ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಡಿಯಲು ಬಾರ್‌ಗೆ ಹೋಗ್ಬೇಕಿಲ್ಲ; ಆರ್ಡರ್ ಮಾಡಿದರೆ ಮನೆ ಬಾಗಿಲಿಗೇ ಬರುತ್ತದೆ 'ಎಣ್ಣೆ'

|
Google Oneindia Kannada News

Recommended Video

ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡಲು ಮಹರಾಷ್ಟ್ರ ಸರ್ಕಾರದ ಹೊಸ ಪ್ಲಾನ್ | Oneindia Kannada

ನಾಗ್ಪುರ, ಅಕ್ಟೋಬರ್ 14: ಕುಡಿತ ಮಿತಿಮೀರಿ ಮನೆಗೆ ಬರುವ ದಾರಿಯೇ ತಪ್ಪುವುದು, ಅಡ್ಡಾದಿಡ್ಡಿ ವಾಹನ ಚಲಾಯಿಸಿ ಅಪಘಾತ ಮಾಡುವುದು, ಹೆಂಡತಿ ಬಾಗಿಲು ತೆರೆದಿಲ್ಲವೆಂದರೆ ಗಲಾಟೆ ಮಾಡುವುದು... ಈ ಎಲ್ಲ ಸಂಕಷ್ಟಗಳ ಉಸಾಬರಿ ಗಂಡಸರಿಗೆ ಬೇಡ ಎಂದು ಮಹಾರಾಷ್ಟ್ರ ಸರ್ಕಾರ ಹೊಸ ಐಡಿಯಾ ಮಾಡಿದೆ.

ಮನೆ ಬಾಗಿಲಿಗೇ ಮದ್ಯ ಪೂರೈಕೆ ಮಾಡುವ ಹೊಸ ನೀತಿಯನ್ನು ಜಾರಿಗೆ ತರಲು ಚಿಂತನೆ ನಡೆಸಿರುವುದಾಗಿ ಅಲ್ಲಿನ ಅಬಕಾರಿ ಸಚಿವ ಚಂದ್ರಶೇಖರ ಬವಂಕುಲೆ ಹೇಳಿದ್ದಾರೆ.

ಕುಡುಕರಿಗೆ ನಿರಾಸೆ ಮೂಡಿಸಿದ ಸಿಎಂ! ಮದ್ಯದಂಗಡಿಗಳ ಬಗ್ಗೆ ಹೇಳಿದ್ದೇನು?ಕುಡುಕರಿಗೆ ನಿರಾಸೆ ಮೂಡಿಸಿದ ಸಿಎಂ! ಮದ್ಯದಂಗಡಿಗಳ ಬಗ್ಗೆ ಹೇಳಿದ್ದೇನು?

ಈ ಮೂಲಕ ಮಹಾರಾಷ್ಟ್ರ ಇಂತಹ ನೀತಿಯನ್ನು ಅಳವಡಿಸಿಕೊಳ್ಳುವ ದೇಶದ ಮೊದಲ ರಾಜ್ಯ ಎಂದೆನಿಸಿದೆ.

maharshtra policy to deliver liquor to home

ಆದರೆ, ಅವರ ಹೇಳಿಕೆಗೆ ಸಾಮಾಜಿಕ ಕಾರ್ಯಕರ್ತರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸಚಿವ ಬವಂಕುಲೆ ಯೂಟರ್ನ್ ತೆಗೆದುಕೊಂಡಿದ್ದಾರೆ. ಹೀಗಾಗಿ ಅಲ್ಲಿನ ಮದ್ಯಪ್ರಿಯರಲ್ಲಿ ಮೂಡಿದ್ದ ಉತ್ಸಾಹದ ನಶೆ ಜರ್ರನೆ ಇಳಿದುಹೋಗಿದೆ.

ಕಾರ್ಕಳದ ಈ ಬಾರ್ ಗೆ ಪುಕ್ಕಟೆ ಪಿಕ್ ಅಪ್- ಡ್ರಾಪ್, ಆಟೋ ಇದೆ ಗುರೂ..ಕಾರ್ಕಳದ ಈ ಬಾರ್ ಗೆ ಪುಕ್ಕಟೆ ಪಿಕ್ ಅಪ್- ಡ್ರಾಪ್, ಆಟೋ ಇದೆ ಗುರೂ..

ಮದ್ಯದ ಆನ್‌ಲೈನ್ ಮಾರಾಟ ಮತ್ತು ಮನೆಗೆ ಪೂರೈಕೆ ಸೇವೆಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಹಲವು ಅರ್ಜಿಗಳು ಬಂದಿದ್ದವು. ಮನೆ ಮನೆಗೆ ಮದ್ಯ ಪೂರೈಕೆ ಮಾಡುವ ಸಲುವಾಗಿಯೇ ವಾಟ್ಸ್‌ಆಪ್ ಗ್ರೂಪ್ ರಚಿಸಿಕೊಂಡಿದ್ದ ವ್ಯಕ್ತಿಯೊಬ್ಬನ ವಿರುದ್ಧ ಕ್ರಮ ತೆಗೆದುಕೊಂಡ ಬಳಿಕ ಈ ರೀತಿಯ ಅರ್ಜಿಗಳು ಬಂದಿದ್ದವು. ಆದರೆ, ಇದುವರೆಗೂ ಈ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತವೆ. ಇದರಿಂದ ಭಾರಿ ಪ್ರಮಾಣದ ಸಾವು ನೋವು ಸಂಭವಿಸುತ್ತವೆ. ಇಂತಹ ಪ್ರಕರಣಗಳನ್ನು ತಗ್ಗಿಸುವುದೇ ಮನೆಗೆ ಮದ್ಯಪೂರೈಕೆ ಯೋಜನೆಯ ಮುಖ್ಯ ಉದ್ದೇಶ ಎಂದು ಸಚಿವರು ಹೇಳಿದ್ದರು.

ಲಕ್ಷ ಲಕ್ಷ ಲಂಚಕ್ಕೆ ಕಡಿವಾಣ: ಬಾರ್ ಲೈಸೆನ್ಸ್ ಆನ್ಲೈನ್ ನವೀಕರಣಲಕ್ಷ ಲಕ್ಷ ಲಂಚಕ್ಕೆ ಕಡಿವಾಣ: ಬಾರ್ ಲೈಸೆನ್ಸ್ ಆನ್ಲೈನ್ ನವೀಕರಣ

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಇ-ಕಾಮರ್ಸ್ ವೆಬ್‌ಸೈಟ್‌ಗಳ ಮಾದರಿಯಲ್ಲಿ ಜನರು ದಿನಸಿ ಮತ್ತು ತರಕಾರಿಗಳನ್ನು ತರಿಸಿಕೊಳ್ಳುವಂತೆ ಮನೆಗಳಿಗೆ ಆಲ್ಕೊಹಾಲ್‌ಅನ್ನು ಪೂರೈಕೆ ಮಾಡಲಾಗುವುದು ಎಂದು ತಿಳಿಸಿದ್ದರು.

English summary
Maharashtra planned to start a new policy to start home delivery of liquor. But backtracked its plan after backlash from social activists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X