ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೊಚ್ಚಲ ಪ್ರಯತ್ನದಲ್ಲೇ ಗೆಲುವಿನ ರುಚಿ ಕಂಡ ಶಿವಸೇನಾದ ಆದಿತ್ಯ ಠಾಕ್ರೆ

|
Google Oneindia Kannada News

ಮುಂಬೈ, ಅಕ್ಟೋಬರ್ 24: ಶಿವಸೇನಾ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಕುಟುಂಬದ ಸದಸ್ಯರೊಬ್ಬರು ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದು ಜಯಿಸಿದ್ದಾರೆ. ಠಾಕ್ರೆ ಅವರ ಮೊಮ್ಮಗ ಆದಿತ್ಯ ಇಂದು ವರ್ಲಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗುವುದು ಖಚಿತವಾಗಿದೆ.

ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಈ ಸಮಯದ ಟ್ರೆಂಡ್ ನಂತೆ ಆದಿತ್ಯ 53,728 ಮತ (ಶೇ 71.96) ಪಡೆದಿದ್ದರೆ, ಸಮೀಪದ ಪ್ರತಿಸ್ಪರ್ಧಿ ಎನ್ಸಿಪಿಯ ಸುರೇಶ್ ಮಾನೆ ಅವರು 11037 ಮತ(ಶೇ 14.78) ಗಳನ್ನು ಮಾತ್ರ ಗಳಿಸಿದ್ದಾರೆ.

ಟಾರೋ ಭವಿಷ್ಯ: ಬಿಜೆಪಿಯಿಂದಲೇ 'ಮಹಾ' ಸಿಎಂ ಆಗಿ ಅಚ್ಚರಿಯ ಹೆಸರುಟಾರೋ ಭವಿಷ್ಯ: ಬಿಜೆಪಿಯಿಂದಲೇ 'ಮಹಾ' ಸಿಎಂ ಆಗಿ ಅಚ್ಚರಿಯ ಹೆಸರು

2010ರಲ್ಲಿ ಯುವ ಸೇನಾದ ಅಧ್ಯಕ್ಷರಾಗಿ ಆಯ್ಕೆಯಾದರು. 2017ರಲ್ಲಿ ಮುಂಬೈ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾದರು. 2018ರಿಂದ ಶಿವಸೇನಾ ಮುಖಂಡರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಾಂಬಾ ಸ್ಕಾಟಿಷ್ ಶಾಲೆ, ಸೈಂಟ್ ಕ್ಸೇವಿಯರ್ ಕಾಲೇಜ್, ಕೆಸಿ ಕಾನೂನು ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ.

Maharashtra Worli: Aaditya Thackeray win over Suresh Mane

ಮಹಾರಾಷ್ಟ್ರದ ಒಟ್ಟು 288 ಕ್ಷೇತ್ರಗಳಲ್ಲಿ ಬಿಜೆಪಿ 150, ಶಿವಸೇನೆ 124 ಮತ್ತು ಇತರ ಸಣ್ಣ ಪುಟ್ಟ ಮೈತ್ರಿಪಕ್ಷಗಳು 14 ಕ್ಷೇತ್ರಗಳಲ್ಲಿ ಕಣಕ್ಕಿಳಿದಿವೆ. ಅಕ್ಟೋಬರ್ 24ರಂದು ಸಂಜೆ ವೇಳೆಗೆ ಅಧಿಕೃತವಾಗಿ ಫಲಿತಾಂಶ ಪ್ರಕಟವಾಗಲಿದೆ. 2014ರಲ್ಲಿ ಬಿಜೆಪಿ ಹಾಗೂ ಶಿವಸೇನೆ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು, 260 ಕ್ಷೇತ್ರಗಳ ಪೈಕಿ ಬಿಜೆಪಿ 122ರಲ್ಲಿ ಗೆಲುವು ಸಾಧಿಸಿತ್ತು. ಸೇನಾ 282 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 63ರಲ್ಲಿ ಜಯ ದಾಖಲಿಸಿತ್ತು.

ಬಾಳಾ ಠಾಕ್ರೆ ಮೊಮ್ಮಗ ಆದಿತ್ಯ ಆಸ್ತಿ ಬಹಿರಂಗ, ಎಷ್ಟು ಕೋಟಿ ರು ಒಡೆಯ?ಬಾಳಾ ಠಾಕ್ರೆ ಮೊಮ್ಮಗ ಆದಿತ್ಯ ಆಸ್ತಿ ಬಹಿರಂಗ, ಎಷ್ಟು ಕೋಟಿ ರು ಒಡೆಯ?

2014ರಲ್ಲಿ ಸೇನಾದಿಂದ ಸ್ಪರ್ಧಿಸಿದ್ದ ಸುನಿಲ್ ಶಿಂಧೆ ಗೆಲುವು ಸಾಧಿಸಿದ್ದರು. ಲೋಕಸಭೆ ಚುನಾವಣೆಯಲ್ಲಿ ಸೇನಾದ ಅರವಿಂದ್ ಸಾವಂತ್ ಅವರು ಸುಲಭವಾಗಿ ಗೆಲ್ವು ಸಾಧಿಸಿದ್ದರು. 1990ರಿಂದ 2004ರ ತನಕ ಈ ಕ್ಷೇತ್ರದಲ್ಲಿ ಸೇನಾದ ದತ್ತಾ ನಾಲವಡೆ ಗೆಲುವು ಸಾಧಿಸಿದ್ದರು. 2009ರಲ್ಲಿ ಎನ್ಸಿಪಿ ಸಚಿನ್ ಅಹಿರ್ ಜಯ ಕಂಡಿದ್ದರು.

English summary
Maharashtra Worli: Aaditya Thackeray win over Suresh Mane at Worli assembly constituency. The Election Commission of India has confirmed the results will be declared by Thursday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X