ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಮೊದಲ "ಮಕ್ಕಳ ಸ್ನೇಹಿ" ಪೊಲೀಸ್ ಠಾಣೆ

|
Google Oneindia Kannada News

ಪುಣೆ, ಡಿಸೆಂಬರ್.01: ಮಹಾರಾಷ್ಟ್ರದ ಪುಣೆಯಲ್ಲಿ ಮೊದಲ ಮಕ್ಕಳ ಸ್ನೇಹಿ ಪೊಲೀಸ್ ಠಾಣೆಗೆ ಚಾಲನೆ ನೀಡಲಾಗಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾರ್ಗಸೂಚಿಗಳ ಅಡಿಯಲ್ಲಿ ನೂತನ ಪೊಲೀಸ್ ಠಾಣೆಯಲ್ಲಿ ತೆರೆಯಲಾಗಿದೆ.

ಲಷ್ಕರ್ ಪೊಲೀಸ್ ಠಾಣೆ ಆವರದಲ್ಲಿ ಆರಂಭಿಸಲಾಗಿರುವ ನೂತನ ಮಕ್ಕಳ ಸ್ನೇಹಿ ಪೊಲೀಸ್ ಠಾಣೆಯನ್ನು ಕಾನ್ಫುರ್ ಐಐಟಿ ನಿರ್ದೇಶಕ ಡಾ. ಅಭಯ್ ಕರಂದಿಕರ್ ಉದ್ಘಾಟಿಸಿದರು. ಬಾಲಾಪರಾಧ ಮತ್ತು ಮಕ್ಕಳ ಮನಃಪರಿವರ್ತನೆಗೆ ಇದೊಂದು ವಿನೂತನ ಪರಿಕಲ್ಪನೆಯಾಗಿದೆ ಎಂದು ಹೇಳಿದರು.

ಮದ್ವೆಯಾಗುವುದಾಗಿ ನಂಬಿಸಿ ಮೋಸ, ನಿರ್ದೇಶಕನ ಮೇಲೆ ಎಫ್ಐಆರ್ಮದ್ವೆಯಾಗುವುದಾಗಿ ನಂಬಿಸಿ ಮೋಸ, ನಿರ್ದೇಶಕನ ಮೇಲೆ ಎಫ್ಐಆರ್

ಪುಟ್ಟ ಮಕ್ಕಳ ಅಪರಾಧ, ಸಂಘರ್ಷ ಮತ್ತು ಜಗಳದಲ್ಲಿ ಶಿಕ್ಷೆಗೆ ಗುರಿಯಾದ ಮಕ್ಕಳಿಗೆ ಸ್ನೇಹಪರ ವಾತಾವರಣವನ್ನು ಸೃಷ್ಟಿಸುವ ಉದ್ದೇಶದಿಂದ ಈ ಮಕ್ಕಳ ಸ್ನೇಹಿ ಪೊಲೀಸ್ ಠಾಣೆ ಕಾರ್ಯ ನಿರ್ವಹಿಸಲಿದೆ. ಚಿಲ್ಡ್ರನ್ಸ್ ಫೌಂಡೇಶನ್ ಕಾರ್ಯದಲ್ಲಿ ಹೊಸ ಭರವಸೆಯೊಂದಿಗೆ ಕೈಜೋಡಿಸಿದ ಪುಣೆ ಪೊಲೀಸರಿಗೂ ಕೂಡಾ ಧನ್ಯವಾದಗಳು ಎಂದು ತಿಳಿಸಿದ್ದಾರೆ.

Maharashtra’s First Child-Friendly Police Station Launched In Pune

ಮಾದರಿ ಎನಿಸಿರುವ ಮಕ್ಕಳ ಸ್ನೇಹಿ ಠಾಣೆ:

ಮಹಾರಾಷ್ಟ್ರದಲ್ಲಿ ಮೊದಲು ಆರಂಭವಾಗಿರುವ ಈ ವಿನೂತನ ಪರಿಕಲ್ಪನೆಯ ಮಕ್ಕಳ ಸ್ನೇಹಿ ಪೊಲೀಸ್ ಠಾಣೆಯು ಮಾದರಿ ಎನಿಸಿದೆ. ಪುಣೆಯಲ್ಲಿ ಆರಂಭವಾಗಿರುವ ಮಕ್ಕಳ ಸ್ನೇಹಿ ಪೊಲೀಸ್ ಠಾಣೆಯು ಯಶಸ್ವಿ ಎಂದು ಎನಿಸಿದ್ದಲ್ಲಿ ರಾಜ್ಯದ ಇತರೆ ಕಡೆಗಳಲ್ಲಿ ಇದೇ ರೀತಿಯ ಠಾಣೆಗಳನ್ನು ಆರಂಭಿಸುವುದಕ್ಕೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಪುಣೆ ಪೊಲೀಸ್ ಆಯುಕ್ತ ಅಮಿತಾಬ್ ಗುಪ್ತಾ ಹೇಳಿದ್ದಾರೆ.

English summary
Maharashtra’s First Child-Friendly Police Station Launched In Pune. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X