ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

18 ದಿನಗಳಲ್ಲೇ ಮಹಾರಾಷ್ಟ್ರಕ್ಕೆ ಇಬ್ಬರು ಮುಖ್ಯಮಂತ್ರಿಗಳು!

|
Google Oneindia Kannada News

ಮುಂಬೈ, ನವೆಂಬರ್.26: ಮಹಾರಾಷ್ಟ್ರ ರಾಜಕಾರಣದಲ್ಲೇ ಏನೇ ಆದರೂ ಇತಿಹಾಸ ಸೃಷ್ಟಿಯಾಗುತ್ತದೆ. ಇಲ್ಲಿ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದರೂ ದಾಖಲೆ, ರಾಜೀನಾಮೆ ಸಲ್ಲಿಸಿದರೂ ದಾಖಲೆ. ಇಲ್ಲಿ ರಾಜಕಾರಣವೇ ಹಾಗೆ ಅನ್ನುವಂತಾ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ.

ಇಂದಿನ ರಾಜಕೀಯ ಬೆಳವಣಿಗೆಯೂ ಕೂಡಾ ಹಾಗೆ ಆಗಿದೆ. ರಾತ್ರೋರಾತ್ರಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ತೆರವುಗೊಂಡಿತು. ಅದಾಗಿ ಎರಡು ಗಂಟೆಗಳಲ್ಲೇ ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನಿಸಲಾಯಿತು. ಬೆಳ್ಳಂಬೆಳಗ್ಗೆ ಅನಿರೀಕ್ಷಿತವಾಗಿ ಬಿಜೆಪಿ ಹಾಗೂ ಎನ್ ಸಿಪಿ ಪಕ್ಷಗಳು ಮೈತ್ರಿ ಮಾಡಿಕೊಂಡವು.

LIVE: ಸಿಎಂ ರಾಜೀನಾಮೆ, ಮೂರೇ ದಿನಕ್ಕೆ ಉರುಳಿದ ಮಹಾರಾಷ್ಟ್ರ ಸರ್ಕಾರLIVE: ಸಿಎಂ ರಾಜೀನಾಮೆ, ಮೂರೇ ದಿನಕ್ಕೆ ಉರುಳಿದ ಮಹಾರಾಷ್ಟ್ರ ಸರ್ಕಾರ

ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಎನ್ ಸಿಪಿ ಮುಖಂಡ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದರು. ಎರಡು ದಿನಗಳ ಹಿಂದೆಯಷ್ಟೇ ಅಧಿಕಾರಕ್ಕೆ ಬಂದಿದ್ದ ಮೈತ್ರಿ ಸರ್ಕಾರ ಇವತ್ತಾಗಲೇ ಪಲ್ಟಿ ಹೊಡೆದಿದೆ.

ಸುಪ್ರೀಂಕೋರ್ಟ್ ಡೆಡ್ ಲೈನ್ ಹೆಚ್ಚಿಸಿತಾ ಢವಢವ?

ಸುಪ್ರೀಂಕೋರ್ಟ್ ಡೆಡ್ ಲೈನ್ ಹೆಚ್ಚಿಸಿತಾ ಢವಢವ?

24 ಗಂಟೆಗಳಲ್ಲೇ ಬಹುಮತ ಸಾಬೀತು ಪಡಿಸಬೇಕು. ಬಿಹಾರ, ಕರ್ನಾಟಕ ಮಾದರಿಯಲ್ಲಿ ನೇರ ಪ್ರಸಾರ ಮಾಡಬೇಕು. ವಿಶ್ವಾಸ ಮತಯಾಚನೆ ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ಸುಪ್ರೀಂಕೋರ್ಟ್ ನೀಡಿದ ಇದೊಂದು ಆದೇಶ ಬಿಜೆಪಿ ಎದೆಯಲ್ಲಿ ಢವಢವ ಜೋರಾಗುವಂತೆ ಮಾಡಿತು. ಬೆಳಗ್ಗೆ 11 ಗಂಟೆ ವೇಳೆಗೆ ಸುಪ್ರೀಂಕೋರ್ಟ್ ಆದೇಶ ಹೊರ ಹಾಕಿದ್ದೇ ತಡ ಅಧಿಕಾರಕ್ಕೇರಿದ ಪಕ್ಷಗಳೇ ಪತರ್ ಗುಟ್ಟಿದವು.

ಒಂದೇ ದಿನ ಪದಗ್ರಹಣ, ಒಂದೇ ದಿನ ರಾಜೀನಾಮೆ!

ಒಂದೇ ದಿನ ಪದಗ್ರಹಣ, ಒಂದೇ ದಿನ ರಾಜೀನಾಮೆ!

ಸುಪ್ರೀಂಕೋರ್ಟ್ ತೀರ್ಪು ನೀಡುತ್ತಿದ್ದಂತೆ ಬೆಚ್ಚಿದ ಡಿಸಿಎಂ ಅಜಿತ್ ಪವಾರ್ ತಮ್ಮ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಫಾಸ್ಟ್ ಆಗಿ ಬಿಜೆಪಿ ಜೊತೆಗೆ ಬಂದಿದ್ದ ಪವಾರ್ ಸೈಲೆಂಟ್ ಆಗಿ ಎನ್ ಸಿಪಿ ಕಡೆ ಯುಟರ್ನ್ ಹೊಡೆದರು. ಬೆಳಗ್ಗೆ ಅಜಿತ್ ಪವಾರ್ ಆದರೆ, ಮಧ್ಯಾಹ್ನ 4 ಗಂಟೆ ವೇಳೆಗೆ ಸುದ್ದಿಗೋಷ್ಠಿ ನಡೆಸಿ ಸಿಎಂ ದೇವೇಂದ್ರ ಫಡ್ನವೀಸ್ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿದರು.

ವಿಶ್ವಾಸಮತ ಯಾಚನೆಗೂ ಮುನ್ನ ಶಸ್ತ್ರತ್ಯಾಗ ಮಾಡಿದ ದೇವೇಂದ್ರವಿಶ್ವಾಸಮತ ಯಾಚನೆಗೂ ಮುನ್ನ ಶಸ್ತ್ರತ್ಯಾಗ ಮಾಡಿದ ದೇವೇಂದ್ರ

ಮಹಾರಾಷ್ಟ್ರದಲ್ಲಿ 18 ದಿನದಲ್ಲೇ ಇಬ್ಬರು ಸಿಎಂ!

ಮಹಾರಾಷ್ಟ್ರದಲ್ಲಿ 18 ದಿನದಲ್ಲೇ ಇಬ್ಬರು ಸಿಎಂ!

ಮಹಾರಾಷ್ಟ್ರದಲ್ಲಿ ರಾಜಕಾರಣದಲ್ಲಿ ಇತಿಹಾಸ ಸೃಷ್ಟಿಸುವವರಿಗೆ ಕಡಿಮೆಯೇ ಇಲ್ಲ. ಇಲ್ಲಿ ಏನೇ ಮಾಡಿದರೂ ಅದು ಇತಿಹಾಸವಾಗುತ್ತದೆ. ಅದೇ ರೀತಿ ಕಳೆದ ಮೂರು ವಾರಗಳಿಂದಲೂ ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ನಡೆಯುತ್ತಿದೆ. 18 ದಿನಗಳಲ್ಲೇ ದೇವೇಂದ್ರ ಫಡ್ನವೀಸ್ ಎರಡು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಸಿಎಂ ಆಗೋದು ತಡವಿಲ್ಲ, ರಾಜೀನಾಮೆ ಕೊಡೋದೂ ತಡವಿಲ್ಲ!

ಸಿಎಂ ಆಗೋದು ತಡವಿಲ್ಲ, ರಾಜೀನಾಮೆ ಕೊಡೋದೂ ತಡವಿಲ್ಲ!

ಮಹಾರಾಷ್ಟ್ರ ಮುಖ್ಯಮಂತ್ರಿ ಆಗುವುದೂ ತಡವಲ್ಲ. ರಾಜೀನಾಮೆ ಕೊಡುವುದೂ ತಡವಲ್ಲ. ಇಂಥ ಪರಿಸ್ಥಿತಿ ಕಳೆದ 18 ದಿನಗಳ ರಾಜಕಾರಣದಲ್ಲಿ ಎದ್ದು ಕಾಣುತ್ತಿದೆ. ಈ ಮೊದಲು ನವೆಂಬರ್ ಮೊದಲ ವಾರದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಫಡ್ನವೀಸ್, ನವೆಂಬರ್.08ರಂದು ಶಿವಸೇನೆ ಬೆಂಬಲವಿಲ್ಲ ಎಂಬ ಕಾರರಣದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇತ್ತೀಚಿಗೆ ಮೊನ್ನೆಯಷ್ಟೇ ಅಂದರೆ ನವೆಂಬರ್.23ರಂದು ಪ್ರಮಾಣವಚನ ಸ್ವೀಕರಿಸಿದ್ದ ಫಡ್ನವೀಸ್ ಅದಾಗಿ ಎರಡೇ ದಿನಕ್ಕೆ ಎಂದರೆ ನವೆಂಬರ್.26ರಂದು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಅಜಿತ್ ಪವಾರ್ ರಾಜೀನಾಮೆ: ಬ್ರೇಕಿಂಗ್ ನ್ಯೂಸ್ ಅಲ್ಲ ಪೇಪರ್ ನ್ಯೂಸ್!ಅಜಿತ್ ಪವಾರ್ ರಾಜೀನಾಮೆ: ಬ್ರೇಕಿಂಗ್ ನ್ಯೂಸ್ ಅಲ್ಲ ಪೇಪರ್ ನ್ಯೂಸ್!

English summary
Maharashtra Government Crisis: First Time After The Results Fadnavis Resigns As CM Twice In 3 Weeks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X