ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿದ್ದಾರೆ ಪೆರು ದೇಶಕ್ಕಿಂತ ಹೆಚ್ಚು ಕೊರೊನಾ ಸೋಂಕಿತರು

|
Google Oneindia Kannada News

ಮುಂಬೈ, ಸೆಪ್ಟೆಂಬರ್ 03:ಮಹಾರಾಷ್ಟ್ರದಲ್ಲಿ ಪೆರು ದೇಶಕ್ಕಿಂತಲೂ ಹೆಚ್ಚು ಕೊರೊನಾ ಸೋಂಕಿತರಿದ್ದಾರೆ.

ಪೆರು ಅತಿ ಹೆಚ್ಚು ಕೊರೊನಾ ಸೋಂಕಿತರಿರುವ ರಾಷ್ಟ್ರವಾಗಿದ್ದು, ಮಹಾರಾಷ್ಟ್ರ ಕೇವಲ ಒಂದು ರಾಜ್ಯ ಸೋಂಕಿತರ ಸಂಖ್ಯೆಯನ್ನು ಮೀರಿಸಿದೆ.

ಭಾರತದಲ್ಲಿ 83,883 ಕೊರೊನಾ ಸೋಂಕಿತರು ಪತ್ತೆ, 1,043 ಮಂದಿ ಸಾವು ಭಾರತದಲ್ಲಿ 83,883 ಕೊರೊನಾ ಸೋಂಕಿತರು ಪತ್ತೆ, 1,043 ಮಂದಿ ಸಾವು

ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮಹಾರಾಷ್ಟ್ರದಲ್ಲಿ ಒಂದೇ ದಿನ 17,433 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಬುಧವಾರದಷ್ಟೊತ್ತಿಗೆ ಕೊರೊನಾ ಸೋಂಕಿತರ ಸಂಖ್ಯೆ 8,25,739ರಷ್ಟಿದೆ.

Maharashtra’s Covid-19 Count More Than Country Peru

ಈ ಸಂಖ್ಯೆಯೂ ಅತಿ ಹೆಚ್ಚು ಕೊರೊನಾ ಸೋಂಕಿತರಿರುವ ರಾಷ್ಟ್ರಗಳ ಪೈಕಿ ಐದನೇ ಸ್ಥಾನದಲ್ಲಿರುವ ಪೆರುವಿಗಿಂತ ಹೆಚ್ಚಿದೆ.

ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಪ್ರಕಾರ ಪೆರುವಿನಲ್ಲಿ 6,52,037 ಕೊರೊನಾ ಸೋಂಕಿತರಿದ್ದಾರೆ. ರಷ್ಯಾದಲ್ಲಿ 10,05,000ಕೊರೊನಾ ಸೋಂಕಿತರಿದ್ದಾರೆ. ಈ ಮೊದಲು ಮಹಾರಾಷ್ಟ್ರದಲ್ಲಿ ಆಗಸ್ಟ್ 29 ರಂದು 16,867 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು.

ಮಾರ್ಚ್ 9ಕ್ಕೆ ಮೊದಲ ಪ್ರಕರಣ ಪತ್ತೆಯಾಗಿತ್ತು ಅಂದಿನಿಂದ ಒಂದು ಲಕ್ಷದ ಗಡಿ ದಾಟಲು 126 ದಿನಗಳು ಬೇಕಾಯಿತು, ಬಳಿಕ 51 ದಿನಗಳಲ್ಲಿ ಎರಡು ಲಕ್ಷದ ಗಡಿ ತಲುಪಿತು.

ಭಾರತದ ಒಟ್ಟು ಕೊರೊನಾ ಸೋಂಕಿತರ ಪೈಕಿ ಶೇ.22ರಷ್ಟು ಮಂದಿ ಮಹಾರಾಷ್ಟ್ರದಲ್ಲಿದ್ದಾರೆ. ರಾಜ್ಯದಲ್ಲಿ 292 ಮಂದಿ ಒಂದೇ ದಿನದಲ್ಲಿ ಸಾವನ್ನಪ್ಪಿದ್ದಾರೆ. ಒಟ್ಟು 25195 ಮಂದಿ ಮೃತಪಟ್ಟಿದ್ದಾರೆ. ಮುಂಬೈನಲ್ಲಿ 1622 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 34 ಮಂದಿ ಮೃತಪಟ್ಟಿದ್ದಾರೆ.

English summary
Maharashtra, the state hardest hit by the spread of the coronavirus disease in India, has been achieving grim milestones every few days.Maharashtra’s Covid-19 Count More Than Country Peru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X