ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾ ಯಡವಟ್ಟು; 72ರ ವೃದ್ಧನಿಗೆ ಮೊದಲು ಕೊವ್ಯಾಕ್ಸಿನ್, ನಂತರ ಕೊವಿಶೀಲ್ಡ್!

|
Google Oneindia Kannada News

ಮುಂಬೈ, ಮೇ 14: ಮಹಾರಾಷ್ಟ್ರದಲ್ಲಿ 72 ವರ್ಷದ ವೃದ್ಧನಿಗೆ ಕೊರೊನಾವೈರಸ್ ಸೋಂಕಿನ ಎರಡು ವಿಭಿನ್ನ ಲಸಿಕೆಯನ್ನು ನೀಡಲಾಗಿದೆ. ಎರಡು ಕಂಪನಿ ಲಸಿಕೆಯ ಸಮ್ಮಿಶ್ರಣ ಯಾವ ರೀತಿ ಅಡ್ಡ ಪರಿಣಾಮ ಬೀರಬಲ್ಲದು ಎನ್ನುವ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಕಳೆದ ಮಾರ್ಚ್ 22ರಂದು ಜಾಲ್ನಾ ಜಿಲ್ಲೆಯ ದತ್ತಾತ್ರೇಯ ವಾಗ್ಮೋರೆ ಅವರು ಮುಂಬೈನಿಂದ 420 ಕಿಲೋ ಮೀಟರ್ ದೂರದಲ್ಲಿ ಇರುವ ಗ್ರಾಮದಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಭಾರತ್ ಬಯೋಟೆಕ್ ಉತ್ಪಾದಿಸಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಂಡಿದ್ದರು.

ಮೇ ಅಂತ್ಯದ ತನಕ ಲಸಿಕೆ ಸಿಗಲ್ಲ; ಸುಪ್ರೀಂಗೆ 9 ರಾಜ್ಯಗಳ ಅಫಿಡೆವಿಟ್ಮೇ ಅಂತ್ಯದ ತನಕ ಲಸಿಕೆ ಸಿಗಲ್ಲ; ಸುಪ್ರೀಂಗೆ 9 ರಾಜ್ಯಗಳ ಅಫಿಡೆವಿಟ್

ಏಪ್ರಿಲ್ 30ರಂದು ಅದೇ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆದುಕೊಂಡರು. ಮೊದಲ ಬಾರಿ ಕೊವ್ಯಾಕ್ಸಿನ್ ಲಸಿಕೆ ಪಡೆದ ದತ್ತಾತ್ರೇಯ ಅವರಿಗೆ ಎರಡನೇ ಬಾರಿ ಅದರ್ ಪೂನಾವಾಲಾ ಅವರ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಲಸಿಕೆಯನ್ನು ನೀಡಲಾಯಿತು.

Maharashtra: Side Effects Found In 72-Year-Old Man After Getting 2 Different Coronavirus Vaccines

Recommended Video

ಟ್ರಂಪ್ ಕಟ್ಟಿದ್ದ ಗೋಡೆ ಕೆಡವಿ ಬಡವರ ಮನೆಗಳಿಗೆ 1 ಲಕ್ಷ ಕೊಟ್ಟ ಜೋ ಬಿಡೆನ್ | Oneindia Kannada

ಎರಡನೇ ಡೋಸ್ ಪಡೆದ ನಂತರ ಅಡ್ಡಪರಿಣಾಮ:
ತಮ್ಮ ತಂದೆಯವರು ಎರಡನೇ ಡೋಸ್ ಕೊವಿಡ್-19 ಲಸಿಕೆ ಪಡೆದುಕೊಂಡ ನಂತರದಲ್ಲಿ ಸ್ವಲ್ಪ ಮಟ್ಟಿನ ಜ್ವರ ಹಾಗೂ ದೇಹದ ವಿವಿಧ ಭಾಗಗಳಲ್ಲಿ ದದ್ದು ಕಾಣಿಸಿಕೊಂಡಿದೆ ಎಂದು ದತ್ತಾತ್ರೇಯ ಅವರ ಪುತ್ರ ದಿಗಂಬರ್ ಹೇಳಿದ್ದಾರೆ. ನಾವು ಅವರನ್ನು ಪಾರ್ಟೂರ್‌ನಲ್ಲಿರುವ ರಾಜ್ಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದ ಸಂದರ್ಭದಲ್ಲಿ ಕೆಲವು ಔಷಧಿಗಳನ್ನು ನೀಡಲಾಗಿತ್ತು. ಎರಡನೇ ಡೋಸ್ ಲಸಿಕೆ ಪಡೆದ ಕೆಲವು ದಿನಗಳ ನಂತರ ಪ್ರಮಾಣಪತ್ರವನ್ನು ವೀಕ್ಷಿಸಿದ ಸಂದರ್ಭದಲ್ಲಿ ಈ ಅಚಾತುರ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಮೊದಲ ಡೋಸ್ ಪಡೆದಾಗ ನೀಡಿರುವ ಪ್ರಮಾಣಪತ್ರದಲ್ಲಿ ಕೊವ್ಯಾಕ್ಸಿನ್ ಎಂದು ನಮೂದಿಸಲಾಗಿದ್ದು, ಎರಡನೇ ಡೋಸ್ ಪಡೆದ ಬಳಿಕ ನೀಡಿರುವ ಪ್ರಮಾಣಪತ್ರದಲ್ಲಿ ಕೊವಿಶೀಲ್ಡ್ ಎಂದು ನಮೂದಿಸಿರುವ ಬಗ್ಗೆ ದಿಗಂಬರ್ ಅವರು ತಿಳಿಸಿದ್ದಾರೆ.
ಆರೋಗ್ಯ ಅಧಿಕಾರಿಗಳ ವಿರುದ್ಧ ದೂರು:
ನಮ್ಮ ತಂದೆ ಅನಕ್ಷರಸ್ಥರಾಗಿದ್ದು ನಾನೂ ಕೂಡಾ ಅಷ್ಟಾಗಿ ಓದಿಕೊಂಡಿಲ್ಲ. ಒಂದು ರೀತಿ ಲಸಿಕೆಯ ವಿತರಣೆ ಆಗುವಂತೆ ನೋಡಿಕೊಳ್ಳುವುದು ಲಸಿಕಾ ಕೇಂದ್ರದಲ್ಲಿ ಇರುವ ಆರೋಗ್ಯ ಸಿಬ್ಬಂದಿಯ ಕರ್ತವ್ಯವಾಗಿರುತ್ತದೆ ಎಂದು ದಿಗಂಬರ್ ಹೇಳಿದ್ದಾರೆ. ಅಲ್ಲದೇ, ಸ್ಥಳೀಯ ಲಸಿಕೆ ಕೇಂದ್ರದ ಸಿಬ್ಬಂದಿ ವಿರುದ್ಧ ದೂರು ನೀಡಲಾಗಿದೆ.

English summary
Maharashtra: Side Effects Found In 72-Year-Old Man After Getting 2 Different Coronavirus Vaccines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X