ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಸಿಎಂ ಹುದ್ದೆ ಉಳಿಸಲು ನಿಮ್ಮಿಂದ ಮಾತ್ರ ಸಾಧ್ಯ: ಮೋದಿಗೆ ಮಹಾ ಸಿಎಂ ಉದ್ಧವ್ ಠಾಕ್ರೆ ಮನವಿ

|
Google Oneindia Kannada News

ಬಿಜೆಪಿ ಮತ್ತು ಶಿವಸೇನೆ, ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಯನ್ನು ಮೈತ್ರಿ ಮಾಡಿಕೊಂಡು ಗೆದ್ದಿತ್ತು. ಅದಾದ ಮೇಲೆ, ಎರಡು ಪಕ್ಷಗಳ ನಡುವೆ ಹೊಂದಾಣಿಕೆ ಮೂಡದೇ ಮೈತ್ರಿ ಮುರಿದು ಬಿದ್ದದ್ದು ಈಗ ಇತಿಹಾಸ.

ರಾಜಕೀಯದಲ್ಲಿ ಉತ್ತರ, ದಕ್ಷಿಣ ಧೃವದಂತಿದ್ದ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಪಕ್ಷದ ಸರಕಾರ, ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದಿತ್ತು. ಅದರಂತೇ, ಎಲ್ಲರ ಒಮ್ಮತದೊಂದಿಗೆ ಉದ್ಧವ್ ಠಾಕ್ರೆ ಅಲ್ಲಿನ ಸಿಎಂ ಆದರು. ಆದರೆ, ಆ ಹುದ್ದೆಯನ್ನು ಉಳಿಸಿಕೊಳ್ಳಲು ಅವರಿಗೆ ಸಾಂವಿಧಾನಿಕ ತೊಡಕು ಮುಂದುವರಿಯುತ್ತಲೇ ಬರುತ್ತಿದೆ.

ಕೊರೊನಾ; ಒಂದೇ ದಿನದಲ್ಲಿ ಹೆಚ್ಚು ಸಾವು, ದಾಖಲೆ ಬರೆದ ಭಾರತ ಕೊರೊನಾ; ಒಂದೇ ದಿನದಲ್ಲಿ ಹೆಚ್ಚು ಸಾವು, ದಾಖಲೆ ಬರೆದ ಭಾರತ

ದೇಶದ ಶ್ರೀಮಂತ ರಾಜ್ಯವೆಂದೇ ಹೆಸರಾಗಿರುವ ಮಹಾರಾಷ್ಟ್ರದ ಸಿಎಂ ಆಗಿ ಠಾಕ್ರೆ, ಕಳೆದ ವರ್ಷ ನವೆಂಬರ್ ಅಲ್ಲಿ ಪದಗ್ರಹಣ ಮಾಡಿದ್ದರು. ಠಾಕ್ರೆ, ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ, ಮತ್ತು, ರಾಜ್ಯ ಮೇಲ್ಮನೆಯ ಸದಸ್ಯರು ಕೂಡಾ ಅಲ್ಲ.

ಕಾನೂನಿನ ಪ್ರಕಾರ, ಅಧಿಕಾರಕ್ಕೇರಿದ ಆರು ತಿಂಗಳಳೊಗೆ ಒಂದೋ ಚುನಾವಣೆಯಲ್ಲಿ ಗೆಲ್ಲಬೇಕು, ಇಲ್ಲವೇ, ವಿಧಾನಪರಿಷತ್ ಸದಸ್ಯರಾಗಬೇಕು. ಠಾಕ್ರೆಗೆ ಇರುವ ಆಯ್ಕೆಯೆಂದರೆ, ಪರಿಷತ್ತಿಗೆ ಆಯ್ಕೆಯಾಗುವುದು. ಮೋದಿಗೆ ಮನವಿ ಮಾಡಿದ ಠಾಕ್ರೆ, ಮುಂದೆ..

ಉದ್ಧವ್ ಠಾಕ್ರೆ ನಿವಾಸದಲ್ಲಿ ಸಬ್ ಇನ್ಸ್‌ಪೆಕ್ಟರ್‌ಗೆ ಕೊರೊನಾಉದ್ಧವ್ ಠಾಕ್ರೆ ನಿವಾಸದಲ್ಲಿ ಸಬ್ ಇನ್ಸ್‌ಪೆಕ್ಟರ್‌ಗೆ ಕೊರೊನಾ

ಮೇ 28ನೇ ತಾರೀಕಿನೊಳಗೆ ಠಾಕ್ರೆ ಅಸೆಂಬ್ಲಿ ಸದಸ್ಯರಾಗಬೇಕು

ಮೇ 28ನೇ ತಾರೀಕಿನೊಳಗೆ ಠಾಕ್ರೆ ಅಸೆಂಬ್ಲಿ ಸದಸ್ಯರಾಗಬೇಕು

ಈ ತಿಂಗಳ (ಮೇ) 28ನೇ ತಾರೀಕಿನೊಳಗೆ ಠಾಕ್ರೆ ಅಸೆಂಬ್ಲಿ ಸದಸ್ಯರಾಗಬೇಕು, ಇಲ್ಲವೇ, ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು. ಎಲ್ಲಾ ಪ್ರಯತ್ನಗಳನ್ನೂ ಮಾಡಿ, ಅದು ಫಲಕೊಡದೇ ಇದ್ದಿದ್ದರಿಂದ, ಠಾಕ್ರೆ, ಪ್ರಧಾನಿ ಮೋದಿಗೆ ಬುಧವಾರ (ಏ 29) ದೂರವಾಣಿ ಕರೆ ಮಾಡಿ, ಮನವಿ ಮಾಡಿಕೊಂಡಿದ್ದರು.

ಮಹಾರಾಷ್ಟ್ರದ ರಾಜ್ಯಪಾಲ ಕೊಶ್ಯಾರಿ

ಮಹಾರಾಷ್ಟ್ರದ ರಾಜ್ಯಪಾಲ ಕೊಶ್ಯಾರಿ

ಮಹಾರಾಷ್ಟ್ರದ ರಾಜ್ಯಪಾಲರಾದ ಕೊಶ್ಯಾರಿ ಕಾರ್ಯವೈಖರಿಯ ಬಗ್ಗೆ ದೂರು ನೀಡುವುದರ ಜೊತೆಗೆ, ನನ್ನ ಸಿಎಂ ಹುದ್ದೆ ನಿಮ್ಮಿಂದ ಉಳಿಯಲು ಸಾಧ್ಯ ಎಂದು ಠಾಕ್ರೆ, ಪ್ರಧಾನಿಗೆ ಮನವಿ ಮಾಡಿದ್ದಾರೆಂದು ವರದಿಯಾಗಿದೆ. ಇದಕ್ಕೆ ಮೋದಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ತಿಳಿದು ಬಂದಿದೆ.

ಬಿಜೆಪಿ ಮುಖಂಡರ ಒತ್ತಡ

ಬಿಜೆಪಿ ಮುಖಂಡರ ಒತ್ತಡ

ರಾಜ್ಯಪಾಲ ಕೊಶ್ಯಾರಿಗೆ ಬಿಜೆಪಿ ಮುಖಂಡರು ಒತ್ತಡ ಹಾಕುತ್ತಿದ್ದಾರೆ. ಒಂದು ತಿಂಗಳ ಹಿಂದೆಯೇ ನಾನು ಚುನಾವಣೆ ನಡೆಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೆ. ಆದರೆ, ನಮ್ಮ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ನೀವು ಈಗ ಮಧ್ಯಪ್ರವೇಶಿಸಬೇಕು ಎಂದು ಠಾಕ್ರೆ, ಮೋದಿಗೆ ಮನವಿ ಮಾಡಿದ್ದಾರೆಂದು ವರದಿಯಾಗಿದೆ.

ಠಾಕ್ರೆ ಮನವಿಗೆ ಮೋದಿ ತಕ್ಷಣವೇ ಸ್ಪಂದಿಸಿದ್ದಾರೆ

ಠಾಕ್ರೆ ಮನವಿಗೆ ಮೋದಿ ತಕ್ಷಣವೇ ಸ್ಪಂದಿಸಿದ್ದಾರೆ

ಮೋದಿ ಜೊತೆ ದೂರವಾಣಿ ಸಂಭಾಷಣೆ ನಡೆಸಿದ ಮರುದಿನವೇ, ಕೊಶ್ಯಾರಿ, ಚುನಾವಣಾ ಆಯೋಗಕ್ಕೆ ಆದಷ್ಟು ಬೇಗ ವಿಧಾನ ಪರಿಷತ್ತಿಗೆ ಚುನಾವಣೆ ನಡೆಸಿ ಎಂದು ಸೂಚಿಸಿದ್ದಾರೆ. ಪಕ್ಷಗಳ ಬಲಾಬಲದ ಮೇಲೆ, ಠಾಕ್ರೆ, ಚುನಾವಣೆ ಗೆಲ್ಲುತ್ತಾರೋ, ಇಲ್ಲವೋ, ಅದು ಆಮೇಲಿನ ವಿಚಾರ. ಒಟ್ಟಿನಲ್ಲಿ, ಠಾಕ್ರೆ ಮನವಿಗೆ ಮೋದಿ ತಕ್ಷಣವೇ ಸ್ಪಂದಿಸಿದ್ದಾರೆ.

English summary
After Call To PM Modi, Uddhav Thackeray Gains, Elections Requested By Governor,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X