• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೈರಲ್ ವಿಡಿಯೋ: ನನ್ನಪ್ಪನಿಗೆ ಬೆಡ್ ನೀಡಿ.. ಇಲ್ಲವಾದ್ರೆ, ಇಂಜೆಕ್ಷನ್ ಕೊಟ್ಟು ಸಾಯಿಸಿ!

|

ಮುಂಬೈ, ಏಪ್ರಿಲ್ 15: ದೇಶದಲ್ಲಿ ಕೊರೊನಾ ಸೋಂಕಿನ 2ನೇ ಅಲೆ ಅತೀ ವೇಗವಾಗಿ ಹರಡುತ್ತಿರುವ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯೋರ್ವರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ಹೊರಗೆ ನಿಂತ ಘಟನೆ ನಡೆದಿದೆ.

ಅಂಬ್ಯುಲೆನ್ಸ್‌ನಲ್ಲಿ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿರುವ ಮಗ, "ಆಸ್ಪತ್ರೆಯಲ್ಲಿ ನಿಮಗೆ ಹಾಸಿಗೆಗಳನ್ನು ಒದಗಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಇಂಜೆಕ್ಷನ್ ಕೊಟ್ಟು ಕೊಂದು ಬಿಡಿ' ಎಂದು ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತನ ಮಗನೊಬ್ಬ ತನ್ನ ಅಳಲು ತೋಡಿಕೊಂಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ.

ಮಹಾರಾಷ್ಟ್ರದಲ್ಲಿ ಕೊರೊನಾ 2ನೇ ಅಲೆ: ಸಂಕಷ್ಟದಲ್ಲಿ ಡಬ್ಬಾವಾಲಾಗಳು ಮಹಾರಾಷ್ಟ್ರದಲ್ಲಿ ಕೊರೊನಾ 2ನೇ ಅಲೆ: ಸಂಕಷ್ಟದಲ್ಲಿ ಡಬ್ಬಾವಾಲಾಗಳು

ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣವು ದಿನಕ್ಕೆ ಎರಡು ಲಕ್ಷ ದಾಟಿದೆ. ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ, ಮತ್ತೊಂದೆಡೆ ಆಸ್ಪತ್ರೆಯಲ್ಲಿ ಹಾಸಿಗೆಗಳು ಖಾಲಿಯಾಗಿಲ್ಲ. ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯ ಬಗ್ಗೆ ಅನೇಕ ರೀತಿಯ ಸುದ್ದಿಗಳು ಬರುತ್ತಿವೆ.

ಮಹಾರಾಷ್ಟ್ರ ರಾಜ್ಯದ ಚಂದ್ರಪುರದ ಯುವಕನೊಬ್ಬ, ತನ್ನ ತಂದೆಯೊಂದಿಗೆ ಅಂಬ್ಯುಲೆನ್ಸ್‌ನಲ್ಲಿ ಬಂದಿದ್ದು, ತಂದೆಗೆ ಆಸ್ಪತ್ರೆಯಲ್ಲಿ ಹಾಸಿಗೆ ಸಿಗುತ್ತಿಲ್ಲ. ಆಸ್ಪತ್ರೆಯಲ್ಲಿ ಸ್ಥಳಾವಕಾಶದ ಕೊರತೆಯಿಂದ ಅವರನ್ನು ಆಂಬ್ಯುಲೆನ್ಸ್‌ನಲ್ಲಿಯೇ ಇರಿಸಲಾಗಿದೆ.

ನನ್ನ ತಂದೆಗೆ ಇಲ್ಲಿ ಹಾಸಿಗೆ ಸಿಗದಿದ್ದರೆ, ಕನಿಷ್ಠ ಇಂಜೆಕ್ಷನ್ ನೀಡಿ ಕೊಂದು ಹಾಕಿ ಎಂದು ಹೇಳಿದ್ದಾನೆ. ನಾನು ಅವರನ್ನು ಮನೆಗೆ ಕರೆದೊಯ್ಯಲು ಸಾಧ್ಯವಿಲ್ಲ. ಯಾಕಂದರೆ, ಅವರಿಗೆ ಉಸಿರಾಟದ ತೊಂದರೆಯಿದ್ದು, ಆಕ್ಸಿಜನ್ ತೆಗೆದರೆ ಅವರು ಉಳಿಯುವುದಿಲ್ಲ ಎಂದು ಗೋಳಾಡಿದ್ದಾನೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

English summary
Either you make a bed available for him, or you kill him with an injection. Son of Ailing Covid-19 Patient Makes Heart-Rending Plea; Video goes viral in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X