ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಕೊವಿಡ್-19 ಸೋಂಕಿತರಿಗಿಂತ ಗುಣಮುಖರೇ ಹೆಚ್ಚು

|
Google Oneindia Kannada News

ಮುಂಬೈ, ಜುಲೈ.26: ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿನ ಕೊವಿಡ್-19 ಅಂಕಿ-ಸಂಖ್ಯೆಗಳು ಜನರನ್ನು ಕೊಂಚ ನಿರಾಳಗೊಳಿಸಿವೆ. ಕೊರೊನಾವೈರಸ್ ಸೋಂಕು ಅಂಟಿಕೊಂಡವರೆಲ್ಲ ಸಾವಿನ ಮನೆ ಸೇರುವುದಿಲ್ಲ ಎಂಬ ಸತ್ಯವನ್ನು ಸಾರಿ ಹೇಳುತ್ತಿವೆ.

Recommended Video

India and Nepal border dispute explained | Oneindia Kannada

ರಾಜ್ಯದಲ್ಲಿ ಒಂದೇ ದಿನ 7,717 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ಇದೇ 24 ಗಂಟೆಗಳಲ್ಲಿ 10,333 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ಶುಭ ಸುದ್ದಿ; ಮುಂಬೈನಲ್ಲಿ ಹೊಸ ಕೋವಿಡ್ ಸಂಖ್ಯೆ ಇಳಿಮುಖ!ಶುಭ ಸುದ್ದಿ; ಮುಂಬೈನಲ್ಲಿ ಹೊಸ ಕೋವಿಡ್ ಸಂಖ್ಯೆ ಇಳಿಮುಖ!

ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 3,91,440 ಏರಿಕೆಯಾಗಿದ್ದು, ಈ ಪೈಕಿ 2,32,277 ಸೋಂಕಿತರು ಗುಣಮುಖರಾಗಿದ್ದಾರೆ. 1,44,694 ಸಕ್ರಿಯ ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣ ಶೇ.59.34ರಷ್ಟಿದೆ. ಇನ್ನು, ಮಹಾಮಾರಿಗೆ ಇದುವರೆಗೂ 14165 ಜನರು ಉಸಿರು ಚೆಲ್ಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Maharastra: Coronavirus Fresh Cases Is Less Than Recoverd Cases


ಭಾರತದಲ್ಲಿ ಕೊರೊನಾವೈರಸ್ ಕಂಡೀಶನ್ ಹೇಗಿದೆ?:

ಭಾರತದಲ್ಲಿ ಕಳೆದ 24 ಗಂಟೆಗಳಲ್ಲೇ 47,704 ಕೊರೊನಾವೈರಸ್ ಸೋಂಕಿತರು ಪತ್ತೆಯಾಗಿದ್ದಾರೆ. 24 ಗಂಟೆಯಲ್ಲಿ 654 ಮಂದಿ ಮೃತಪಟ್ಟಿದ್ದಾರೆ. ಒಟ್ಟು ದೇಶದಲ್ಲಿ 14,83,157 ಕೊರೊನಾ ಸೋಂಕಿತ ಪ್ರಕರಣಗಳಿವೆ. 4,96,988 ಪ್ರಕರಣಗಳು ಸಕ್ರಿಯವಾಗಿವೆ. 9,52,744 ಮಂದಿ ಗುಣಮುಖರಾಗಿದ್ದಾರೆ.

ದೇಶಾದ್ಯಂತ ಮಹಾಮಾರಿಗೆ ಒಟ್ಟು 33,425 ಮಂದಿ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ ದೇಶದ 5 ಲಕ್ಷಕ್ಕೂ ಹೆಚ್ಚು ಜನರ ಮಾದರಿಗಳನ್ನು ಕೊವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಜುಲೈ.26 ರಂದು 5,15,000 ಮಂದಿಯನ್ನು ಪರೀಕ್ಷೆಗೊಳಪಡಿಸಿತ್ತು. ಜುಲೈ.27ರಂದು 5,28,000 ಮಂದಿ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

English summary
Maharastra: Coronavirus Fresh Cases Is Less Than Recoverd Cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X