ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಥಾ ಅಚ್ಚರಿ: ಕೊರೊನಾ ಲಸಿಕೆ ಪಡೆದ ಬಳಿಕ ಮರಳಿತು ಕಣ್ಣಿನ ದೃಷ್ಟಿ

|
Google Oneindia Kannada News

ಮುಂಬೈ, ಜುಲೈ 07: ಕೊರೊನಾ ಲಸಿಕೆ ಪಡೆದ ಬಳಿಕ ಹಲವು ಅಡ್ಡಪರಿಣಾಮಗಳನ್ನು ಎದುರಿಸಿರುವ ಸಾಕಷ್ಟು ಉದಾಹರಣೆಗಳಿವೆ. ಆದರೆ ಲಸಿಕೆ ಪಡೆದ ಬಳಿಕ 70 ವರ್ಷದ ಮಹಿಳೆಯೊಬ್ಬರಿಗೆ ದೃಷ್ಟಿಯನ್ನು ಮರಳಿ ಪಡೆದಿರುವ ಅಚ್ಚರಿಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಕೊರೊನಾ ಲಸಿಕೆ ಪಡೆದ ಬಳಿಕ ಆರೋಗ್ಯ ಸಮಸ್ಯೆಗಳು ಕಾಣಿಸುತ್ತವೆ ಎಂದು ಲಕ್ಷಾಂತರ ಮಂದಿ ಹಿಂದುಮುಂದು ನೋಡುತ್ತಿರುವಾಗಲೇ ಕೋವಿಶೀಲ್ಡ್ ಲಸಿಕೆ ಪಡೆದ ಮಹಿಳೆಗೆ ದೃಷ್ಟಿ ಮರಳಿ ಬಂದಿದೆ.

ಇಲ್ಲಿನ ವಾಷಿಂ ಜಿಲ್ಲೆಯ ನಿವಾಸಿ ಮಥುರಾಬಾಯಿ ಬಿಡ್ಜೆ 9 ವರ್ಷದ ಹಿಂದೆ ತಮ್ಮ ಎರಡೂ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದರು.

Maharashtra Woman Gets Eyesight Back After Covishield Vaccine

ಈ ನಡುವೆ ಜೂ.26ರಂದು ಮಥುರಾಬಾಯಿ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದರು, ಅಚ್ಚರಿ ಎಂಬಂತೆ ಮಾರನೇ ದಿನ ಅವರಿಗೆ ಒಂದು ಕಣ್ಣಿನ ದೃಷ್ಟಿ ಮರಳಿದೆ.

ಒಂದು ಕಣ್ಣು ಶೇ.30-40ರಷ್ಟು ದೃಷ್ಟಿಪಡೆದುಕೊಂಡಿದೆ ಎಂದು ಅವರು ಹೇಳುತ್ತಿದ್ದಾರೆ, ಹೀಗಾಗಿ ಇದು ವೈದ್ಯಲೋಕಕ್ಕೆ ಅಚ್ಚರಿಯಾಗಿ ಪರಿಣಮಿಸಿದೆ.

ದೇಶದ ಇತರೆ ಹಲವು ರಾಜ್ಯಗಳಲ್ಲೂ ಕೋವಿಡ್ ಲಸಿಕೆ ಪಡೆದವರು ಇದೇ ರೀತಿಯ ಅನೇಕ ಅನುಭವಗಳನ್ನು ಹಂಚಿಕೊಂಡಿದ್ದರು. ಆದರೆ ಇದು ಯಾವುದಕ್ಕೂ ವೈಜ್ಞಾನಿಕವಾಗಿ ಸಕಾರಣ ಸಿಕ್ಕಿಲ್ಲ.

ಕಳೆದ 24 ಗಂಟೆಗಳಲ್ಲಿ 32,40,007 ಮಂದಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದೆ. 18 ರಿಂದ 44 ವಯೋಮಾನದ 16,00,825 ಜನರಿಗೆ ಮೊದಲ ಡೋಸ್ ಹಾಗೂ 1,09,913 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ದೇಶದಲ್ಲಿ ಈವರೆಗೂ ಇದೇ ವಯೋಮಾನದ 10,45,24,240 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 30,42,302 ಜನರಿಗೆ ಎರಡನೇ ಡೋಸ್ ಲಸಿಕೆ ವಿತರಿಸಲಾಗಿದೆ.

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 172 ದಿನಗಳಲ್ಲಿ 36 ಕೋಟಿಗಿಂತಲೂ ಅಧಿಕ ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ. ದೇಶದಲ್ಲಿ ಒಟ್ಟು 36,09,56,621 ಮಂದಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಲಸಿಕೆ ವಿತರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಕಳೆದ ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು.

Recommended Video

ಯೂರೋ ಕಪ್ ಇಟಲಿಗೆ ಇನ್ನೊಂದು ಹೆಜ್ಜೆ ದೂರ | Oneindia Kannada

ಕಣ್ಣಿನ ಶಿಲೀಂಧ್ರ ಸೋಂಕಿಗೆ ಔಷಧಿ ಅಭಿವೃದ್ಧಿಪಡಿಸಿದ ದೆಹಲಿ ಐಐಟಿ ಮಹಿಳಾ ಅನ್ವೇಷಕರು

English summary
Woman from Maharashtra's Washim is said to have regained her vision after taking the COVID-19 vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X