ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಒಂದೇ ದಿನ 2,361 ಕೇಸ್, ಒಟ್ಟು ಸೋಂಕು 70 ಸಾವಿರ

|
Google Oneindia Kannada News

ಮುಂಬೈ, ಜೂನ್ 1: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 70 ಸಾವಿರ ಗಡಿದಾಟಿದೆ. ಇಂದು ಒಂದೇ ದಿನ ಮಹಾರಾಜ್ಯದಲ್ಲಿ 2,361 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 70,013ಕ್ಕೆ ಜಿಗಿದಿದೆ.

24 ಗಂಟೆಯಲ್ಲಿ 76 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದುವರೆಗೂ ಮಹಾರಾಷ್ಟ್ರದಲ್ಲಿ 2362 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಪ್ರಸ್ತುತ ಮಹಾರಾಷ್ಟ್ರದಲ್ಲಿ 36 ಸಾವಿರ ಕೇಸ್‌ಗಳು ಸಕ್ರಿಯವಾಗಿದೆ. 29 ಸಾವಿರಕ್ಕೂ ಅಧಿಕ ಜನರು ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ: ಯಾವ ಜಿಲ್ಲೆಯಲ್ಲಿ ಹೆಚ್ಚು ಕೇಸ್, ಹೆಚ್ಚು ಸಾವು?ಕರ್ನಾಟಕದಲ್ಲಿ ಕೊರೊನಾ: ಯಾವ ಜಿಲ್ಲೆಯಲ್ಲಿ ಹೆಚ್ಚು ಕೇಸ್, ಹೆಚ್ಚು ಸಾವು?

ಧಾರವಿ ಸ್ಲಂನಲ್ಲಿ ಇಂದು 34 ಕೊವಿಡ್ ಸೋಂಕು ಪತ್ತೆಯಾಗಿದೆ. ಇದುವರೆಗೂ ಧಾರವಿಯಲ್ಲಿ 1805 ಜನರಿಗೆ ಕೊರೊನಾ ಖಚಿತವಾಗಿದೆ. ದೇಶದ ಪ್ರಮುಖ ರಾಜ್ಯಗಳಲ್ಲಿ ಇಂದು ಎಷ್ಟು ಕೇಸ್ ವರದಿಯಾಗಿದೆ. ಮುಂದೆ ಓದಿ...

ತಮಿಳುನಾಡಿನಲ್ಲಿ 1,162 ಕೇಸ್

ತಮಿಳುನಾಡಿನಲ್ಲಿ 1,162 ಕೇಸ್

ತಮಿಳುನಾಡಿನಲ್ಲಿ ಕೊರೊನಾ ವೈರಸ್ ಸೋಂಕಿಗೆ 11 ಮಂದಿ ಪ್ರಾಣ ಬಿಟ್ಟಿದ್ದು, ಇಂದು ಒಂದೇ ದಿನ 1,162 ಮಂದಿಗೆ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 23,495ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 10,138 ಪ್ರಕರಣಗಳು ಸಕ್ರಿಯವಾಗಿದೆ. 13,170 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಎಷ್ಟು ಕೇಸ್?

ರಾಷ್ಟ್ರ ರಾಜಧಾನಿಯಲ್ಲಿ ಎಷ್ಟು ಕೇಸ್?

ದೆಹಲಿಯಲ್ಲಿ ಹೊಸದಾಗಿ 990 ಜನರಿಗೆ ಕೊರೊನಾ ವೈರಸ್ ದೃಢವಾಗಿದೆ. ರಾಷ್ಟ್ರರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 20,834ಕ್ಕೆ ಏರಿಕೆಯಾಗಿದೆ. ಪ್ರಸ್ತುತ ದೆಹಲಿಯಲ್ಲಿ 11,565 ಕೇಸ್ ಸಕ್ರಿಯವಾಗಿದೆ. 8746 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಕೇರಳದಲ್ಲಿ ಎಷ್ಟು ಕೇಸ್?

ಕೇರಳದಲ್ಲಿ ಎಷ್ಟು ಕೇಸ್?

ಕೇರಳದಲ್ಲಿ 57 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ 1327ಕ್ಕೆ ಏರಿಕೆಯಾಗಿದೆ. 708 ಜನರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. 608 ಜನರು ಗುಣಮುಖರಾಗಿದ್ದಾರೆ. 11 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಕರ್ನಾಟಕದಲ್ಲಿ ಎಷ್ಟು ಕೇಸ್?

ಕರ್ನಾಟಕದಲ್ಲಿ ಎಷ್ಟು ಕೇಸ್?

ಕರ್ನಾಟಕದಲ್ಲಿ ಇಂದು ಹೊಸದಾಗಿ 187 ಜನರಿಗೆ ಕೊರೊನಾ ವೈರಸ್ ಸೋಂಕು ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3408ಕ್ಕೆ ಏರಿಕೆಯಾಗಿದೆ. ಇಂದು ವರದಿಯಾದ ಕೇಸ್‌ಗಳ ಪೈಕಿ ಬೆಂಗಳೂರಿನಲ್ಲಿ 28 ಜನರಿಗೆ ಸೋಂಕು, ಕಲಬುರಗಿಯಲ್ಲಿ 24 ಮಂದಿ, ಮಂಡ್ಯದಲ್ಲಿ 15 ಜನರಿಗೆ, ಉಡುಪಿಯಲ್ಲಿ 73 ಮಂದಿ, ಹಾಸನದಲ್ಲಿ 16 ಜನರಿಗೆ ಸೋಂಕು ತಗುಲಿದೆ.

English summary
Maharashtra's COVID19 case count rises to 70,013 with 76 deaths & 2361 new cases reported today; total death toll 2362: State Health Department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X