ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದ ಕೊರೊನಾ ಏರಿಕೆ: ಮುಂಬೈಯಲ್ಲಿ ಹೆಚ್ಚು ಸೋಂಕಿತರು ಪತ್ತೆ

|
Google Oneindia Kannada News

ಕೊರೊನಾ ನಮ್ಮನ್ನು ಬಿಟ್ಟು ಶಾಶ್ವತವಾಗಿ ದೂರವಾಗುವಂತ ಲಕ್ಷಣಗಳು ಕಾಣಿಸುತ್ತಿಲ್ಲ. ಯಾಕೆಂದರೆ ಇತ್ತೀಚೆಗೆ ಮತ್ತೆ ಕೊರೊನಾ ಹಾವಳಿ ಹೆಚ್ಚಾಗಿದೆ. ಮಹಾರಾಷ್ಟ್ರ ಭಾನುವಾರ 6,493 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, ಐದು ಸಾವುಗಳನ್ನು ವರದಿಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಸೂಚಿಸಿದ ಡೇಟಾ ಸೂಚಿಸಿದೆ. ಜೊತೆಗೆ ವರದಿಯಾದ ಎಲ್ಲಾ ಸಾವುಗಳು ಮುಂಬೈನಲ್ಲಿ ಸಂಭವಿಸಿವೆ.

ಹೊಸ ಪ್ರಕರಣಗಳೊಂದಿಗೆ, ಕೊರೊನವೈರಸ್ ಸೋಂಕಿನ ಒಟ್ಟು ಸಂಖ್ಯೆ 79,62,666 ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 1,47,905 ಕ್ಕೆ ತಲುಪಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶನಿವಾರದಂದು ಐಸಿಎಂಆರ್ ಪೋರ್ಟಲ್‌ನಲ್ಲಿನ ದೋಷದಿಂದಾಗಿ ಪಟ್ಟಿ ಮಾಡಲು ಸಾಧ್ಯವಾಗದ ಪ್ರಕರಣಗಳನ್ನು ಸಹ ದಿನದ ಲೆಕ್ಕಾಚಾರಕ್ಕೆ ಸೇರಿಸಲಾಗಿದೆ. ಈ ಕಾರಣದಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,493 ರಷ್ಟು ಹೆಚ್ಚಾಗಿದೆ. ಸದ್ಯ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 24,608 ಆಗಿದೆ. ಇಲ್ಲಿಯವರೆಗೆ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 77,90,153 ಆಗಿದೆ.

 Maharashtras covid increase: most infected in Mumbai

ಇನ್ನೂ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಉಪ-ವ್ಯತ್ಯಯ ಪ್ರಕರಣಗಳು ದಾಖಲಾಗಿವೆ. ಪುಣೆಯ BJ ವೈದ್ಯಕೀಯ ಕಾಲೇಜಿನ ಇತ್ತೀಚಿನ ವರದಿಯು ಮುಂಬೈನಲ್ಲಿ BA.5 ನ ಮೂವರು ಮತ್ತು BA.4 ಉಪ-ವೇರಿಯಂಟ್‌ನ ಇಬ್ಬರು ರೋಗಿಗಳು ಕಂಡುಬಂದಿದೆ ಎಂದು ಹೇಳಿದೆ. ಎಲ್ಲಾ ಮಾದರಿಗಳನ್ನು ಜೂನ್ 10-20 ಅವಧಿಯಲ್ಲಿ ಸಂಗ್ರಹಿಸಲಾಗಿದೆ. ಇದರೊಂದಿಗೆ ಬಿಎ.4 ಮತ್ತು ಬಿಎ.5 ಪ್ರಕರಣಗಳ ಸಂಖ್ಯೆ 54ಕ್ಕೆ ಏರಿದೆ.

ಮುಂಬೈನ ಅಂಕಿಅಂಶಗಳು

ಮುಂಬೈನಲ್ಲಿ 2,771 ಪ್ರಕರಣಗಳು ಮತ್ತು ಐದು ಸಾವುಗಳು ವರದಿಯಾಗಿದ್ದು, ಇದು 11,07,449 ಕ್ಕೆ ಮತ್ತು ಸಾವಿನ ಸಂಖ್ಯೆ 19,599 ಕ್ಕೆ ತಲುಪಿದೆ.

 Maharashtras covid increase: most infected in Mumbai

ಮುಂಬೈ ಪ್ರದೇಶದಲ್ಲಿ 4,804 ಪ್ರಕರಣಗಳು ವರದಿಯಾಗಿದ್ದು, ಪುಣೆ ವಿಭಾಗದಲ್ಲಿ 1,060, ನಾಸಿಕ್ ಪ್ರದೇಶದಲ್ಲಿ 150, ಕೊಲ್ಲಾಪುರ ವಿಭಾಗ 102, ಔರಂಗಾಬಾದ್ 52, ಲಾತೂರ್ 63, ಅಂಕೋಲಾ 79 ಮತ್ತು ನಾಗ್ಪುರ 183 ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಿದೆ.

Recommended Video

ಒಳ್ಳೆ ಪ್ರದರ್ಶನ ಕೊಡು , ಆಮೇಲೆ ನೋಡೋನ ! ಖಡಕ್ ಎಚ್ಚರಿಕೆ ಕೊಟ್ಟ ಬಿಸಿಸಿಐ | *Cricket | OneIndia Kannada

ಮಹಾರಾಷ್ಟ್ರದ COVID-19 ಅಂಕಿಅಂಶಗಳು ಇಂತಿವೆ: ಹೊಸ ಪ್ರಕರಣಗಳು 6,493, ಒಟ್ಟು ಪ್ರಕರಣಗಳು 79,62,666, ಸಾವಿನ ಸಂಖ್ಯೆ 1,47,905, ಸಕ್ರಿಯ ಪ್ರಕರಣಗಳು 24,608, ಒಟ್ಟು ಪರೀಕ್ಷೆಗಳು 8,18,52,653 ನಡೆದಿವೆ.

English summary
According to statistics from the state health department, 6,493 new Kovid-19 cases were reported in Maharashtra on Sunday, with five deaths reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X