗೂಗಲ್‌ ಪೇ' ಬಳಕೆದಾರನಿಂದ ಮಾಹಿತಿ ಪಡೆದ ಆನ್‌ಲೈನ್‌ ಖದೀಮರು, ಅಕೌಂಟ್‌ ಹ್ಯಾಕ್‌ ಮಾಡಿ ಬರೋಬ್ಬರಿ 27 ಸಾವಿರ ರೂ. ದೋಚಿದ್ದಾರೆ. ಮತ್ತಿಕೆರೆಯಲ್ಲಿ ಆಟೊಮೊಬೈಲ್‌ ಮಳಿಗೆ ನಡೆಸುತ್ತಿರುವ ಮಹಾವೀರ್‌ ವಂಚನೆಗೊಳಗಾಗಿದ್ದು, ಈ ಸಂಬಂಧ ನಗರ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ರಿಕ್ವೆಸ್ಟ್‌ ಅಕ್ಸೆಪ್ಟ್ ಮಾಡಿದರೆ ನಿಮ್ಮ ಹಣ ಕಳೆದುಕೊಳ್ಳುತ್ತೀರ

ರಿಕ್ವೆಸ್ಟ್‌ ಅಕ್ಸೆಪ್ಟ್ ಮಾಡಿದರೆ ನಿಮ್ಮ ಹಣ ಕಳೆದುಕೊಳ್ಳುತ್ತೀರ

ನಾನು ಫೋನ್‌ನಲ್ಲೇ ಇರುತ್ತೇನೆ. ನೀವು ಈಗಲೇ ಆ ರಿಕ್ವೆಸ್ಟ್ ಅನ್ನು ಅಕ್ಸೆಪ್ಟ್ ಮಾಡಿ ಎಂದು ಹೇಳುತ್ತಾರೆ. ಆದರೆ. ವಾಸ್ತವವಾಗಿ ನಾವು ಅಕ್ಸೆಪ್ಟ್ ಮಾಡುವುದು ತನ್ನ ಖಾತೆಯಿಂದ ಆ ಅನಾಮಿಕನ ಖಾತೆಗೆ ಹಣ ವರ್ಗಾವಣೆಯನ್ನು ಕೇಳಿರುತ್ತದೆ.! ನಂತರ ಪಿನ್ ನಮೂದಿಸಿದರೆ ಹಣ ಕೂಡ ಖಾಲಿಯಾಗುತ್ತದೆ. ಫೋನ್‌ನಲ್ಲಿದ್ದಾಗ ನಮ್ಮ ಗಮನ ನೋಟಿಸ್ ಓದುವುದರ ಮೇಲೆ ಇರುವುದಿಲ್ಲವಾದ್ದರಿಂದ ಹೀಗೆ ಯಾಮಾರಿಸುವುದು ಬಹಳ ಸುಲಭವಾಗಿದೆ.

ಟೆಕ್ನಾಲಜಿಯ ಅನುಕೂಲವನ್ನು ಅನನುಕೂಲವನ್ನಾಗಿ ಮಾಡುವ ಕ್ರಮ

ಟೆಕ್ನಾಲಜಿಯ ಅನುಕೂಲವನ್ನು ಅನನುಕೂಲವನ್ನಾಗಿ ಮಾಡುವ ಕ್ರಮ

ಟೆಕ್ನಾಲಜಿಯಲ್ಲಿರುವ ಅನುಕೂಲವನ್ನೇ ಅನಾನುಕೂಲವನ್ನಾಗಿ ಮಾಡುವ ಒಂದು ಕುತಂತ್ರ ಕೂಡ ಇದಾಗಿದ್ದು, ಎಂಥ ವ್ಯಕ್ತಿಯೇ ಆದರೂ ಇಂಥ ಸನ್ನಿವೇಶದಲ್ಲಿ ಯಾಮಾರಬಹುದು. ಆದರೆ, ಎಂಥಧ್ದೋ ಹಣ ಬರುವುದಿದೆ ಎಂದೋ ಅಥವಾ ಮತ್ತೆಲ್ಲಿಂದಲೋ ಹಣ ಬರುತ್ತದೆ ಎಂದಾಗ ಖುಷಿಪಡಬಾರದು. ಈ ವೇಳೆಯಲ್ಲಿ ನಾವು ಸ್ವಲ್ಪ ಎಚ್ಚರ ವಹಿಸಿದರೆ ಇಲ್ಲೇ ಇದು ಸುಳ್ಳು ಎಂದು ಗೊತ್ತು ಮಾಡಿಬಿಡಬಹುದು. ಗೋಗಲ್‌ ಪೇ ಕಸ್ಟಮರ್‌ ಕೇರ್‌ನಿಂದ ಮಾತನಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರ ಖಾತೆಯಿಂದ ಒಂದು ಲಕ್ಷ ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿದ ಘಟನೆ ಇತ್ತೀಚಿಗೆ ನಡೆದಿದೆ.

English summary
Man Duped 96 Thousand While Paying Electricity Bill On Google Pay, If you do online transactions then it is important to be vigilant and don't fall for traps set by these fraudster.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X