ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ; ಮುಂಬೈನಲ್ಲೂ ಹೆಚ್ಚಿದ ಹೊಸ ಕೊರೊನಾ ಪ್ರಕರಣ

|
Google Oneindia Kannada News

ಮುಂಬೈ, ಏಪ್ರಿಲ್ 13; ಮಹಾರಾಷ್ಟ್ರದಲ್ಲಿ ಸೋಮವಾರ 51,751 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜ್ಯದ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 34,58,996ಕ್ಕೆ ಏರಿಕೆಯಾಗಿದೆ ಎಂದು ರಾಜ್ಯದ ಆರೋಗ್ಯ ಇಲಾಖೆ ಹೇಳಿದೆ.

ರಾಜ್ಯದಲ್ಲಿ ಭಾನುವಾರ 63,294 ಹೊಸ ಪ್ರಕರಣ ದಾಖಲಾಗಿತ್ತು. ರಾಜ್ಯದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 5,64,746ಕ್ಕೆ ಏರಿಕೆಯಾಗಿದೆ. ಒಟ್ಟು ಸಾವನ್ನಪ್ಪಿದರ ಸಂಖ್ಯೆ 58,245.

ರಾಮನಗರ; ಕೋವಿಡ್ ಸೋಂಕಿತರ ಚಿಕಿತ್ಸೆಗೆ 600 ಹಾಸಿಗೆ ಮೀಸಲು ರಾಮನಗರ; ಕೋವಿಡ್ ಸೋಂಕಿತರ ಚಿಕಿತ್ಸೆಗೆ 600 ಹಾಸಿಗೆ ಮೀಸಲು

ರಾಜ್ಯದಲ್ಲಿ 32,75,224 ಜನರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. 29,399 ಜನರು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ. ಗುಣಮುಖರಾಗುವವರ ಪ್ರಮಾಣ ಶೇ 81.94 ಮತ್ತು ಮರಣ ಪ್ರಮಾಣ ಶೇ 1.68ರಷ್ಟಿದೆ.

ಕೋವಿಡ್-19 ಭೀತಿ: ಅಹಮದಾಬಾದ್-ಮುಂಬೈ ನಡುವಿನ ತೇಜಸ್ ಎಕ್ಸ್‌ಪ್ರೆಸ್ ಸೇವೆ ಸ್ಥಗಿತ ಕೋವಿಡ್-19 ಭೀತಿ: ಅಹಮದಾಬಾದ್-ಮುಂಬೈ ನಡುವಿನ ತೇಜಸ್ ಎಕ್ಸ್‌ಪ್ರೆಸ್ ಸೇವೆ ಸ್ಥಗಿತ

Maharashtra Sees Jump InNew Covid Cases Reserves All Oxygen Stock For Medical Use

ಮುಂಬೈ ನಗರದಲ್ಲಿ ಸೋಮವಾರ 6,905 ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟು 43 ಜನರು ಮೃತಪಟ್ಟಿದ್ದಾರೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 5,27,119ಕ್ಕೆ ಏರಿಕೆಯಾಗಿದೆ. ಒಟ್ಟು ಮೃತಪಟ್ಟವರು 12,060ಕ್ಕೆ ಏರಿಕೆಯಾಗಿದೆ.

ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮುಂಬೈ ಪಾಲಿಕೆಯ ಹೊಸ ಮಾರ್ಗಸೂಚಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮುಂಬೈ ಪಾಲಿಕೆಯ ಹೊಸ ಮಾರ್ಗಸೂಚಿ

ಏಪ್ರಿಲ್ ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ಮುಂಬೈ ನಗರದಲ್ಲಿ ಒಂದೇ ದಿನ 8 ಸಾವಿರಕ್ಕಿಂತ ಕಡಿಮೆ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಏಪ್ರಿಲ್ 1ರಂದು 8,646 ಮತ್ತು ಏಪ್ರಿಲ್ 4ರಂದು 11,163 ಹೊಸ ಪ್ರಕರಣ ದಾಖಲಾಗಿತ್ತು.

ಬಿಎಂಸಿ ನಗರದಲ್ಲಿ 39,398 ಮಾದರಿಗಳ ಪರೀಕ್ಷೆಗಳನ್ನು ಒಂದು ದಿನದಲ್ಲಿ ನಡೆಸಿದೆ. 9037 ಜನರು ಗುಣಮುಖಗೊಂಡು ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ನಗರದಲ್ಲಿ ಗುಣಮುಖರಾದವರ ಸಂಖ್ಯೆ 4,23,678.

ಮಹಾರಾಷ್ಟ್ರ ರಾಜ್ಯದಲ್ಲಿ ಪ್ರತಿದಿನ ಒಟ್ಟು 1200 ಮೆಟ್ರಿಕ್ ಟನ್‌ಗಳಷ್ಟು ಆಮ್ಲಜನಕ ಉತ್ಪಾದನೆಯಾಗುತ್ತದೆ. ಕೋವಿಡ್ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ಎಲ್ಲಾ ದಸ್ತಾನು ವೈದ್ಯಕೀಯ ಉದ್ದೇಶಕ್ಕೆ ಬಳಕೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ರಾಜ್ಯಕ್ಕೆ ಪ್ರತಿ ತಿಂಗಳು 1.60 ಕೋಟಿ ಡೋಸ್ ಕೋವಿಡ್ ವ್ಯಾಕ್ಸಿನ್ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆರೋಗ್ಯ ಸಚಿವ ರಾಜೇಶ್ ತೋಪೆ ಮನವಿಯನ್ನು ಮಾಡಿದ್ದಾರೆ.

English summary
Maharashtra on reported 51,751 fresh Coronavirus positive cases. 1,200 metric tonnes of oxygen is being used for medical purposes in view of the rising COVID-19 cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X