ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಟೋರಿಯಸ್ ಹಿನ್ನೆಲೆ: ಏಕನಾಥ ಶಿಂಧೆ ಮೇಲೆ 18 ಕ್ರಿಮಿನಲ್ ಕೇಸು!

|
Google Oneindia Kannada News

ಬೆಂಗಳೂರು, ಜೂ. 30: ಶಿವಸೇನೆಯಲ್ಲಿ ಬಂಡಾಯ ಎಬ್ಬಿಸಿ ಮಹಾರಾಷ್ಟ್ರದ 19ನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಮಾಜಿ ಅಟೋ ರಾಜ ಏಕನಾಥ್ ಶಿಂಧೆ ನಟೋರಿಯಸ್ ಕ್ರಿಮಿನಲ್ ಹಿಸ್ಟರಿ ಹೊಂದಿದ್ದಾರೆ. ಸರ್ಕಾರಿ ಕಚೇರಿಗಳಿಗೆ ಬೆಂಕಿ ಇಟ್ಟು ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಉಂಟುಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಏಕನಾಥ ಶಿಂಧೆ ವಿರುದ್ಧ 18 ಕ್ರಿಮಿನಲ್ ಕೇಸುಗಳು ಬುಕ್ ಅಗಿವೆ!

ಮಹಾಷ್ಟ್ರದ ಹಂಗಾಮಿ ಸಿಎಂ ಏಕನಾಥ್ ಶಿಂಧೆ ವಿರುದ್ಧ ಬರೋಬ್ಬರಿ 18 ಕ್ರಿಮಿನಲ್ ಕೇಸುಗಳು ದಾಖಲಾಗಿವೆ. ಆದ್ರೆ ಒಂದರಲ್ಲೂ ಅವರು ಶಿಕ್ಷೆಗೆ ಗುರಿಯಾಗಿಲ್ಲ. ಒಂದು ಕೇಸಿನಲ್ಲೂ ಅವರು ಮೇಲ್ಮನವಿ ಹೋಗಿಲ್ಲ. ಸ್ವತಃ ಏಕನಾಥ ಶಿಂಧೆ ಚುನಾವಣೆ ವೇಳೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಶಿಂಧೆಯ ಕ್ರಿಮಿನಲ್ ಕೇಸುಗಳ ಸಂಕ್ಷಿಪ್ತ ವಿವರ ಉಲ್ಲೇಖವಾಗಿದೆ. ಬಹುತೇಕ ಕೇಸುಗಳು ಸರ್ಕಾರಿ ಅಧಿಕಾರಿಗಳಿಗೆ ತೊಂದರೆ ಕೊಟ್ಟಿರುವುದು, ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟವುಂಟು ಮಾಡಿರುವುದು.

 ಏಕನಾಥ್ ವ್ಯಕ್ತಿಚಿತ್ರ: ಆಟೋರಾಜ ಬನ್ ಗಯಾ 'ಮಹಾ' ರಾಜ ಏಕನಾಥ್ ವ್ಯಕ್ತಿಚಿತ್ರ: ಆಟೋರಾಜ ಬನ್ ಗಯಾ 'ಮಹಾ' ರಾಜ

ಉದ್ದವ್ ಠಾಕ್ರೆ ಸರ್ಕಾರದಲ್ಲಿ ಸಚಿವನಾಗಿದ್ದ ಏಕನಾಥ್ ಶಿಂಧೆ ಶಿವಸೇನೆಯ ಬಹುಪಾಲು ಶಾಸಕರನ್ನು ಸೆಳೆದು ಬಂಡಾಯದ ಬಾವುಟ ಏರಿಸಿದ್ದರು. ಇನ್ನೇನು ದೇವೇಂದ್ರ ಫಡ್ನವೀಸ್ ಸಿಎಂ ಆಗುತ್ತಾರೆ ಎಂಬ ಸುದ್ದಿಯ ಬೆನ್ನಲ್ಲೇ ಏಕನಾಥ್ ಶಿಂಧೆ ಸಿಎಂ ಅಭ್ಯರ್ಥಿ ಎಂಬ ಘೋಷಣೆ ಹೊರ ಬಿದ್ದಿದೆ. ಇದರ ಬೆನ್ನಲ್ಲೇ ಏಕನಾಥ ಶಿಂಧೆಯ ಹಿನ್ನೆಲೆಯ ಹುಡುಕಾಟ ಶುರುವಾಗಿದೆ. ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ಏಕನಾಥ್ ಶಿಂಧೆ ಬಿಜೆಪಿ ಜತೆ ಸೇರಿ ಹೊಸ ಸರ್ಕಾರ ರಚಿಸಿದ್ದಾರೆ. ಇದೀಗ ಶಿಂಧೆಯ ವ್ಯಕ್ತಿತ್ವ ನಿರೂಪಿಸುವ ಅವರ ಕ್ರಿಮಿನಲ್ ಹಿಸ್ಟರಿ ಕೂಡ ಬಯಲಾಗಿದೆ.

ಇನ್ ಸೈಡ್ ರಿಪೋರ್ಟ್; ಏಕನಾಥ್ ಶಿಂಧೆ ಆಯ್ಕೆ, ಬಿಜೆಪಿ ಚಾಣಕ್ಯ ನೀತಿ! ಇನ್ ಸೈಡ್ ರಿಪೋರ್ಟ್; ಏಕನಾಥ್ ಶಿಂಧೆ ಆಯ್ಕೆ, ಬಿಜೆಪಿ ಚಾಣಕ್ಯ ನೀತಿ!

 ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಏಕನಾಥ:

ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಏಕನಾಥ:

ಏಕನಾಥ್ ಶಿಂಧೆಯ ಇಬ್ಬರು ಮಕ್ಕಳಾದ ದೀಪೇಶ್ ಶಿಂಧೆ, ಶುಭದ ಶಿಂಧೆ ಮನೆ ಸಮೀಪದ ಕೆರೆಯಲ್ಲಿ ಆಟ ಆಡುವಾಗ ಬೋಟ್ ಮುಗಿಸಿ ಸಾವನ್ನಪ್ಪಿದ್ದರು. ಈ ವೇಳೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಏಕನಾಥ ಶಿಂಧೆ. ಇರುವ ಏಕೈಕ ಪುತ್ರ ಶ್ರೀಕಾಂತ್ ಶಿಂಧೆ ವೃತ್ತಿಯಲ್ಲಿ ವೈದ್ಯ. ಕಳೆದ 2014 ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದರು.

 ಶಿಂಧೆ ವಿರುದ್ಧ ಹದಿನೆಂಟು ಕೇಸು:

ಶಿಂಧೆ ವಿರುದ್ಧ ಹದಿನೆಂಟು ಕೇಸು:

ಮಹಾರಾಷ್ಟ್ರದ ನಿಯೋಜಿತ ಸಿಎಂ ಏಕನಾಥ ಶಿಂಧೆ ವಿರುದ್ಧ ಮೊದಲು ಕೇಸು ದಾಖಲಾಗಿದ್ದು 1993ರಲ್ಲಿ ಥಾಣೆ ನಗರ ಪೊಲೀಸ್ ಠಾಣೆಯಲ್ಲಿ. ಸರ್ಕಾರದ ಆಜ್ಞೆಯನ್ನು ಉಲ್ಲಂಘನೆ ಮಾಡುವುದು. ನಿಷೇಧಾಜ್ಞೆಯಂತಹ ಆದೇಶ ಉಲ್ಲಂಘನೆ ಮಾಡಿ ಸರ್ಕಾರದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಅರೋಪಕ್ಕೆ ಗುರಿಯಾಗಿದ್ದರು. ಈ ಪ್ರಕರಣದಲ್ಲಿ ಶಿಂಧೆ ಬಂಧನಕ್ಕೆ ಒಳಗಾಗಿದ್ದರು. ಇಲ್ಲಿಂದ ಆರಂಭವಾದ ಕ್ರಿಮಿನಲ್ ಕೇಸುಗಳು 2011 ರವರೆಗೂ ಬಿದ್ದಿವೆ.

 ಕೇಸ್ ನಂ 02

ಕೇಸ್ ನಂ 02

ಕೇಸ್ ನಂ 02: 2000 ವರ್ಷದಲ್ಲಿ ಥಾಣೆಯ ವಾಗ್ಲೇ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ಶಿಂಧೆ ವಿರುದ್ಧ ದಾಖಲಾಗಿತ್ತು. ಅದೇ ರೀತಿ 2001 ಮತ್ತು 2004 ರಲ್ಲಿ ಕ್ರಮವಾಗಿ ತಲಾ ಒಂದು ಕೇಸು ಬಿದ್ದಿತ್ತು. ಶಾಂತಿ ಕದಡುವ ಪ್ರಯತ್ನ ಮಾಡಿದ ಆರೋಪದಡಿ ಶಿಂಧೆ ವಿರುದ್ಧ ಕೇಸುಗಳು ದಾಖಲಾಗಿದ್ದವು. ಆದ್ರೆ ಈ ಯಾವ ಕೇಸಿನಲ್ಲಿ ಶಿಂಧೆ ಶಿಕ್ಷೆಗೆ ಗುರಿಯಾಗಿಲ್ಲ.

 ಹದಿನೆಂಟು ಕ್ರಿಮಿನಲ್ ಕೇಸು

ಹದಿನೆಂಟು ಕ್ರಿಮಿನಲ್ ಕೇಸು

2005 ರಲ್ಲಿ ಏಕನಾಥ್ ಶಿಂಧೆ ವಿರುದ್ಧ ಸಾರ್ವಜನಿಕ ಆಸ್ತಿಗೆ ಹಾನಿಯುಂಟು ಮಾಡಿದ ಕೇಸು ಜಡಿಯಲಾಗಿತ್ತು. ಐಪಿಸಿ ಸೆಕ್ಷನ್ 143, 147, 149, 427 ಮತ್ತಿತರ ಸೆಕ್ಷನ್ ಅಡಿ ಕೇಸು ದಾಖಲಾಗಿತ್ತು. ಇನ್ನು 2005 ರಲ್ಲಿ ಒಟ್ಟು ನಾಲ್ಕು ಕೇಸು ಏಕನಾಥ ಶಿಂಧೆ ಮೇಲೆ ದಾಖಲಾಗಿತ್ತು. ಶಿಂಧೆ ವಿರುದ್ಧ ದಾಖಲಾಗಿರುವ ಬಹುತೇಕ ಪ್ರಕರಣಗಳು ಶಾಂತಿ ಕದಡಿದ, ನಿಷೇಧಾಜ್ಞೆ ಸರ್ಕಾರದ ಅದೇಶ ಉಲ್ಲಂಘನೆ, ಸಾರ್ವಜನಿಕ ಆಸ್ತಿಗೆ ನಷ್ಟವುಂಟು ಮಾಡಿದ ಕೇಸಗಳೇ ಆಗಿವೆ. ಒಟ್ಟಾರೆ 2011 ರ ವೇಳೆಗೆ ಹದಿನೆಂಟು ಕ್ರಿಮಿನಲ್ ಕೇಸುಗಳು ದಾಖಲಾಗಿದ್ದವು. ಯಾವುದರಲ್ಲೂ ಶಿಕ್ಷೆಗೆ ಗುರಿಯಾಗಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.

Recommended Video

ಕೊನೇಕ್ಷಣದಲ್ಲಿ ಮಹಾ ಬದಲಾವಣೆ: ಏಕನಾಥ್ ಶಿಂದೆಗೆ CM ಪಟ್ಟ ಬಿಟ್ಕೊಟ್ಟ ದೇವೇಂದ್ರ ಫಡ್ನವಿಸ್ | Oneindia Kannada

English summary
18 criminal cases registered Against Maharastra Designated Chief Minister Eknath Shinde from the year of 1993 to 2011 know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X