ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಬಿಗ್ ಶಾಕ್: ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು?
ನವದೆಹಲಿ, ನವೆಂಬರ್ 12: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಕುರಿತು ಯಾವೊಂದು ಪಕ್ಷಗಳೂ ಒಮ್ಮತಕ್ಕೆ ಬರುವ ನಿರ್ಧಾರ ತೆಗೆದುಕೊಳ್ಳದ ಕಾರಣ ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯಪಾಲರು ಶಿಫಾರಸು ಮಾಡಿದ್ದಾರೆ ಎಂಬ ವದಂತಿ ಹಬ್ಬಿದೆ.
ಶಿವಸೇನಾಗೆ ಕಾಲಾವಕಾಶ ನೀಡಲು ರಾಜ್ಯಪಾಲರ ನಕಾರ
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದಾರೆ ಎನ್ನಲಾಗಿದ್ದು, ಅದರ ವಿರುದ್ಧ ಶಿವಸೇನೆ ಸುಪ್ರೀಂ ಕೋರ್ಟ್ ಮೆಟ್ಟಿಲಿರುವ ಸಾಧ್ಯತೆ ಇದೆ ಎಂಬ ವದಂತಿಯೂ ಎದ್ದಿದೆ.
ಸೋಮವಾರ ಸಂಜೆಯೊಳಗೆ ಸರ್ಕಾರ ರಚಿಸಲು ಶಿವಸೇನೆಗೆ ರಾಜ್ಯಪಾಲರು ಗಡುವು ನೀಡಿದ್ದರು. ಆದರೆ ಗಡುವಿನೊಳಗೆ ಸರ್ಕಾರ ರಚಿಸಲು ಶಿವಸೇನೆ ವಿಫಲವಾಗಿತ್ತು. ಮಂಗಳವಾರ 8:30 ರ ಒಳಗೆ ಸರ್ಕಾರ ರಚಿಸಲು ಎನ್ ಸಿಪಿಗೆ ಅವಕಾಶ ನೀಡಲಾಗಿದ್ದು, ಅದಕ್ಕೂ ಮುನ್ನವೇ ರಾಷ್ಟ್ರಪತಿ ಆಳ್ವಿಕೆ ಹೇರಲು ಮುಂದಾಗಲಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಇನ್ನೂ ಖಚಿತ ಮಾಹಿತಿ ಲಭ್ಯವಾಗಬೇಕಿದೆ.