ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಸ್ಪೀಕರ್ ಚುನಾವಣೆ, ಶಿವಸೇನೆ ಶಾಸಕರಿಂದ ವಿಪ್ ಉಲ್ಲಂಘನೆ!

|
Google Oneindia Kannada News

ಮುಂಬೈ, ಜುಲೈ 03; ಏಕನಾಥ್ ಶಿಂಧೆ ವಿಶ್ವಾಸ ಮತದಲ್ಲಿ ಗೆಲವು ಸಾಧಿಸುವುದು ಬಹುತೇಕ ಖಚಿತವಾಗಿದೆ. ಭಾನುವಾರ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಆಯ್ಕೆಯ ವೇಳೆ ಹಲವು ಶಿವಸೇನೆ ಶಾಸಕರು ವಿಪ್ ಉಲ್ಲಂಘನೆ ಮಾಡಿದ್ದಾರೆ.

ಭಾನುವಾರ ಮಹಾರಾಷ್ಟ್ರ ವಿಧಾನಸಭೆ ವಿಶೇಷ ಅಧಿವೇಶನ ನಡೆಯಿತು. ಸ್ಪೀಕರ್ ಬಿಜೆಪಿಯ ಶಾಸಕ ರಾಹುಲ್ ನಾರ್ವೇಕರ್ ಆಯ್ಕೆಯಾದರು. ರಾಹುಲ್ 164 ಮತ ಪಡೆದರೆ, ಶಿವಸೇನೆಯ ಅಭ್ಯರ್ಥಿ ರಾಜನ್ ಸಾಲ್ವಿ 107 ಮತಗಳಿಸಿದರು.

Breaking; ಮಹಾರಾಷ್ಟ್ರದ ಸ್ಪೀಕರ್ ಆಗಿ ರಾಹುಲ್ ನಾರ್ವೇಕರ್ ಆಯ್ಕೆ Breaking; ಮಹಾರಾಷ್ಟ್ರದ ಸ್ಪೀಕರ್ ಆಗಿ ರಾಹುಲ್ ನಾರ್ವೇಕರ್ ಆಯ್ಕೆ

ಸ್ಪೀಕರ್ ಚುನಾವಣೆ ಬಳಿಕ ಮಾತನಾಡಿದ ಶಿವಸೇನೆಯ ಚೀಫ್ ವಿಪ್ ಸುನೀಲ್ ಪ್ರಭು, "ಪಕ್ಷದ ಕೆಲವು ಶಾಸಕರು ಸ್ಪೀಕರ್ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘನೆ ಮಾಡಿದ್ದಾರೆ. ಈ ಕುರಿತು ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ" ಎಂದರು.

Breaking; ಮುಂಬೈಗೆ ಬಂದ ರೆಬಲ್ ಶಾಸಕರು, ಸಿಎಂ & ಡಿಸಿಎಂ ಜೊತೆ ಸಭೆ Breaking; ಮುಂಬೈಗೆ ಬಂದ ರೆಬಲ್ ಶಾಸಕರು, ಸಿಎಂ & ಡಿಸಿಎಂ ಜೊತೆ ಸಭೆ

Maharashtra Speaker Election Some Shiv Sena MLAs Violates Whip

"ಪಕ್ಷದ ವಿಪ್ ಉಲ್ಲಂಘನೆ ಮಾಡಿದ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಮನವಿ ಮಾಡಲಾಗಿದೆ. 12 ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಸಲ್ಲಿಸಿರುವ ಅರ್ಜಿಯ ವಿಚಾರಣೆ ಇನ್ನೂ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ" ಎಂದು ಹೇಳಿದರು.

ಮಹಾರಾಷ್ಟ್ರ ರಾಜಕೀಯ: ಬಹುಮತ ಸಾಬೀತಿಗೆ ಸೋಮವಾರ ಮುಹೂರ್ತ ಫಿಕ್ಸ್ಮಹಾರಾಷ್ಟ್ರ ರಾಜಕೀಯ: ಬಹುಮತ ಸಾಬೀತಿಗೆ ಸೋಮವಾರ ಮುಹೂರ್ತ ಫಿಕ್ಸ್

ಸೋಮವಾರ ಮಹಾರಾಷ್ಟ್ರ ವಿಧಾನಸಭೆ ವಿಶೇಷ ಅಧಿವೇಶನ ನಡೆಯಲಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದದ ಸರ್ಕಾರ ಬಹುಮತ ಸಾಬೀತು ಮಾಡಬೇಕಿದೆ. ಬಿಜೆಪಿ, ಶಿವಸೇನೆ ಮೈತ್ರಿ ಸರ್ಕಾರಕ್ಕೆ ಎಷ್ಟು ಶಾಸಕರ ಬೆಂಬಲವಿದೆ? ಎಂದು ತಿಳಿಯಲಿದೆ.

ಸ್ಪೀಕರ್ ಆಯ್ಕೆಯಲ್ಲಿ 164 ಸದಸ್ಯರ ಬಲ ಸಿಕ್ಕಿದೆ. ಅಲ್ಲದೇ ಹಲವು ಶಿವಸೇನೆ ಶಾಸಕರು ವಿಪ್ ಉಲ್ಲಂಘನೆ ಮಾಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವೀಸ್ ಬಹುಮತಗಳಿಸುವ ನಿರೀಕ್ಷೆ ಇದೆ.

ಸಭೆ ಕರೆದ ಶರದ್ ಪವಾರ್; ಇನ್ನು ರಾಜ್ಯದ ಪ್ರತಿಪಕ್ಷ ಸ್ಥಾನವನ್ನು ಎನ್‌ಸಿಪಿ ಪಡೆದಿದೆ. ಪಕ್ಷದ ಮುಖ್ಯಸ್ಥ ಶರದ್ ಪವಾರ್ ವಿರೋಧ ಪಕ್ಷದ ನಾಯಕನ ಆಯ್ಕೆ, ವಿಶ್ವಾಸ ಮತದ ಸಂದರ್ಭದಲ್ಲಿ ಮತದಾನ ಮಾಡುವ ಕುರಿತು ಚರ್ಚಿಸಲು ಶಾಸಕರ ಸಭೆಯಲ್ಲಿ ಭಾನುವಾರ ಸಂಜೆ ಕರೆದಿದ್ದಾರೆ.

Recommended Video

Miss India ಪ್ರಶಸ್ತಿ ಗೆದ್ದ Sini Shetty ಯಾರು | *Entertainment | OneIndia Kannada

English summary
Shiv Sena chief whip Sunil Prabhu said that some party MLA's violated whip while voting in speaker election. A complaint has been filed with the presiding officer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X