ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುತೂಹಲ ಕೆರಳಿಸಿದ ರಾಹುಲ್ ಗಾಂಧಿ, ಸಂಜಯ್ ರಾವತ್ ಭೇಟಿ

|
Google Oneindia Kannada News

ನವದೆಹಲಿ, ಡಿಸೆಂಬರ್ 07: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶಿವಸೇನಾ ನಾಯಕ ಸಂಜಯ್ ರಾವತ್‌ರನ್ನು ಭೇಟಿಯಾಗಲಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಮಹಾರಾಷ್ಟ್ರ ಪ್ರವಾಸ ಕೈಗೊಂಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎನ್​​​ಸಿಪಿ ಹಾಗೂ ಶಿವಸೇನೆಯ ಪ್ರಮುಖ ಮುಖಂಡರ ಜೊತೆ ಮಹತ್ವದ ಮಾತುಕತೆ ನಡೆಸಿದ್ದರು.

ಆದಿತ್ಯ ಠಾಕ್ರೆ ಭೇಟಿಯಾದ ದೀದಿ: ಜೈ ಮರಾಠ, ಜೈ ಬಾಂಗ್ಲಾ ಘೋಷಣೆಆದಿತ್ಯ ಠಾಕ್ರೆ ಭೇಟಿಯಾದ ದೀದಿ: ಜೈ ಮರಾಠ, ಜೈ ಬಾಂಗ್ಲಾ ಘೋಷಣೆ

ಇದರ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ್ದ ದೀದಿ, ಯುಪಿಎ ಎಂಬುದು ಈಗ ಉಳಿದಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್​​ಗೆ ಟಾಂಗ್​​ ನೀಡಿದ್ದರು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಹಾಗೂ ಸಂಜಯ್​ ರಾವತ್​​ ಭೇಟಿ ಮಾಡ್ತಿರುವುದು ಕುತೂಹಲ ಮೂಡಿಸಿದೆ.

Mamata Banerjees No UPA Diss Provokes Rahul Gandhi-Sena Warmth

ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿರುವ ಕಾರಣ ಅನೇಕ ಸಂದರ್ಭಗಳಲ್ಲಿ ಸಂಜಯ್​ ರಾವತ್​​​ ದೆಹಲಿಗೆ ತೆರಳಿ ರಾಹುಲ್​ ಗಾಂಧಿ ಅವರನ್ನ ಭೇಟಿ ಮಾಡಿದ್ದಾರೆ. ಆದರೆ ಮಮತಾ ಬ್ಯಾನರ್ಜಿ ಹೇಳಿಕೆ ನಂತರ ಈ ಭೇಟಿ ಬಹಳಷ್ಟು ಮಹತ್ವ ಪಡೆದುಕೊಂಡಿದೆ.

ಮುಂದಿನ ವರ್ಷದ ಆರಂಭದಲ್ಲೇ ಗೋವಾ, ಪಂಜಾಬ್​, ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಇಲ್ಲಿ ಕಾಂಗ್ರೆಸ್​​ ಪಕ್ಷಕ್ಕೆ ಎನ್​​​ಸಿಪಿ ಹಾಗೂ ಶಿವಸೇನೆಯ ಬೆಂಬಲ ಪಡೆದುಕೊಳ್ಳಲು ರಾಹುಲ್​ ಗಾಂಧಿ ಮನವಿ ಮಾಡಿಕೊಳ್ಳಬಹುದು.

ಮಹಾರಾಷ್ಟ್ರದಲ್ಲಿ ಈಗಾಗಲೇ ಎನ್​​​ಸಿಪಿ+ಕಾಂಗ್ರೆಸ್​​+ಶಿವಸೇನೆ ಮೈತ್ರಿ ಸರ್ಕಾರವಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಎನ್​​ಸಿಪಿ ಸಂಜಯ್​ ರಾವತ್​​ ಹಾಗೂ ರಾಹುಲ್​ ಗಾಂಧಿ ನಡುವೆ ಮಹತ್ವದ ಮಾತುಕತೆ ನಡೆಯಲಿದೆ.

ಮುಂದಿನ ವರ್ಷ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವ ಬಗ್ಗೆ ಇಂದಿನ ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ ಯುಪಿಎ ವಿಚಾರವಾಗಿ ಮಾತುಕತೆ ನಡೆಯಬಹುದು ಎನ್ನಲಾಗುತ್ತಿದೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎರಡು ದಿನಗಳ ಮುಂಬೈ ಪ್ರವಾಸ ಕೈಗೊಂಡಿದ್ದರು. ಎಐಟಿಸಿ ಮಾಧ್ಯಮ ತಂಡದ ಬಿಡುಗಡೆಯ ಪ್ರಕಾರ, ಮಮತಾ ಬ್ಯಾನರ್ಜಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಮನೆಗೆ ಭೇಟಿ ನೀಡಿದ್ದರು.

ಇದಕ್ಕೂ ಮುನ್ನ ಅವರು ನಾರಿಮನ್ ಪಾಯಿಂಟ್‌ನಲ್ಲಿರುವ ವೈಬಿ ಚವಾನ್ ಸೆಂಟರ್, ನಾರಿಮನ್ ಪಾಯಿಂಟ್‌ನಲ್ಲಿ ನಾಗರೀಕರು ಮತ್ತು ಸಮಾಜದ ಸದಸ್ಯರನ್ನು ಭೇಟಿಯಾಗಿದ್ದರು.

ಮಮತಾ ಬ್ಯಾನರ್ಜಿ ಅವರ ಮುಂಬೈ ಭೇಟಿ ಬಗ್ಗೆ ಬಿಜೆಪಿಯಲ್ಲಿ ವಿಶೇಷ ಪರಿಣಾಮ ಇಲ್ಲ, ಆದರೆ ಕಾಂಗ್ರೆಸ್‌ನಲ್ಲಿ ಆತಂಕವಿದೆ. ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನು ಒಂದೇ ಬ್ಯಾನರ್ ಅಡಿಯಲ್ಲಿ ತರಲು ಪ್ರಯತ್ನಿಸುತ್ತಿದ್ದಾರೆ, ಆದರೆ ಅವರು ಕಾಂಗ್ರೆಸ್ ಅನ್ನು ಅದರಿಂದ ದೂರವಿಡುತ್ತಿದ್ದಾರೆ.

ಅಲ್ಲದೆ, ಕಾಂಗ್ರೆಸ್‌ನ ಗರಿಷ್ಠ ನಾಯಕರು ಟಿಎಂಸಿಗೆ ಬಂದಿದ್ದಾರೆ. ಮಮತಾ ಅವರ ಕಾಂಗ್ರೆಸ್-ಮುಕ್ತ ಅಜೆಂಡಾದಿಂದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ ಖುಷಿಯಾಗಿಲ್ಲ.
ಹೀಗಿರುವಾಗ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ತೃತೀಯ ರಂಗ ರಚಿಸಬಹುದಾ ಎಂಬ ಆತಂಕ ಶುರುವಾಗಿದೆ.

ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಸರ್ಕಾರದ ಸಚಿವ ನವಾಬ್ ಮಲಿಕ್ ಪ್ರತಿಕ್ರಿಯಿಸಿದ್ದು, ಪ್ರತಿಯೊಂದು ಪಕ್ಷಕ್ಕೂ ತನ್ನ ನೆಲೆಯನ್ನು ಹೆಚ್ಚಿಸುವ ಎಲ್ಲ ಹಕ್ಕುಗಳಿವೆ, ಆದರೆ ಕಾಂಗ್ರೆಸ್ ಅನ್ನು ಹೊರಗಿಟ್ಟು ಬಿಜೆಪಿಯ ವಿರೋಧಿಗಳನ್ನು ಒಗ್ಗೂಡಿಸುವುದು ಅಸಾಧ್ಯ ಎಂದು ಹೇಳಿದ್ದಾರೆ. ಈ ವಿಚಾರವನ್ನು ಪವಾರ್ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ ಎಂದೂ ಮಲಿಕ್ ಹೇಳಿದ್ದಾರೆ.

English summary
Shiv Sena MP Sanjay Raut is expected to meet Congress leader Rahul Gandhi today amid indications that the two parties, part of a coalition in Maharashtra, might be inching towards a wider understanding.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X