ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಸೋಂಕಿತರ ಸಂಖ್ಯೆ 1000 ದಾಟಿದ ಮೊದಲ ರಾಜ್ಯ

|
Google Oneindia Kannada News

ಮುಂಬೈ, ಏಪ್ರಿಲ್ 8: ಹೊಸದಾಗಿ 150 ಕೊರೊನಾ ಸೋಂಕಿತರು ಮಹಾರಾಷ್ಟ್ರದಲ್ಲಿ ವರದಿಯಾದ ಕಾರಣ, ಈಗ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1000 ಗಡಿದಾಟಿದೆ. ಸದ್ಯದ ಲೆಕ್ಕಾಚಾರದ ಪ್ರಕಾರ ಮಹಾರಾಷ್ಟ್ರ ಒಂದರಲ್ಲೇ 1018 ಕೊವಿಡ್ ಪ್ರಕರಣಗಳು ದಾಖಲಾಗಿದೆ. ದೇಶದಲ್ಲಿ ಅತಿ ಹೆಚ್ಚು ಹಾಗೂ ಸಾವಿರ ಸೋಂಕಿತರನ್ನು ಹೊಂದಿದ ಮೊದಲ ರಾಜ್ಯವಾಗಿದೆ.

ಇನ್ನು ಒಂದೇ ದಿನ 12 ಜನರು ಮಹಾರಾಷ್ಟ್ರದಲ್ಲಿ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 64ಕ್ಕೆ ಏರಿಕೆಯಾಗಿದೆ ಎಂದು ಅಧಿಕೃತವಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೊಸದಾಗಿ ವರದಿಯಾದ 150 ಕೊರೊನಾ ಸೋಂಕಿತರ ಪೈಕಿ 116 ಜನರು ಮುಂಬೈ ನಗರಕ್ಕೆ ಸೇರಿದವರು. ಅಂದ್ಹಾಗೆ, ಮಹಾರಾಷ್ಟ್ರದಲ್ಲಿ ಮುಂಬೈ ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 652. ದೇಶದ ಯಾವುದೇ ನಗರದಲ್ಲೂ ಈ ಸಂಖ್ಯೆಯಲ್ಲಿ ಕೊವಿಡ್ ಕೇಸ್ ದಾಖಲಾಗಿಲ್ಲ.

maharashtra-total-corona-cases-reach-1000

ಸದ್ಯ, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸೂಕ್ಷ್ಮ ಪ್ರದೇಶ ಅಂದ್ರೆ ಮುಂಬೈ. ಅದರಲ್ಲೂ ಮುಂಬೈನ ಧಾರವಿ ಮತ್ತು ವಾರ್ಲಿ ಕೊಲಿವಾಡ ಪ್ರದೇಶಗಳಲ್ಲಿ ಹೆಚ್ಚು ಸೋಂಕಿತರ ಪತ್ತೆಯಾಗಿದ್ದಾರೆ.

ಮಹಾರಾಷ್ಟ್ರ ಬಿಟ್ಟರೆ ತಮಿಳುನಾಡು, ದೆಹಲಿ, ತೆಲಂಗಾಣ ರಾಜ್ಯಗಳಲ್ಲಿ ಹೆಚ್ಚು ಸೋಂಕಿತರು ಕಾಣಿಸಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ 690ಕ್ಕೆ ಏರಿದೆ, ದೆಹಲಿಯಲ್ಲಿ 576 ಹಾಗೂ ತೆಲಂಗಾಣದಲ್ಲಿ 404ಕ್ಕೆ ಏರಿದೆ.

English summary
Maharashtra is the First State crossed 1000 covid 19 cases in india. mumbai city reported 650 cases alone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X