ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಡಿಕಲ್ ಶಾಪ್‌ನಲ್ಲಿ ಬಿಯರ್ ಮಾರಾಟ: ಮಾಲೀಕನ ಬಂಧನ

|
Google Oneindia Kannada News

ನಾಗ್ಪುರ, ಏಪ್ರಿಲ್ 15: ಮೆಡಿಕಲ್ ಶಾಪ್‌ನಲ್ಲಿ ಬಿಯರ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ನಾಗ್ಪುರದಲ್ಲಿ ಈ ಘಟನೆ ನಡೆದಿದೆ.

ಲಾಕ್‌ಡೌನ್ ಹಿನ್ನಲೆ ಮದ್ಯದ ಅಂಗಡಿಗಳು ಬಂದ್ ಆಗಿದೆ. ಮೇ 3ರವರೆಗೆ ಮತ್ತೆ ಲಾಕ್‌ಡೌನ್ ಮುಂದುವರೆದಿದ್ದು, ಕುಡುಕರಿಗೆ ಭಾರಿ ನಿರಾಸೆಯಾಗಿದೆ. ಕುಡಿತದ ಚಟ ಇದ್ದವರು ಅಡ್ಡ ಹಾದಿ ಮೂಲಕ ಮದ್ಯದ ಬಾಟಲಿ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಮೆಡಿಕಲ್ ಶಾಪ್‌ನಲ್ಲಿ ಮಾತ್ರಗಳ ಜೊತೆಗೆ ಬಿಯರ್ ಮಾರಾಟ ಮಾಡುತ್ತಿದ್ದ.

ಮೇ 3ರವರೆಗೆ ಮದ್ಯ ಸಿಗೋಲ್ಲ: ದಾವಣಗೆರೆ ಡಿಸಿ ಆದೇಶಮೇ 3ರವರೆಗೆ ಮದ್ಯ ಸಿಗೋಲ್ಲ: ದಾವಣಗೆರೆ ಡಿಸಿ ಆದೇಶ

ನಿಶಾಂತ್ ಅಲಿಯಾನ್ ಬಂಟಿ (36) ಎಂಬುವವನು ನಾಗ್ಪುರದಲ್ಲಿ ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದ. ಅಗತ್ಯ ವಸ್ತುಗಳ ವಿಭಾಗದಲ್ಲಿ ಬರುವ ಕಾರಣ ಆ ಅಂಗಡಿಗೆ ಲಾಕ್‌ಡೌನ್ ಸಮಯದಲ್ಲಿ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಆತ ಮಾತ್ರೆ, ಔಷದಿಗಳ ಜೊತೆಗೆ ಬಿಯರ್‌ ಮಾರಾಟ ಮಾಡುತ್ತಿದ್ದ.

 Man Arrested For Selling Beer At Pharmacy During Lockdown

ಮದ್ಯಕ್ಕೆ ಇರುವ ಬೇಡಿಕೆಯನ್ನು ಬಳಸಿಕೊಳ್ಳಲು ತನ್ನ ಅಂಗಡಿಯಲ್ಲಿ ಬಿಯರ್ ಮಾರಾಟ ಮಾಡುತ್ತಿದ್ದ. ಮಂಗಳವಾರ ಈತನನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಜೊತೆಗೆ 80 ಬಿಯರ್ ಬಾಟಲಿಯನ್ನು ವಶಕ್ಕೆ ಪಡೆದಿದ್ದಾರೆ.

ಕುಡುಕರಿಗೆ ಉಪವಾಸ ಮುಂದುವರಿಕೆ ಮೇ 3ರ ತನಕ ಎಣ್ಣೆ ಸಿಗಲ್ಲಕುಡುಕರಿಗೆ ಉಪವಾಸ ಮುಂದುವರಿಕೆ ಮೇ 3ರ ತನಕ ಎಣ್ಣೆ ಸಿಗಲ್ಲ

ಭಾರತೀಯ ದಂಡ ಸಂಹಿತೆ ಮತ್ತು ಮಹಾರಾಷ್ಟ್ರ ನಿಷೇಧ ಕಾಯ್ದೆಯ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

English summary
A man arrested for selling beer at pharmacy during lockdown in Nagpur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X