ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಬರ್, ಓಲಾಗೆ ಪೈಪೋಟಿ ನೀಡಲು ಮಹೀಂದ್ರ ಹೊಸ ತಂತ್ರ

|
Google Oneindia Kannada News

ಮುಂಬೈ, ಮಾರ್ಚ್ 2: ಉಬರ್, ಓಲಾ ಕ್ಯಾಬ್ ಗಳಿಗೆ ಪೈಪೋಟಿ ನೀಡಲು ಮಹೀಂದ್ರ ಗ್ರೂಪ್ ಹೊಸ ಯೋಜನೆ ಹಾಕಿಕೊಂಡಿದೆ. 'ಅಲೈಟ್' ಎಂಬ ಹೊಸ ಟ್ಯಾಕ್ಸಿ ಸರ್ವಿಸ್ ಅನ್ನು ಮಾರುಕಟ್ಟೆಗೆ ತರುತ್ತಿದೆ.

ಅಲೈಟ್, ಮಹೀಂದ್ರ ಲಾಜಿಸ್ಟಿಕ್ಸ್ ಅಡಿಯಲ್ಲಿ ಬರುತ್ತದೆ. ಇದು ಎಲೆಕ್ಟ್ರಿಕ್ ಕಾರ್ ಗಳ ಮೂಲಕ ಕ್ಯಾಬ್ ಸೇವೆ ಒದಗಿಸಲಿದೆ. ಪ್ರಮುಖವಾಗಿ ಐಟಿ ಉದ್ಯೋಗಗಿಳನ್ನು ಗಮನದಲ್ಲಿ ಇಟ್ಟುಕೊಂಡು ಮಹೀಂದ್ರ ಈ ಸೇವೆಯನ್ನು ಆರಂಭ ಮಾಡುತ್ತಿದೆ.

 ಅತಿ ಕಡಿಮೆ ಖರ್ಚಿನಲ್ಲಿ ಕೆಂಪೇಗೌಡ ಏರ್‌ಪೋರ್ಟ್ ತಲುಪುವುದು ಹೇಗೆ? ಅತಿ ಕಡಿಮೆ ಖರ್ಚಿನಲ್ಲಿ ಕೆಂಪೇಗೌಡ ಏರ್‌ಪೋರ್ಟ್ ತಲುಪುವುದು ಹೇಗೆ?

''ಅಲೈಟ್ ಮೂಲಕ ಮುಂದಿನ ತೈಮಾಸಿಕದಲ್ಲಿ ನಾವು ದೇಶಾದ್ಯಂತ ಈ ಸೇವೆಯನ್ನು ಪ್ರಾರಂಭ ಮಾಡುತ್ತೇವೆ'' ಎಂದು ಮಹೀಂದ್ರ ಲಾಜಿಸ್ಟಿಕ್ಸ್ ಸಿಇಓ ರಾಮ್ ಪ್ರವೀಣ್ ಸ್ವಾಮಿನಾಥನ್ ತಿಳಿಸಿದ್ದಾರೆ.

Mahindra Logistics To Launch Of Cab Aggregator Service

ಈಗಾಗಲೇ ಇರುವ ಮೇರು ಕ್ಯಾಬ್ಸ್ ಮಹೀಂದ್ರ ಗ್ರೂಪ್ಸ್ ಒಡೆತನದಾಗಿದ್ದು, 55% ಶೇರ್ ಹೊಂದಿದೆ. ಗ್ಲಿಡ್ ಮಹೀಂದ್ರ ಇ ಕ್ಯಾಬ್ ಸರ್ವಿಸ್‌ದ್ದಾಗಿದೆ. ಇದೀಗ ಲಾಂಚ್ ಆಗುತ್ತಿರುವ ಅಲೈಟ್ ಮಹೀಂದ್ರ ಲಾಜಿಸ್ಟಿಕ್ಸ್ ಒಡೆತನಕ್ಕೆ ಬರುತ್ತದೆ.

ಇದೇ ತಿಂಗಳು ಅಲೈಟ್ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಆಗಲಿದೆ. ಈ ಸೇವೆ ಕಂಪನಿ ಮತ್ತು ಅಲೈಟ್ ಒಪ್ಪಂದದಿಂದ ನಡೆಯಲಿದೆ. ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ಮನೆಗೆ ಬಿಡುವ ಹಾಗೂ ಮನೆಯಿಂದ ಕಂಪನಿಗೆ ಕರೆದುಕೊಂಡು ಹೋಗುವ ಸೇವೆಯನ್ನು ಅಲೈಟ್ ನೀಡಲಿದೆ.

ಓಲಾ ಚಾಲಕರೇ ಹುಷಾರ್ : ನಿಮ್ಮ ಕಾರನ್ನೂ ಹೀಗೆ ಕದಿಯಬಹುದು ಓಲಾ ಚಾಲಕರೇ ಹುಷಾರ್ : ನಿಮ್ಮ ಕಾರನ್ನೂ ಹೀಗೆ ಕದಿಯಬಹುದು

ಕಂಪನಿಯ ಉದ್ಯೋಗಿಗಳು ಈ ಕ್ಯಾಬ್ ಸೇವೆ ಬಳಸಲು ಐಡಿ ಬೇಕಾಗುತ್ತದೆ. ಮನೆ ಮತ್ತು ಕಂಪನಿ ಮಾತ್ರವಲ್ಲದೆ, ಉದ್ಯೋಗಿಗಳು ಏರ್ ಪೋರ್ಟ್‌ಗೆ ಹೋಗಬೇಕು ಎಂದರೂ, ಈ ಕ್ಯಾಬ್ ಸೌಲಭ್ಯ ಬಳಸಿಕೊಳ್ಳಬಹುದಾಗಿದೆ.

ಓಲಾ ಹಾಗೂ ಉಬರ್ ಕ್ಯಾಬ್ ಗಳು B2C (ಬಿಸಿನೆಸ್ ಟು ಕಸ್ಟಮರ್) ಸೇವೆ ನೀಡುತ್ತಿದ್ದು, ಮಹೀಂದ್ರ B2B (ಬಿಸಿನೆಸ್ ಟು ಬಿಸಿನೆಸ್) ಸೇವೆ ನೀಡುತ್ತಿದೆ.

ಈವರೆಗೆ 10000ಕ್ಕೂ ಹೆಚ್ಚು ಕಂಪನಿಯ ಉದ್ಯೋಗಿಗಳು, 22ಕ್ಕೂ ಹೆಚ್ಚು ಕೈಗಾರಿಕಾ ಕೇಂದ್ರಗಳ ಉದ್ಯೋಗಿಗಳು ಓಲಾ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ.

English summary
Mahindra logistics to launch of cab aggregator service called Alyte.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X