ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಎರಡು ಅಂಶಗಳ ಮೇಲೆ 'ಮಹಾ' ಸರ್ಕಾರದ ಭವಿಷ್ಯ?

|
Google Oneindia Kannada News

ಮುಂಬೈ, ನವೆಂಬರ್.24: ಮಹಾರಾಷ್ಟ್ರದಲ್ಲಿ ನಿನ್ನೆವರೆಗೂ ಇದ್ದ ರಾಜಕೀಯ ಚಿತ್ರಣ ಇಂದಿಲ್ಲ. ಒಂದೇ ರಾತ್ರಿಯಲ್ಲಿ ನಡೆದ ರಾಜಕೀಯ ಬೆಳವಣಿಗೆ ಇಡೀ ದೇಶವೇ ಮಹಾರಾಷ್ಟ್ರದತ್ತ ತಿರುಗಿ ನೋಡುವಂತೆ ಮಾಡಿದೆ.

ರಾಜಕಾರಣದಲ್ಲಿ ಯಾರು ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ ಅನ್ನೋದು ಪದೇಪದೆ ಸಾಬೀತಾಗುತ್ತಲೇ ಇದೆ. ಅದರಲ್ಲೂ ಇತ್ತೀಚಿನ ರಾಜಕೀಯ ಬೆಳವಣಿಗೆಳು ಸಾಕಷ್ಟು ಅಚ್ಚರಿಗೆ ಕಾರಣವಾಗಿವೆ. ವಾರಗಳ ಕಾಲ ಶಿವಸೇನೆ-ಕಾಂಗ್ರೆಸ್-ಎನ್ ಸಿಪಿ ನಾಯಕರು ಸಭೆ ನಡೆಸಿದ್ದೇ ಒಂದಾದರೆ, ನವೆಂಬರ್.24ರಂದು ನಡೆದಿದ್ದೇ ಮತ್ತೊಂದು.

ಬಿಜೆಪಿ ನಾಯಕರಿಗೆ ಧನ್ಯವಾದ ತಿಳಿಸಿದ ಡಿಸಿಎಂ ಅಜಿತ್ ಪವಾರ್

 Maharastra Political Crisis: Supreme Court Ask Two Important Letter To Submit
ಹೌದು, ಮಹಾರಾಷ್ಟ್ರ ರಾಜಕಾರಣದ ಹಾವು-ಏಣಿ ಆಟದಲ್ಲಿ ಇನ್ನೇನು ಗೆದ್ದಾಯ್ತು ಎಂದುಕೊಂಡಿದ್ದ ಶಿವಸೇನೆ ಪಾತಾಳಕ್ಕೆ ಕುಸಿದಿದೆ. ಮಹಾಮೈತ್ರಿಗೆ ತದ್ವಿರುದ್ಧವಾದ ಫಲಿತಾಂಶ ಹೊರ ಬಿದ್ದಿದೆ. ಶಿವಸೇನೆ ಕಾಂಗ್ರೆಸ್ ಬದಲು ಬಿಜೆಪಿ ಜೊತೆಗೆ ಸೇರಿಕೊಂಡು ಎನ್ ಸಿಪಿ ಸರ್ಕಾರ ರಚಿಸಿದೆ.

ಬೆಳಂಬೆಳಗ್ಗೆ ಮಹಾರಾಷ್ಟ್ರಕ್ಕೆ ನೂತನ ಮುಖ್ಯಮಂತ್ರಿ!

ಬೆಳಂಬೆಳಗ್ಗೆ ಮಹಾರಾಷ್ಟ್ರಕ್ಕೆ ನೂತನ ಮುಖ್ಯಮಂತ್ರಿ!

ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂಡ್ರ ಫಡ್ನವೀಸ್ ಹಾಗೂ ಉಪ ಮುಖ್ಯಮಂತ್ರಿಯಾಗಿ ಎನ್ ಸಿಪಿಪಿಯ ಅಜಿತ್ ಪವಾರ್ ಪ್ರಯಾಣ ವಚನ ಸ್ವೀಕರಿಸಿದ್ದಾರೆ. ಬೆಳಗ್ಗೆ 5.47ಕ್ಕೆ ರಾಜ್ಯದಲ್ಲಿನ ರಾಷ್ಟ್ರಪತಿ ಆಳ್ವಿಕೆ ವಾಪಸ್ ಪಡೆದಿದ್ದು, ಅದಾಗಿ ಎರಡೇ ಗಂಟೆಗಳಲ್ಲಿ ಅಂದ್ರೆ 7.30 ಹೊತ್ತಿಗೆ ನೂತನ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗೆ ರಾಜ್ಯಪಾಲ ಭಗತ್ ಸಿಂಗ್ ಕೌಶಿಯಾರ್ ಪ್ರಮಾಣವಚನ ಬೋಧಿಸಿದರು.

ಸುಪ್ರೀಂಕೋರ್ಟ್ ಮೊರೆ ಹೋದ ಮಿತ್ರಪಕ್ಷಗಳು

ಸುಪ್ರೀಂಕೋರ್ಟ್ ಮೊರೆ ಹೋದ ಮಿತ್ರಪಕ್ಷಗಳು

ರಾಜ್ಯಪಾಲರ ಈ ನಡುವಳಿಕೆ ವಿಪಕ್ಷಗಳ ಕಣ್ಣು ಕೆಂಪಾಗಿಸಿದ್ದು, ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರೇ ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ.
ರಾಜ್ಯಪಾಲರ ನಿರ್ಧಾರ ವಿರೋಧಿಸಿ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್ ಸಿಪಿ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ತುರ್ತು ರಿಟ್ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಸದ್ಯಕ್ಕೆ ರಿಲೀಫ್ ಕೊಟ್ಟಿದೆ. ನವೆಂಬರ್.25ಕ್ಕೆ ವಿಚಾರಣೆ ಮುಂದೂಡಿದ್ದು, ನಾಳೆ ಸರ್ಕಾರದ ಭವಿಷ್ಯ ತೀರ್ಮಾನವಾಗಲಿದೆ.

ಅಗತ್ಯ ದಾಖಲೆ ಸಲ್ಲಿಸಲು ಸುಪ್ರೀಂಕೋರ್ಟ್ ಸೂಚನೆ

ಅಗತ್ಯ ದಾಖಲೆ ಸಲ್ಲಿಸಲು ಸುಪ್ರೀಂಕೋರ್ಟ್ ಸೂಚನೆ

ರಾಜ್ಯಪಾಲರ ನಡೆ ಪ್ರಶ್ನಿಸಿ ಶಿವಸೇನೆ-ಕಾಂಗ್ರೆಸ್-ಎನ್ ಸಿಪಿ ಸಲ್ಲಿಸಿರುವ ಅರ್ಜಿಯನ್ನು ನ್ಯಾ.ಎನ್.ವಿ.ರಮಣ್, ಅಶೋಕ್ ಭೂಷಣ್, ಸಂಜೀವ್ ಖಾನ್ ರನ್ನೊಳಗೊಂಡ ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು. ನವೆಂಬರ್.25ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್, ಬೆಳಗ್ಗೆ 10.30ರ ವೇಳೆಗೆ ಎರಡು ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಕೋರ್ಟ್ ಸೂಚಿಸಿದೆ.

ಬಿಜೆಪಿ ಸರ್ಕಾರ ಉಳಿಯಲು ಇದೆರೆಡು ಅಂಶಗಳೇ ಅಗತ್ಯ!

ಬಿಜೆಪಿ ಸರ್ಕಾರ ಉಳಿಯಲು ಇದೆರೆಡು ಅಂಶಗಳೇ ಅಗತ್ಯ!

ರಾಜ್ಯಪಾಲ ಭಗತ್ ಸಿಂಗ್ ಕೌಶಿಯಾರ್ ಅವರು ಸರ್ಕಾರ ರಚಿಸುವಂತೆ ದೇವೇಂದ್ರ ಫಡ್ನವೀಸ್ ಆಹ್ವಾನ ನೀಡಿರುತ್ತಾರೆ. ಮುಖ್ಯಮಂತ್ರಿ ಪ್ರಮಾಣವಚನಕ್ಕೂ ಮೊದಲು ಅಗತ್ಯ ಸಂಖ್ಯೆಗಳ ಶಾಸಕರ ಸಹಿಯುಳ್ಳ ಪತ್ರವನ್ನು ರಾಜ್ಯಪಾಲರಿಗೆ ನೀಡಲಾಗಿರುತ್ತದೆ. ಈ ಎರಡು ಪತ್ರಗಳನ್ನು ನವೆಂಬರ್.25ರಂದು ಬೆಳಗ್ಗೆ 1.30ರೊಳಗೆ ಕೋರ್ಟ್ ಗೆ ಸಲ್ಲಿಸಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿದೆ. ಅಲ್ಲದೇ, ಈ ಎರಡು ಪತ್ರಗಳನ್ನು ಆಧಾರವಾಗಿಟ್ಟುಕೊಂಡೇ ತೀರ್ಪು ನೀಡುವ ಸಾಧ್ಯತೆಗಳು ಹೆಚ್ಚಿವೆ.

English summary
Maharastra Political Crisis: Supreme Court Ask Two Important Letter To Submit. Tomarrow Verdict Depends On This Letters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X