ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಮೊದಲ ಝಿಕಾ ವೈರಸ್‌ ಪ್ರಕರಣ ಪತ್ತೆ

|
Google Oneindia Kannada News

ಪುಣೆ, ಆ.01: ಮಹಾರಾಷ್ಟ್ರದಲ್ಲಿ ಝಿಕಾ ವೈರಸ್‌ ಸೋಂಕಿನ ಮೊದಲ ಪ್ರಕರಣವು ಪುಣೆ ಜಿಲ್ಲೆಯ ಪುರಂದರ್ ತಹಸಿಲ್‌ನಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಪುರಂದರ ತಹಸಿಲ್‌ನ ಬೆಲ್ಸರ್ ಹಳ್ಳಿಯ 50 ವರ್ಷದ ಮಹಿಳೆ ಜುಲೈ ಮಧ್ಯದಲ್ಲಿ ಜ್ವರದಿಂದ ಬಳಲುತ್ತಿದ್ದರು. ಬಳಿಕ ಝಿಕಾ ವೈರಸ್‌ನ ಪರೀಕ್ಷೆ ನಡೆಸಿದಾಗ ಆಕೆಯಲ್ಲಿ ಝಿಕಾ ವೈರಸ್‌ ಇರುವುದು ದೃಢಪಟ್ಟಿದೆ ಎಂದು ವರದಿ ತಿಳಿಸಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (NIV) ಜುಲೈ 30 ರಂದು ನಡೆಸಿದ ಪರೀಕ್ಷೆಯಲ್ಲಿ ಮಹಿಳೆಯಲ್ಲಿ ಚಿಕೂನ್ ಗುನ್ಯಾ ಕೂಡಾ ಪತ್ತೆಯಾಗಿದೆ.

ಈ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ ಆರ್‌ಟಿಪಿಸಿಆರ್ ನೆಗೆಟಿವ್‌ ವರದಿ ಕಡ್ಡಾಯಈ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ ಆರ್‌ಟಿಪಿಸಿಆರ್ ನೆಗೆಟಿವ್‌ ವರದಿ ಕಡ್ಡಾಯ

"ಝಿಕಾ ಒಂದು ಸೊಳ್ಳೆಯಿಂದ ಹರಡುವ ರೋಗವಾಗಿದೆ. ರಾಜ್ಯದಲ್ಲಿ ಮೊದಲ ಝಿಕಾ ವೈರಸ್‌ ಪ್ರಕರಣ ಪತ್ತೆಯಾದ ಹಿನ್ನೆಲೆ ಈಗ ನಿಗಾ ಹೆಚ್ಚಿಸಲಾಗಿದೆ. ರೋಗದ ಗುಣಲಕ್ಷಣಗಳು ಸೌಮ್ಯವಾಗಿದೆ," ಎಂದು ರಾಜ್ಯ ಕಣ್ಗಾವಲು ಅಧಿಕಾರಿ ಡಾ.ಪ್ರದೀಪ್ ಅವಟೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

Maharashtra Reports First Ever Zika Virus Case In Pune District

ಕುಟುಂಬದಲ್ಲಿನ ಮೂವರು ಸದಸ್ಯರಲ್ಲಿ, ಮಹಿಳೆಗೆ ಝಿಕಾ ಮತ್ತು ಚಿಕೂನ್ ಗುನ್ಯಾ ಸಹ ಸೋಂಕು ತಗುಲಿದೆ. ಆಕೆಯ ಮಗಳಿಗೆ ಚಿಕೂನ್ ಗುನ್ಯಾ ಜ್ವರವಿದ್ದು, ಆಕೆಯ ಮಗನಿಗೆ ಯಾವುದೇ ಸೋಂಕು ಇರಲಿಲ್ಲ. ಆದರೆ ಒಂದೇ ಕುಟುಂಬದ ಮೂವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಡಾ ಅವಟೆ ಹೇಳಿದರು.

"ರೋಗದ ಸಾಮಾನ್ಯ ಲಕ್ಷಣಗಳು ದೇಹದ ನೋವು, ಕಣ್ಣಿನಲ್ಲಿ ನೋವು, ಕಣ್ಣಿನ ಹಿಂಭಾಗದಲ್ಲಿ ನೋವು ಮತ್ತು ಚರ್ಮದಲ್ಲಿ ರ್‍ಯಾಷಸ್‌ಗಳು ಕಾಣಿಸಿಕೊಳ್ಳುವುದು ಆಗಿದೆ. ಮಹಿಳೆಯು ಜುಲೈ 15 ರಿಂದ ಝಿಕಾ ವೈರಸ್‌ ರೋಗಲಕ್ಷಣಗಳನ್ನು ಹೊಂದಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯ ಮಾದರಿಯನ್ನು ಪರೀಕ್ಷೆ ನಡೆಸಿದಾಗ ಆಕೆಯಲ್ಲಿ ಝಿಕಾ ವೈರಸ್ ಮತ್ತು ಚಿಕೂನ್ ಗುನ್ಯಾ ಸೋಂಕು ಇರುವುದು ಜುಲೈ 30 ರಂದು ತಿಳಿದು ಬಂದಿದೆ," ಎಂದು ಡಾ. ಅವಟೆ ಮಾಹಿತಿ ನೀಡಿದರು.

ಕೇರಳದಲ್ಲಿ ಝಿಕಾ ವೈರಸ್ ಆತಂಕ; ಎಲ್ಲೆಡೆ ಕಟ್ಟುನಿಟ್ಟಿನ ಕ್ರಮಕೇರಳದಲ್ಲಿ ಝಿಕಾ ವೈರಸ್ ಆತಂಕ; ಎಲ್ಲೆಡೆ ಕಟ್ಟುನಿಟ್ಟಿನ ಕ್ರಮ

ಎಚ್ಚರಿಕೆಯ ಭಾಗವಾಗಿ, ಜ್ವರ ಹೊಂದಿರುವ ಮತ್ತು ಬೆಲ್ಸಾರ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರದಿ ಮಾಡಿದ ಹಳ್ಳಿಯ ನಿವಾಸಿಗಳ ಮಾದರಿಗಳನ್ನು ಪುಣೆಯಲ್ಲಿರುವ NIV ಗೆ ಕಳುಹಿಸಲಾಗಿದೆ. ಆರಂಭದಲ್ಲಿ, ಐದು ಮಾದರಿಗಳನ್ನು ಜುಲೈ 16 ರಂದು ಕಳುಹಿಸಲಾಯಿತು, ಅದರಲ್ಲಿ ಮೂವರಲ್ಲಿ ಚಿಕನ್‌ ಗುನ್ಯಾ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

Maharashtra Reports First Ever Zika Virus Case In Pune District

ಎಚ್ಚರಿಕೆಯಿಂದಿರಬೇಕು ಗರ್ಭಿಣಿಯರು

"ವಿಜ್ಞಾನಿ ಡಾ ಯೋಗೀಶ್ ಗುರವ್ ಮಾರ್ಗದರ್ಶನದಲ್ಲಿ ಎನ್ಐವಿ ತಂಡವು ಗ್ರಾಮಕ್ಕೆ ಭೇಟಿ ನೀಡಿ ಬೆಲ್ಸರ್ ಮತ್ತು ಪರಿಂಚೆ ಗ್ರಾಮಗಳಿಂದ 41 ಮಾದರಿಗಳನ್ನು ಸಂಗ್ರಹಿಸಿದೆ. ಈ ಪೈಕಿ 25 ಮಂದಿಯಲ್ಲಿ ಚಿಕುನ್ ಗುನ್ಯಾ ದೃಢಪಟ್ಟಿದ್ದರೆ, ಮೂವರು ರೋಗಿಗಳಲ್ಲಿ ಡೆಂಗ್ಯೂ ದೃಢಪಟ್ಟಿದೆ," ಎಂದು ರಾಜ್ಯ ಅವಲೋಕನ ಇಲಾಖೆ ತಂಡದೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದ ಡಾ.ಪ್ರದೀಪ್ ಅವಟೆ ತಿಳಿಸಿದ್ದಾರೆ.

ಕೊರೊನಾಗಿಂತ ಝಿಕಾ ವೈರಸ್ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ ಎಂದ ತಜ್ಞರುಕೊರೊನಾಗಿಂತ ಝಿಕಾ ವೈರಸ್ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ ಎಂದ ತಜ್ಞರು

"ಬೆಲ್ಸರ್ ಗ್ರಾಮದ 5 ಕಿಮೀ ವ್ಯಾಪ್ತಿಯಲ್ಲಿರುವ ಏಳು ಗ್ರಾಮಗಳಲ್ಲಿ ಜ್ವರ ಪ್ರಕರಣಗಳ ಕಣ್ಗಾವಲಿನಂತಹ ತಕ್ಷಣದ ಕ್ರಮಗಳನ್ನು ನಾವು ತೆಗೆದುಕೊಂಡಿದ್ದೇವೆ, ಅಲ್ಲಿನ ಮಹಿಳೆಗೆ ಝಿಕಾ ವೈರಸ್ ಸೋಂಕು ಪತ್ತೆಯಾಗಿದೆ. ಈಡೀಸ್ ಈಜಿಪ್ಟಿ ಸೊಳ್ಳೆಯಿಂದಲೂ ಸೋಂಕು ಉಂಟಾಗುತ್ತದೆ, ಇದು ಡೆಂಗ್ಯೂ ಮತ್ತು ಚಿಕೂನ್ ಗುನ್ಯಕ್ಕೂ ಕಾರಣವಾಗುತ್ತದೆ. ಇನ್ನು ಗರ್ಭಿಣಿಯರಿಗೆ ಈ ಝಿಕಾ ವೈರಸ್‌ ಸೋಂಕು ತಗುಲಿದರೆ ಗರ್ಭಪಾತವಾಗುವ ಅಪಾಯವಿರುವುದರಿಂದ ಈಗಾಗಲೇ ಗರ್ಭಿಣಿಯರಿಗೆ ವಿಶೇಷವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ನಾವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದೇವೆ," ಎಂದು ಡಾ ಅವಟೆ ಹೇಳಿದರು.

Maharashtra Reports First Ever Zika Virus Case In Pune District

ಜನರು ಆತಂಕಕ್ಕೆ ಒಳಗಾಗಬೇಡಿ

ಈ ನಡುವೆ ಪುಣೆ ಜಿಲ್ಲಾಡಳಿತವು ಝಿಕಾ ವೈರಸ್‌ ಸೋಂಕಿನ ಕಾರಣದಿಂದಾಗಿ ಜನರು ಯಾರೂ ಆತಂಕಕ್ಕೆ ಒಳಗಾಗಬೇಡಿ ಎಂದು ಮನವಿ ಮಾಡಿದ್ದಾರೆ. "ಕ್ಷೇತ್ರ ತಂಡಗಳ ಪೂರ್ವಭಾವಿ ಕೆಲಸದಿಂದಾಗಿ ಪ್ರಕರಣ ಪತ್ತೆಯಾಗಿದೆ. ಹರಡುವಿಕೆಯನ್ನು ನಿಯಂತ್ರಿಸಲು ಮತ್ತು ನಮ್ಮ ನಿವಾಸಿಗಳಿಗೆ ಉತ್ತಮ ಆರೋಗ್ಯ ಸೇವೆ ಲಭ್ಯವಾಗುವಂತೆ ಮಾಡಲು ನಾವು ಶ್ರಮಿಸುತ್ತಿದ್ದೇವೆ. ಜನರು ಆತಂಕಕ್ಕೆ ಒಳಗಾಗುವುದು ಬೇಡ," ಎಂದು ಜಿಲ್ಲಾ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಜ್ಞರ ಪ್ರಕಾರ, ಝಿಕಾ ವೈರಸ್ ಸೋಂಕಿನ ಲಕ್ಷಣಗಳು ಕಂಡುಬಂದಾಗ, ಒಬ್ಬ ವ್ಯಕ್ತಿಯು ಸೋಂಕಿತ ಸೊಳ್ಳೆಯಿಂದ ಕಚ್ಚಿದ ಎರಡರಿಂದ 14 ದಿನಗಳ ನಂತರ ಅವುಗಳ ಲಕ್ಷಣಗಳು ಸಾಮಾನ್ಯವಾಗಿ ಆರಂಭವಾಗುತ್ತವೆ. ರೋಗಲಕ್ಷಣಗಳು ಸಾಮಾನ್ಯವಾಗಿ ಒಂದು ವಾರದವರೆಗೆ ಇರುತ್ತದೆ ಮತ್ತು ಹೆಚ್ಚಿನ ಜನರು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ.

ಈ ಸೋಂಕು ಪ್ರಕರಣವು ಮೊದಲ ಬಾರಿಗೆ ಕೇರಳದಲ್ಲಿ ಪತ್ತೆಯಾಗಿದೆ. ಈಗ ಈ ಝಿಕಾ ಪ್ರಕರಣಗಳು ಹೆಚ್ಚುತ್ತಲ್ಲಿದೆ.

(ಒನ್‌ಇಂಡಿಯಾ ಸುದ್ದಿ)

English summary
The first case of Zika virus infection in Maharashtra has been reported from Purandar tehsil in Pune district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X