ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ: ಟ್ರಕ್‌ ಪಲ್ಟಿ- ಫೋನ್‌, ಟಿವಿ ಸೇರಿ 70 ಲಕ್ಷ ರು ಮೌಲ್ಯದ ವಸ್ತುಗಳು ಲೂಟಿ

|
Google Oneindia Kannada News

ಒಸ್ಮಾನಾಬಾದ್, ಜೂ.16: ಮಹಾರಾಷ್ಟ್ರದ ಉಸ್ಮಾನಾಬಾದ್‌ನಲ್ಲಿ ಕಂಟೇನರ್ ಟ್ರಕ್‌ ಒಂದು ಉರುಳಿದ್ದು ಟ್ರಕ್‌ನಲ್ಲಿದ್ದ ಸುಮಾರು 70 ಲಕ್ಷಕ್ಕೂ ಅಧಿಕ ಮೌಲ್ಯದ ಸರಕುಗಳನ್ನು ಗ್ರಾಮಸ್ಥರು ಮತ್ತು ದಾರಿಹೋಕರು ಲೂಟಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಸೋಮವಾರ ಮುಂಜಾನೆ 3 ಗಂಟೆ ಸುಮಾರಿಗೆ ಸೋಲಾಪುರ-ಔರಂಗಬಾದ್‌ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ''ಪ್ರಸ್ತುತ ಜನರು ತೆಗೆದುಕೊಂಡಿರುವ ವಸ್ತುಗಳನ್ನು ಹಿಂದಕ್ಕೆ ಪಡೆಯಲು ಹತ್ತಿರದ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲು ತಂಡಗಳನ್ನು ರಚಿಸಬೇಕಾಗಿದೆ,'' ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

12 ಕೋಟಿ ಮೌಲ್ಯದ ಮೊಬೈಲ್ ಸಾಗಿಸುತ್ತಿದ್ದ ಲಾರಿ ಅಪಹರಣ!12 ಕೋಟಿ ಮೌಲ್ಯದ ಮೊಬೈಲ್ ಸಾಗಿಸುತ್ತಿದ್ದ ಲಾರಿ ಅಪಹರಣ!

"ಮೊಬೈಲ್ ಫೋನ್‌ಗಳು, ಕಂಪ್ಯೂಟರ್‌ಗಳು, ಎಲ್ಇಡಿಗಳು, ಆಟಿಕೆಗಳು ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಹೊತ್ತು ಟ್ರಕ್‌ ಸಾಗುತ್ತಿತ್ತು. ಚಾಲಕರ ನಿಯಂತ್ರಣ ತಪ್ಪಿ ಟ್ರಕ್‌ ಪಲ್ಟಿಯಾಗಿದೆ. ವಸ್ತುಗಳಲೆಲ್ಲಾ ರಸ್ತೆಯ ಮೇಲೆ ಬಿದ್ದ ನಂತರ ಗ್ರಾಮಸ್ಥರು ಮತ್ತು ದಾರಿಹೋಕರು ಈ ವಸ್ತುಗಳನ್ನು ತೆಗೆದುಕೊಂಡು ಹೋಗಲು ಪ್ರಾರಂಭಿಸಿದರು. ಆದರೆ ಕೆಲವರು ಉರುಳಿಬಿದ್ದ ಟ್ರಕ್‌ನ ಬಾಗಿಲನ್ನು ತೆರೆದು ದೋಚಿದ್ದಾರೆ. ಈಗ ವಸ್ತುಗಳನ್ನು ಹಿಂದಕ್ಕೆ ಪಡೆಯಲು ಸ್ಥಳೀಯ ಪೊಲೀಸರ ತಂಡ ನಿಯೋಜನೆ ಮಾಡಬೇಕಾಗಿದೆ," ಎಂದು ಹೇಳಿದ್ದಾರೆ.

Maharashtra: Truck Overturns, People Loot Phones, TVs Worth ₹ 70 Lakh

ಇನ್ನು ಕೆಲವು ಗ್ರಾಮಸ್ಥರು ಪೊಲೀಸರ ಮನವಿಯ ಮೇರೆಗೆ ಸರಕುಗಳನ್ನು ಹಿಂದಿರುಗಿಸಿದ್ದಾರೆ. ಆದರೆ ಅನೇಕ ಮಂದಿ ವಸ್ತುಗಳನ್ನು ಹಿಂದಕ್ಕೆ ನೀಡಿಲ್ಲ. ಬಳಿಕ ತಂಡವೊಂದು ಜನರು ಟ್ರಕ್‌ನಿಂದ ದೋಚಿದ ವಸ್ತುಗಳನ್ನು ಹಿಂಪಡೆಯಲು ಹುಡುಕಾಟ ನಡೆಸಿದೆ ಎಂದು ವರದಿಯಾಗಿದೆ.

ಲಾರಿ ಕದ್ದು ಸಿಕ್ಕಿಬಿದ್ದ, ಜೈಲಿನಿಂದ ಬಂದು ಅದೇ ಲಾರಿಯನ್ನು ಮತ್ತೆ ಕದ್ದ!ಲಾರಿ ಕದ್ದು ಸಿಕ್ಕಿಬಿದ್ದ, ಜೈಲಿನಿಂದ ಬಂದು ಅದೇ ಲಾರಿಯನ್ನು ಮತ್ತೆ ಕದ್ದ!

ಹಿರಿಯ ಪೊಲೀಸ್ ಅಧಿಕಾರಿ ಮೋತಿಚಂದ್ ರಾಥೋಡ್, "70 ಲಕ್ಷ ಮೌಲ್ಯದ ವಸ್ತುಗಳನ್ನು ಲೂಟಿ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಶೇ. 40 ರಷ್ಟು ವಸ್ತುಗಳನ್ನು ಹಿಂಪಡೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಹೆಚ್ಚಿನ ಕಾರ್ಯಾಚರಣೆ ನಡೆಸಲಾಗುತ್ತಿದೆ," ಎಂದು ಮಾಹಿತಿ ನೀಡಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Truck Overturns, People Loot Phones, TVs Worth ₹ 70 Lakh In Maharashtran says Cops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X